ಶ್ರೀ ಸಾಯಿ ಬಾಬಾರವರ ಆರನೇ ವರ್ಧಂತಿ ಉತ್ಸವ

0
15
loading...

ಜಮಖಂಡಿ: ನಗರದ ಐತಿಹಾಸಿಕ ಮೂಧೋಳ ರೋಡಿನ ಗುಡ್ಡದ ಮೇಲೆ ಆರು ವರ್ಷಗಳಿಂದ ಹಿಂದೆ ಸ್ಥಾಪಿತಗೊಂಡ ಶಿರಡಿ ಸಾಯಿಬಾಬಾ ಮಂದಿರದ ವರ್ಧಂತಿ ಉತ್ಸವ ಅತಿ ಸಂಭೃಮದಿಂದ ಜರುಗಿತು.

ದಿನಾಂಕ 10ರಂದು ಮುಂಜಾನೆ ಸಾಯಿ ಸುಪ್ರಭಾತದೊಂದಿಗೆ ಕಾಕಡಾರತಿ ಜರುಗಿತು ನಂತರ ಸಾಯಿಬಾಬಾ ಅವರ ಅಮೃತ ಶಿಲೆಯ ಪ್ರತಿಮೆಗೆ ಕ್ಷೀರಾಭಿಷೆಕ ಜರುಗಿತು ತದನಂತರ ನಗರದ ದತ್ತಾತ್ರೆಯ ಗುಡಿಯಿಂದ ಶ್ರೀ ದತ್ತಾತ್ರೆಯ ಭಾವಚಿತ್ರ ಮೇರವಣಿಗೆ ಅದ್ದೂರಿಯಾಗಿ ಜರುಗಿತು.

ಅಂದು ಮಧ್ಯಾನ್ಹ ಜರುಗಿದ ವರ್ಣರಂಜಿತ ಸಮಾರಂಭದ ದಿವ್ಯ ಸಾನಿಧ್ಯವನ್ನು ಪೂಜ್ಯವೇದಾಂತಚಾರ್ಯ ಸಹಜಾನಂದ ಅವಧೂತರು ರುದ್ರವದೂತ ಮಠ ಜಮಖಂಡಿ ಇವರು ವಹಿಸಿದ್ದರು ಸಮಾರಂಭದಲ್ಲಿ ಇಂಚಗೇರಿ ಶಾಖಾಮಠ ಹಿಪ್ಪರಗಿಯ  ಪೂಜ್ಯರಾದ ಪ್ರಭು ಬೆನ್ನಾಳ ಮಹಾರಾಜರು ಹಾಗೂ ಸಿದ್ದಾರೂಡ ಮಠದ ಮರ ಚಿಕ್ಕಲಕಿಯ ಮಾತೋಶ್ರೀ ಶಾಂತಮ್ಮ ತಾಯಿ ಆಗಮಿಸಿದ್ದರು ಹಿರಿಯ ರೋಟರಿ ಸದಸ್ಯ ಎಸ್.ವಾಯ್.ಪಾಟೀಲ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.

ಅಥಿತಿಗಳಾಗಿ ಡಿ.ವಾಯ್.ಎಸ್.ಪಿ.ಗೀರಿಶ ಕಾಂಬಳೆ ಹಾಗೂ ಸಿ.ಪಿ.ವಾಯ್.ಉಮೇಶ ಚಿಕ್ಕಮಠ.ಎಸ್.ಎಸ್.ಪಾಟೀಲ, ಮಹೇಶ ಜಿರಲಿ ,ಪುರಷೋತ್ತಮ ಲೆಲೆ ಎಮ್.ಸಿ.ಹೊಸೂರ ಆಗಮಿಸಿದ್ದರು ಕೊನೆಯಲ್ಲಿ ಕೆ.ಎ. ಜಾಧವ ವಕೀಲ ವಂದಿಸಿದರು.

ನಿನ್ನೆ ಜರುಗಿದ ಸಾಯಿ ಮಂದಿರ ವರ್ಧಂತಿ ಸಮಾರಂಭದಲ್ಲಿ ಸುಮಾರು 25000 ಕ್ಕೂ ಹೆಚ್ಚು ಜನ ಭಕ್ತಾದಿಗಳು ಆಗಮಿಸಿ ಶಿಮಹಾಪ್ರಸಾದಷಿಸ್ವಿಕರಿಸಿದರು ಅಲ್ಲದೆ ಇಂದು ಜರುಗಿದ ವೈಭವ ಶ್ರವಣ ಬೇಳಗೊಳದ ಮಹಾಮಸ್ತಾಭಿಷೆಕದ ದೃಶ್ಯ ನೆನಪಿಗೆ ತರುತ್ತಿತ್ತು ಎಂದು ಸ್ಥಳಕ್ಕೆ ಬೆಟ್ಟಿ ನಿಡಿದ ನಮ್ಮ ಪ್ತತಿನಿಧಿ ವರದಿ ಮಾಡಿದ್ದಾರೆ.

loading...

LEAVE A REPLY

Please enter your comment!
Please enter your name here