ಹರಟೆ ಹಾಸ್ಯೌತ್ಸವ

0
137
loading...

ಧಾರವಾಡ, ಡಿ.24 : ಯಾವುದು ಹಿತ : ಪ್ರೇಮ ವಿವಾಹವೋ, ಸಾಂಪ್ರದಾಯಿಕ ವಿವಾಹವೋ? ಎಂಬ ವಿಷಯದ ಮೇಲೆ  ಹರಟೆ.  ಹರಟೆ ಹೊಡೆಯಲು ವೇದಿಕೆಯ ಮೇಲೆ ಮಹಾನ್ ಹಾಸ್ಯಗಾರರು ಮದುವೆ ಆದವರು, ಆಗುವರಿಂದ ತುಂಬಿದ ಸಭಾಂಗಣ, ಅಲ್ಲಿ ಮೂಡಿತ್ತು. ಹಾಸ್ಯದ ಹೊನಲು ಇಂತಹ ಒಂದು ಕ್ಷಣಕ್ಕೆ ಅಣಿಯಾಗಿದ್ದು ಧಾರವಾಡದ ಅಣ್ಣಾಜಿರಾವ್ ಶಿರೂರು ರಂಗಮಂದಿರ.

2011 ರ ಧಾರವಾಡ ಉತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಹರಟೆಯ ಕಾರ್ಯಕ್ರಮದಲ್ಲಿ  ಅಭಿನವ ಬಿಚಿ ಪ್ರಾಣೇಶ್, ಯಶವಂತ ಸರ್ದೇಶಪಾಂಡೆ, ಶಂಬು ಬಳಿಗಾರ, ಅನಿಲ ದೇಸಾಯಿ, ಸುಪ್ರಭಾ ಹಾಗೂ ಸುನಂದಾ ಕಡಮೆ ಹರಟೆ ಹೊಡಿಯಲು ಬಂದಿದ್ದರು. ಈ ತಂಡವನ್ನು ಹಾಸ್ಯಗಾರ ವೈ.ವಿ.ಗುಂಡುರಾವ್ ನಿರ್ಣಾಯಕರಾಗಿ ನಿರ್ವಹಿಸಿದರು.

ಸಾಂಪ್ರದಾಯ ವಿವಾಹವನ್ನು ಬೆಂಬಲಿಸಿ ಮಾತನಾಡಿದ  ಪ್ರಾಣೇಶ, ಅನಿಲ ದೇಸಾಯಿ ಹಾಗೂ ಸುನಂದಾ ಕಡಮೆ ಅವರ ತಂಡ, ಸಾಂಪ್ರದಾಯಿಕ ವಿವಾಹದಿಂದಾಗಿ ಬದುಕು ಸಾರ್ಥಕ ಮತ್ತು ಸದೃಢವಾಗಿರುತ್ತದೆ. ಸಾಂಪ್ರದಾಯಿಕ ವಿವಾಹವು ದೈಹಿಕ ಸೌಂದರ್ಯಕ್ಕೆ ಒತ್ತು ಕೊಡುವುದಿಲ್ಲ. ಅದು ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ ಎಂದು ಮುಂದುವರೆದಾಗ ಗುರು ಹಿರಿಯರ ಆಶೀರ್ವಾದ ಅದಕ್ಕೆ ಇರುತ್ತದೆ ಎಂದು ಹೇಳಿದರು.

ಇನ್ನೂ  ಪ್ರೇಮ ವಿವಾಹವನ್ನು ಬೆಂಬಲಿಸಿ ಮಾತನಾಡಿದ  ಯಶವಂತ ಸರದೇಶಪಾಂಡೆ, ಶಂಭು  ಬಳಿಗಾರ ಹಾಗೂ ಸುಪ್ರಭಾ ಮಾತನಾಡಿ  ಪ್ರೇಮ ವಿವಾಹದಲ್ಲಿ ನಮಗೆ ಬೇಕಾದ  ಆಯ್ಕೆ ಇದೆ, ಆದ್ದರಿಂದ ನಮ್ಮ ಹಿತಕ್ಕೆ ತಕ್ಕಂತೆ  ಬದುಕು ನಿರ್ಮಾಣ ಸಾಧ್ಯ. ಪ್ರೇಮ ಎಂದರೆ  ಅದು ಬೇಡುವುದಲ್ಲ ನೀಡುವುದು, ಅಲ್ಲಿ  ನಿಸ್ವಾರ್ಥ ಇದೆ ಅದು ಬದುಕನ್ನು ಸ್ಪೂರ್ತಿಸುತ್ತದೆ.  ಪ್ರೀತಿಗೆ ನಾವಿನ್ಯತೆ ಇದೆ ಎಂದೂ ಹೇಳಿದರು. ಪ್ರೇಮ ಎಂಬುದು ಅದು ಪಾಶ್ಚಿಮಾತ್ಯರ ಕೊಡುಗೆಯಲ್ಲ ಅದರ ಮೂಲ ಭಾರತ ಆಗಿದೆ ಎಂಬುದನ್ನು ತಿಳಿಸಿದರು.

ಅಂತಿಮವಾಗಿ ಗುಂಡುರಾವ್ ತಮ್ಮ ತೀರ್ಪಿನಲ್ಲಿ ಮಾನವ  ಜೀವನಕ್ಕೆ ಸಾಂಪ್ರದಾಯವೂ ಬೇಕು, ಪ್ರೀತಿಯೂ  ಬೇಕು ಎಂದು ತೀರ್ಪು ನೀಡಿದರು.

ಉಭಯ ಗುಂಪುಗಳು ತಮ್ಮ ವಾದವನ್ನು ಮಂಡಿಸುವಲ್ಲಿ  ಉಪಯೋಗಿಸಿದ ಹಾಸ್ಯ ಚುಟುಕು, ಕವನಗಳು  ಪ್ರೇಕ್ಷಕರನ್ನು ನಗೆಯ ತೇಲಾಟದಲ್ಲಿ  ಕೊಂಡೊಯ್ದವು, ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆ, ಕೇಕೇಗಳು ಕಾರ್ಯಕ್ರಮದ ಸಾರ್ಥಕತೆಗೆ  ಸಾಕ್ಷಿಯಾದವು. ಪ್ರೇಕ್ಷಕ ಹಾಸ್ಯ ಪ್ರೇಮವನ್ನು  ಅರಿತು ಈ ತಂಡದ ಕೆಲ ಸದಸ್ಯರು ಇಂದು  ಸಂಜೆ ಕರ್ನಾಟಕ ಕಾಲೇಜು ಆವರಣದಲ್ಲಿ  ಮತ್ತೆ ಹರಟೆ ಹೊಡೆಯಲಿದ್ದಾರೆ…

loading...

LEAVE A REPLY

Please enter your comment!
Please enter your name here