ಸಮಾಜದ ಅಭಿವೃದ್ದಿಗೆ ಕೆಲಸ ಮಾಡಲು ಶ್ರೀಗಳು ಕರೆ

0
19
loading...

ಬೈಲಹೊಂಗಲ 22: ಲಿಂಗಾಯತ ಪಂಚಮಸಾಲಿ ಸಮಾಜದ ಬಾಂದವರು ಸಂಘಟಿತರಾಗಿ ಸಮಾಜದ ಅಭಿವೃದ್ದಿಗೆ ಒಗ್ಗೂಡಿ ಕೆಲಸ ಮಾಡಬೇಕೆಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಮಹಾಸ್ವಾಮಿಗಳು ಇಂದಿಲ್ಲಿ ಕರೆ ನೀಡಿದರು.

ಫೆಬ್ರುವರಿ 2 ರಂದು ಜರುಗಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯವರು ಸ್ಮರಣೋತ್ಸವದ ಹಾಗೂ ಕಿತ್ತೂರು ನಾಡ ಪಂಚಮಸಾಲಿ ಲಿಂಗಾಯತ ಸಮಾಜದ ನಾಲ್ಕನೇಯ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.  ಈ ಬಾರಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯವರ ಸ್ಮರಣೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಕುರಿತು ತಾಲೂಕಿನ ವಿವಿಧ ಲಿಂಗಾಯತ ಪಂಚಮಸಾಲಿ ಸಮಾಜದ ಬಾಂದವರೊಂದಿಗೆ ಜಗದ್ಗುರುಗಳು ಚರ್ಚಿಸಿದರು.  ಈ ಸಂದರ್ಭದಲ್ಲಿ ಸಮಾರಂಭಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವ ಸುಬೋದಕಾಯ ಸಹಾಯ ಅವರನ್ನು ಆಮಂತ್ರಿಸಲು ತೀರ್ಮಾನಿಸಲಾಯಿತು.  ವೀರರಾಣಿ ಕಿತ್ತೂರು ಚನ್ನಮ್ಮಾಜಿಯವರ ಐಕ್ಯ ಸ್ಥಳವನ್ನು ರಾಷ್ಟ್ತ್ರಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲು ಸರಕಾರಗಳನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.  ಜನೇವರಿ 28ರಿಂದ ಚೆನ್ನಮ್ಮಾ ಉದ್ಯಾನವನದಲ್ಲಿ ಪ್ರವಚನ ನಡೆಸಲು ತೀರ್ಮಾನಿಸಲಾಯಿತು.  ಹಾಗೂ ಪೆಬ್ರುವರಿ 2ರಂದು ಚನ್ನಮ್ಮಾಜಿ ಐಕ್ಯ ಸ್ಥಳದಲ್ಲಿ ಬೆಳಿಗ್ಗೆ ಲಿಂಗದೀಕ್ಷೆ, ಸಾಮೂಹಿಕ ಇಷ್ಟಲಿಂಗ ಕಾರ್ಯಕ್ರಮ ನಂತರ ಚನ್ಮಮ್ಮಾಜಿಯವರ ಭಾವಚಿತ್ರ ಮೆರವಣಿಗೆಯನ್ನು ಅದ್ದೂರಿಯಾಗಿ ನಗರದ ಪ್ರಮುಖ ಬೀದಿಗಳಲ್ಲಿ ಕರೆದೊಯ್ಯುವದು ನಂತರ ಚನ್ನಮ್ಮಾ ಉದ್ಯಾನವನದ ಬಳಿ ಕಿತ್ತೂರು ನಾಡಿನ ಲಿಂಗಾಯತ ಪಂಚಮಸಾಲಿ ಸಮಾಜದ ನಾಲ್ಕನೇಯ ಸಮಾವೇಶವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.  ಇದಕ್ಕಾಗಿ ಲಿಂಗಾಯತ ಪಂಚಮಸಾಲಿ ಸಮಾಜದ ಎಲ್ಲಾ ಬಾಂದವರು ಸ್ವಯಂಪ್ರೇರಣೆಯಿಂದ ಭಾಗವಹಿಸಿ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಸಭೆಯ ಮುಖಾಂತರ ಜಗದ್ಗುರುಗಳು ಸಲಹೆ ಇಟ್ಟರು.

ಜನೇವರಿ 25ರಿಂದ 7ದಿನಗಳ ಕಾಲ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಮಾಜ ಜಾಗೃತಿಗಾಗಿ ಗ್ರಾಮದರ್ಶನ ಹಮ್ಮಿಕೊಳ್ಳುತ್ತೇನೆಂದು ಜಗದ್ಗುರು ಜಯಮೃತ್ಯುಂಜಯ ಮಹಾಸ್ವಾಮಿಗಳು ನುಡಿದರು.  ಈ ಸಂದರ್ಭದಲ್ಲಿ ಎಲ್ಲಾ ಗ್ರಾಮಗಳ ಪಂಚಮಸಾಲಿ ಸಮಾಜದ ಬಾಂದವರು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.  ಕೇಂದ್ರ ಸರಕಾರ ನಡೆಸುತ್ತಿರುವ ಜನಗಣತಿ ಕಾರ್ಯದಲ್ಲಿ ಸಮಾಜದ ಬಾಂದವರು ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕೆಂದು ಒತ್ತಿ ಹೇಳಿದರಲ್ಲದೇ ಜನಗಣತಿ ಮಾಡುವ ಕೆಲಸಗಾರರು ಇದಕ್ಕೆ ವಿರೋಧಿಸಿದಲ್ಲಿ ತಕ್ಷಣ ದೂರು ನೀಡುವಂತೆ ಜಗದ್ಗುರುಗಳು ಸೂಚನೆ ನೀಡಿದರು.

ಸಭೆಯಲ್ಲಿ ಪಂಚಮಸಾಲಿ ಸಮಾಜದ ಹಿರಿಯರಾದ ಶ್ರೀಶೈಲ ಬೋಳಣ್ಣವರ ಡಾ: ವಿ.ಆಯ್.ಪಾಟೀಲ, ಗುರುಪುತ್ರಪ್ಪ ತುರಮರಿ, ಶಿವಾನಂದ ಕುಡಸೋಮಣ್ಣವರ, ಪ್ರಕಾಶ ಮೂಗಬಸವ, ಮಡಿವಾಳಪ್ಪ ಹೋಟಿ, ಮುರುಗೇಂದ್ರ ಗುಂಡ್ಲೂರ, ದೇಮಣ್ಣ ಇಂಚಲ, ವಿಠ್ಠಲ ಕಡಕೋಳ, ರುದ್ರಪ್ಪ ಜಕ್ಕಪ್ಪನವರ, ಸಿದ್ದಪ್ಪ ಪಿರಗೋಜಿ, ಮಲ್ಲನಗೌಡ ಪಾಟೀಲ, ಮಂಜು ಉಪ್ಪಿನ, ವಿಠ್ಠಲ ಅಂದಾನಿ, ಮಹೇಶ ಹರಕುಣಿ, ಮುಂತಾದವರು ಭಾಗವಹಿಸಿದ್ದರು…

loading...

LEAVE A REPLY

Please enter your comment!
Please enter your name here