ಹೆಚ್.ಐ.ವಿ. ಸೋಂಕು ಶೂನ್ಯಕ್ಕೆ ತರಲು ಡಾ. ಸಜ್ಜನ ಕರೆ

0
33
loading...

ಹಾವೇರಿ.ಡಿ.23: ಏಡ್ಸ್ ಹೆಮ್ಮಾರಿ. ನಮ್ಮ ಸಾಮಾಜಿಕ ಬದುಕನ್ನು ಅಭದ್ರಗೊಳಿಸಲು ಮನೆ ಬಾಗಿಲಿಗೇ ಬಂದಿದ್ದು, ಹೆಚ್.ಐ.ವಿ. ಸೋಂಕಿಗೆ ತುತ್ತಾಗದಂತೆ ಮೌಲ್ಯಯುತ ಜೀವನ ರೂಪಿಸಿಕೊಳ್ಳುವ ಹೊಣೆಗಾರಿಗೆ ಇಂದಿನ ಯುವ ಜನರದ್ದಾದರೆ, ಸೋಂಕಿಗೆ ಗುರುಯಾದವರನ್ನು ಗೌರವಯುತವಾಗಿ ಕಾಣುವ ಹೊಣೆಗಾರಿಕೆ ಸಮಾಜದ ಮೇಲಿದೆ ಎಂದು ಹಾವೇರಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ  ಡಾ. ಬಸವರಾಜ ಸಜ್ಜನ ಅವರು ತಿಳಿಸಿದ್ದಾರೆ.

ಅವರು ಇಂದು ಹಾವೇರಿಯ ಹೋಟೆಲ್ ತಾರಾ ಪ್ಲಾಜಾ ಸಭಾಂಗಣದಲ್ಲಿ ಹಾವೇರಿಯ ರಕ್ಷಿತ ನೆಟ್ ವರ್ಕ ಆಫ್ ಪೊಸಿಟಿವ್ ಪೀಪಲ್ ಹಾಗೂ ಬೆಂಗಳೂರಿನ ಪಿಎಫ್ಐ ಸಂಸ್ಥೆಯ ಸಹಯೋಗದಲ್ಲಿ ಎಚ್.ಐ.ವಿ./ಏಡ್ಸ್ ನಿಯಂತ್ರಣ ಕುರಿತು ಅರಿವು ಮೂಡಿಸಲು ಈ ಸಂಸ್ಥೆಗಳ 12 ಗುಂಪುಗಳ 40 ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಶಿಸಾಮಾನ್ಯ ಮನಸ್ಕರ ಕಾರ್ಯಕ್ರಮಷಿ ದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿ, ಶಿಕ್ಷೇತ್ರಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರು ಜನತೆಯಲ್ಲಿ ಏಡ್ಸ್ನ ಭೀಕರತೆಯ ಬಗ್ಗೆ ಅರಿವು ಮತ್ತು ಹೆಚ್.ಐ.ವಿ. ಸೋಂಕಿನ ಪರಿಣಾಮಗಳ ಬಗ್ಗೆ ತಿಳುವಳಿಕೆಯನ್ನು ನೀಡುವುದರ ಮೂಲಕ ಈ ರೋಗದ ಜಾಲಕ್ಕೆ ಹೊಸಬರ ಸೇರ್ಪಡೆಯಾಗದಂತೆ ತಡೆದು, ಎಚ್.ಐ.ವಿ. ಸೋಂಕಿತರ ಪ್ರಮಾಣವನ್ನು ಶೂನ್ಯಕ್ಕೆ ತರಲು ನೆರವಾಗಬೇಕುಷಿ ಎಂದು ವಿನಂತಿಸಿದರು.

