ಹೈನುಗಾರಿಕೆಗೆ 2.25 ಲಕ್ಷ ರೂ. ಚೆಕ್

0
49
loading...

ಗೋಕಾಕ  ;- ತಾಲೂಕಿನ ಗುಜನಾಳ ಗ್ರಾಮದ ಶ್ರೀ ಶ್ರೀನಿವಾಸ ಮಹಿಳಾ ಸ್ವಸಹಾಯ ಸಂಘಕ್ಕೆ ಹೈನುಗಾರಿಕೆ ಮಾಡಲು ಪಶು ಪಾಲನಾ ಇಲಾಖೆಯ ವಿಶೇಷ ಕೇಂದ್ರಿಯ ನೆರವಿನಡಿ 15 ಜನ ಸದಸ್ಯರಿಗೆ ಮಂಜೂರಾದ ತಲಾ 15 ಸಾವಿರ ರೂ.ಗಳ. ಒಟ್ಟು 2.25 ಲಕ್ಷ ರೂ.ಗಳ ಸಹಾಯಧನದ ಚೆಕ್ಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಗುರುವಾರದಂದು ತಮ್ಮ ಕಾರ್ಯಾಲಯದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಟಿ.ಆರ್.ಕಾಗಲ್, ಗುಜನಾಳ ಗ್ರಾ.ಪಂ. ಅಧ್ಯಕ್ಷ ಭೀಮಗೌಡ ಪಾಟೀಲ, ನಗರಸಭೆ ಅಧ್ಯಕ್ಷೆ ಸಾವಿತ್ರಿ ಕಂಬಳಿ, ಪಶು ವೈದ್ಯಾಧಿಕಾರಿ ಡಾ|| ಜಿ.ಎಚ್.ನಾಗರಾಜ, ವಿಸ್ತರಣಾಧಿಕಾರಿ ಡಾ||ಮೋಹನ ಕಮತ ಹಾಗೂ ಡಾ||ಶಶಿಕಾಂತ ಕೌಜಲಗಿ ಉಪಸ್ಥಿತರಿದ್ದರು.

 

 

 

 

loading...

LEAVE A REPLY

Please enter your comment!
Please enter your name here