19ರಿಂದ ಯಲ್ಲಮ್ಮದೇವಿ ಜಾತ್ರೆ

0
11
loading...

ಬೆಳಗಾವಿ,19- ಅಥಣಿ ಕೊಕಟನೂರ ಯಲ್ಲಮ್ಮದೇವಿ ಜಾತ್ರೆಯನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮ್ಮನವಾಡಿ ಗ್ರಾಮದಲ್ಲಿ ಪ್ರತಿವರ್ಷ ಎಳ್ಳು ಅಮವಾಸ್ಯೆ ಸಂದರ್ಭದಲ್ಲಿ 7 ದಿನಗಳ ಕಾಲ ಆಚರಿಸುವುದು. ವಾಡಿಕೆ ಪ್ರತಿವರ್ಷದಂತೆ ಈ ವರ್ಷವೂ ಆಚರಿಸಲಾಗುತ್ತಿರುವ ಈ ಜಾತ್ರೆಗೆ ಬೆಳಗಾವಿ ವಿಜಾಪೂರ ಬಾಗಲಕೋಟೆ ಧಾರವಾಡ ಮತ್ತು ನೆರೆಯ ರಾಜ್ಯ ಮಹಾರಾಷ್ಟ್ತ್ರದ ಜತ್ತು ಸಾಂಗಲಿ ಕೊಲ್ಹಾಪೂರ ಪುನೆ ಮುಂಬಯಿ ಸೊಲ್ಲಾಪೂರ ಸೇರಿದಂತೆ ಅನೇಕ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಗ್ರಾಮಕ್ಕೆ ಆಗಮಿಸುವ ನೀರೀಕ್ಷೆಯಿದೆ ಈಗಾಗಲೇ ಜಿಲ್ಲಾಡಲಿತದ ಆದೇಶದ ಮೇರೆಗೆ ಸಂಕ್ರಾಮಿಕ ರೊಗಗಳು ಬಾರದಂತೆ ತಡೆಯಲು ಆರೋಗ್ಯ ಇಲಾಖೆ ಸೂಕ್ತ ಸಿದ್ದತೆ ಮಾಡಿಕೊಂಡಿದೆ ಒಟ್ಟಾರೆ ಈ ವರ್ಷವೂಕೂಡ ಜಾತ್ರೆ ಅದ್ದೂರಿಯಿಂದ ಮತ್ತು ಸುಸೂತ್ರವಾಗಿ ನಡೆಯಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಗ್ರಾ.ಪಂ. ಕಂದಾಯ ಇಲಾಖೆ ತಾ.ಪಂ. ಹಾಗೂ ತಾಲೂಕಾ ಆಡಳಿತ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.

ದಿ.19ರಂದು ದೂರದರ್ಶನ 20 ರಂದು ಏಕಾದಶಿ (ಸಣ್ಣಬಾನ) 21 ರಂದು ದ್ವಾದಶಿ ದೇವಿಯ ಮಹಾನೈವೇದ್ಯ ನೆರವೇರುವುದು 22 ರಂದು ದೇವಿಯ ಕಿಚ್ಚು 23 ರಂದು ಚಕ್ಕಡಿ ಸ್ಫರ್ಧೆ 24 ರಂದು ಅಮವಾಸ್ಯೆ 25 ರಂದು ದೇವಿಯ ಪೂಜೆಯೊಂದಿಗೆ ಸಮಾರೂಪಗೊಳ್ಳುವುದು ಭರದಸಿದ್ಧತೆ.

ಕೊಕಟನೂರನಲ್ಲಿ ನಡೆಯುವ ಯಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಗ್ರಾಮದಲ್ಲಿ ಭರದಿಂದ ಸಿದ್ಧತೆ ನಡೆದಿದ್ದು ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗ್ರಾಮದಲ್ಲಿ ಸಂಪೂರ್ಣ ನೈರ್ಮಲ್ಲಿಕರಣದ ಹಲವಾರಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದ ಸುಪ್ರಸಿದ್ಧ ಜಾತ್ರಾ ಸ್ಥಳಗಳಲ್ಲೊಂದು ಕೊಕಟನೂರನಲ್ಲಿ ಅಲ್ಲಿಲ್ಲಿ ತಮ್ಮದೇ ಆದ ಸ್ವಂತ ಟೆಂಟಗಳನ್ನು ಹಾಕಿ ಇರುವುದು ಕೊಡವಾಡಿಕೆ. ದೇವಾಲಯದ ಆವರಣಗಳನ್ನು ಶುಚಿತ್ವವಾಗಿಡಲು ಗ್ರಾಮ ಪಂಚಾಯತ ಮತ್ತು ಆರೋಗ್ಯ ಇಲಾಖೆಯ ಸಹ ಯೋಗದೊಂದಿಗೆ ಭರ್ಜರಿ ಕೆಲಸ ಕೈಗೊಂಡಿದೆ ಮುಂಬರುವ ಎಂಟು ದಿನಗಳಿಂದಲೇ ಯತ್ರಾರ್ಥಿಗಳು ಗ್ರಾಮಕ್ಕೆ ಆಗಮಿಸಲು ಪ್ರಾರಂಭಿಸುತ್ತಾರೆ.ಅಷ್ಟರಲ್ಲೇ ಜಾತ್ರೆಗೆ ಬೇಕಾಗುವ ಎಲ್ಲ ತಯ್ಯಾರಿಗಳನ್ನು ಮಾಡಿಕೊಂಡು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ರಸ್ತೆ ದುರಸ್ತಿ ದೇವಸ್ಥಾನಕ್ಕೆ ಹೊಂದಿಕೊಂಡಿದ್ದ ಹಳ್ಳವನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಹಲವಾರು ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು ಎಲ್ಲ ಕಾಮಗಾರಿಗಳು ಪ್ರಗತಿಯಲ್ಲವೆ ಎಂದು ಪಿ.ಪಿ.ಓ.ಎಲ್. ಕರಡಿ ಮತ್ತಿ ಅರ್ಚಕರಾದ ಪರಶುರಾಮ ಪೂಜಾರಿ ತಿಳಿಸಿದ್ದಾರೆ.

ಕೆ.ಪಿ.ಟಿಸಿಯಲನ್ ಅಧಿಕಾರಿಗಳು ಗ್ರಾಮದಲ್ಲಿ ವಿದ್ಯೂತ್ ವ್ಯತ್ಯಯವಾಗದಂತೆ ಎಲ್ಲ ವ್ಯವಸ್ಥೆ ಕಲ್ಪಿಸುವಂತೆ ಇಲ್ಲಿಯ ಸಾರ್ವಜನಿಕ ಕರ ಒತ್ತಾಸೆಯಾಗಿದೆ.

 

 

 

loading...

LEAVE A REPLY

Please enter your comment!
Please enter your name here