ಹೆಚ್.ಐ.ವಿ. ಸಂಬಂಧದ ಪ್ರಕರಣಗಳು ಬರದಂತೆ ಮತ್ತು ಮಕ್ಕಳು ಈ ಸೋಂಕಿನಿಂದ ಹುಟ್ಟದಂತೆ ತಡೆಯಲು ಅಗತ್ಯವಾದ ಅರಿವಿನ ಕಾರ್ಯಕ್ರಮಕ್ಕೆ ಒತ್ತು ನೀಡಬೇಕು. ಈ ವಿಷಯ ವಿಶ್ವ ಆರೋಗ್ಯ ಸಂಸ್ಥೆಯ ಪ್ರಸಕ್ತ ವರ್ಷದ ಧ್ಯೇಯವಾಕ್ಯವೂ ಹೌದು ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಮಾಳೋದೆ ಅವರು, ಶಿಹೆಚ್.ಐ.ವಿ. ಸೋಂಕಿತರ ಬದುಕನ್ನು ಸಹ್ಯವಾಗಿಸಲು ಸರ್ಕಾರ ಏನೆಲ್ಲಾ ಕ್ರಮಗಳನ್ನು ಕೈಕೊಳ್ಳುತ್ತಿದೆ. ಅಂಥ ಮಕ್ಕಳನ್ನು ಗೌಪ್ಯವಾಗಿ ಗುರುತಿಸಿ, ಅವರಿಗೆ ನೆರವಾಗುವ ದೃಷ್ಟಿಯಿಂದ ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ನಿರ್ದೇಶಕರು ಅನಾಥ ಸೋಂಕಿತ ಮಕ್ಕಳಿಗೆ ಮಾಸಿಕ 750 ರೂ. ಹಾಗೂ ಇತರೆ ಸೋಂಕಿತ ಮಕ್ಕಳಿಗೆ 650 ರೂ.ನಂತೆ ಮತ್ತು ವರ್ಷಕ್ಕೆ ಶಾಲಾ ವೆಚ್ಚಕ್ಕೆಂದು ತಲಾ 500 ರೂ.ಗಳ ನೆರವು ನೀಡಲು ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಹೆಚ್.ಐ.ವಿ ಸೋಂಕಿತ ಮಕ್ಕಳಿಗೆ ಈ ಹಣಕಾಸು ನೆರವು ಲಭ್ಯವಾಗಲಿದೆಷಿ ಎಂದರು.

ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಪಾಶ್ಚಾತ್ಯ ನಾಗರಿಕತೆಯ ಸೆಳವಿಗೆ ಸಿಕ್ಕು ಭಾರತೀಯ ಕುಟುಂಬ ವ್ಯವಸ್ಥೆ ನಲುಗುತ್ತಿದ್ದು, ಕುಟುಂಬ ವ್ಯವಸ್ಥೆಯಲ್ಲಿ ಉತ್ತಮ ಪಾಲಕತ್ವ ಕಡಿಮೆಯಾಗುತ್ತಿದೆಯೆಂದು ವಿಷಾದಿಸಿದರು. ಟಿ.ವಿ., ಕಂಪ್ಯೂಟರ್ ಮತ್ತು ಚಲನಚಿತ್ರದಂಥ ಮಾಧ್ಯಮಗಳಿಗೆ ಬಲು ಬೇಗನೇ ಮನ ಸೋಲುತ್ತಿರುವ ಇಂದಿನ ಮಕ್ಕಳಿಗೆ ಪರಿಸರವೂ ಸಕಾರಾತ್ಮಕವಾಗಿಲ್ಲದ ಕಾರಣ ಬಲು ಬೇಗನೇ ಸ್ವೇಚ್ಛಾ ಬದುಕಿನತ್ತ ವಾಲುತ್ತಿದ್ದಾರೆ. 1995ರಲ್ಲಿ ವಿಶ್ವಸಂಸ್ಥೆ ಅಂತರರಾಷ್ಟ್ತ್ರೀಯ ಕೌಟುಂಬಿಕ ವರ್ಷವನ್ನು ಘೋಷಿಸಿ, ಉತ್ತಮ ಪಾಲಕತ್ವಕ್ಕೆ ಒತ್ತು ನೀಡಲು ಕರೆ ನೀಡಿತ್ತಾದರೂ ಈ ವಿಚಾರ ನೇಪಥ್ಯಕ್ಕೆ ಸರಿಯುವಂತಾಗಿದೆ. ಯುವ ಜನರಲ್ಲಿ ತಮ್ಮ ಭವಿಷ್ಯದ ಬದುಕಿನ ಬಗ್ಗೆ ವೈಯಕ್ತಿಕ ಅರಿವಿನಿಂದ ಮಾತ್ರ ಹೆಚ್.ಐ.ವಿ. ಸೋಂಕನ್ನು ನಿಯಂತ್ರಿಸಲು ಸಾಧ್ಯ ಈ ಹಿನ್ನೆಲೆಯಲ್ಲಿ ಸಮಾಜ ಮತ್ತು ಮಾಧ್ಯಮಗಳು ಯುವ ಜನರಲ್ಲಿ ಈ ಹೊಣೆಗಾರಿಕೆಯನ್ನು ಪ್ರೇರೇಪಿಸಬೇಕುಷಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಕೆ.ಆರ್. ಮಂಜುನಾಥ ಅವರು ಏಡ್ಸ್ನ  ವಿಕೃತ ಪರಿಣಾಮ ಹಾಗೂ ಹೆಚ್.ಐ.ವಿ. ಸೋಂಕು ತಗಲುವ ಬಗೆ ಕುರಿತು ವಿವರಿಸಿದರು.

