ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅಡಿಗಲ್ಲು

0
17
loading...

(ಹುಕ್ಕೇರಿ ಕಾರ್ಯಾಲಯದಿಂದ)

ಹುಕ್ಕೇರಿ 2 :  ಇಲ್ಲಿಯ ಗಾಂಧಿ ನಗರದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ 2011-12 ನೇ ಸಾಲಿನಲ್ಲಿ ಮಂಜೂರಾದ ಹೆಚ್ಚುವರಿ ಎರಡು ಶಾಲಾ ಕೊಠಡಿಗಳಿಗೆ ಪಟ್ಟಣ ಪಂಚಾಯತ ಅಧ್ಯಕ್ಷ ಜಯಗೌಡಾ ಪಾಟೀಲರು ಅಡಿಗಲ್ಲು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದಂರ್ಭದಲ್ಲಿ ಮಾತನಾಡಿದ ಅವರು ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೆ ಶಿಕ್ಷಣ ಅವಶ್ಯವಾಗಿರುವ ಹಿನ್ನೆಲೆಯಲ್ಲಿ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದಿರಲು ಕರೆ ನೀಡಿದರು. ಪ್ರಧಾನ ಗುರುಗಳಾದ ಎನ್.ಎಸ್.ಬಡಿಗೇರ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕ ವ್ಹಿ.ಎಮ್.ನಾಯಿಕ ನಿರೂಪಿಸಿದರೆ ವ್ಹಿ.ವ್ಹಿ.ರಜಪೂತ ವಂದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಜಾನನ ಮನ್ನಿಕೇರಿ, ಸಂಕೇಶ್ವರ ಎ.ಪಿ.ಎಮ್.ಸಿ ಉಪಾಧ್ಯಕ್ಷ ಸುಭಾಷ ನಾಯಿಕ, ಪಟ್ಟಣ ಪಂಚಾಯತ ಸದಸ್ಯ ಸುನೀಲ ನಾಯಿಕ, ರಾಯಪ್ಪಾ ಚಿಕ್ಕೌಡೆ, ಶಿಕ್ಷಕ ಎಸ್.ಬಿ.ಬಡಿಗೇರ, ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಪಾಟೀಲ, ಸದಸ್ಯರು, ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು ಈ ಸಂದಂರ್ಭದಲ್ಲಿ ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here