ಕಾರ್ಯಕ್ರಮವನ್ನು ಯೋಜಿಸಿದ ರಕ್ಷಿತ ನೆಟ್ವರ್ಕನ ಅಧ್ಯಕ್ಷೆ ಶಾರದಾ ಯಸುಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಸಮಾಜದಲ್ಲಿ ಭಯ ಹುಟ್ಟಿಸಿ, ವೈದ್ಯಕೀಯ ಹಾಗೂ ವಿಜ್ಞಾನ ಲೋಕಕ್ಕೆ ಪ್ರಶ್ನೆಯಾಗಿರುವ ಹೆಚ್.ಐ.ವಿ. ಸೋಂಕನ್ನು ತೊಡೆದು ಹಾಕಲು ಮತ್ತು ಸೋಂಕಿತರಿಗೆ ಬೆನ್ನೆಲುಬಾಗಿ ನಿಲ್ಲುವ ಕಾರ್ಯದಲ್ಲಿ ತಮ್ಮ ಸಂಸ್ಥೆ ಜಿಲ್ಲೆಯಲ್ಲಿ ನಿರಂತರ ಕಾರ್ಯಕ್ರಮಗಳನ್ನು ಯೋಜಿಸುತ್ತಿದೆಷಿ ಎಂದರು.

ಹೆಚ್.ಐ.ವಿ. ಸೋಂಕಿತರಿಗೆ ಸೇವೆ ಒದಗಿಸುವ ಕಾರ್ಯದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳ ಗುಂಪುಗಳಲ್ಲಿ ಸ್ವಯಂ ಸೇವಕರಾದ ಮಂಜುಳಾ ಆನೆಗೊಂಡರ್ (ಹಿರೇಕೆರೂರು) ಲಕ್ಷ್ಮಿ ಯಲವಿಗಿ (ಶಿಗ್ಗಾಂವ) ಹಾಗೂ ಯಶೋದಾ ದಾಮೋದರ (ಗುತ್ತಲ) ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ರಕ್ಷಿತಾ ನೆಟ್ವರ್ಕ್ ಸಂಸ್ಥೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ರಾಜು ಭಜಂತ್ರಿ ಸ್ವಾಗತಿಸಿದರು. ಆಪ್ತ ಸಮಾಲೋಚಕ ಮಂಜಪ್ಪ ಕೊಡೇರ ವಂದಿಸಿದರು.

 

 

loading...

LEAVE A REPLY

Please enter your comment!
Please enter your name here