ಎಲ್ಲರ ಕಣ್ಣು ಗಡ್ಕರಿ ಮೇಲೆ

0
23

ಯಡ್ಡಿ ಬಣದಿಂದ ಮಿಂಚಿನ ಕಾರ್ಯಾಚರಣೆ

loading...

 

ಬೆಂಗಳೂರು, ಫೆ. 22: ಹೇಗಾದರೂ ಮಾಡಿ ಮುಖ್ಯಮಂತ್ರಿ ಸದಾನಂದ ಗೌಡರನ್ನು ಅಧಿಕಾರದಿಂದ ಕೆಳಗೆ ಇಳಿಸಿ ತಮಗೆ ಮುಖ್ಯಮಂತ್ರಿ ಸ್ಥಾನ ಕೊಡದೆ ಇದ್ದರೂ ಬೇರೆಯವರನ್ನು ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಪಣತೊಟ್ಟಿದ್ದಾರೆ. ನಾಳೆ ನಿರ್ಣಾಯಕ ದಿನವಾಗಲಿದೆ. ಪಕ್ಷದ ಅಧ್ಯಕ್ಷ ನೀತೀನ್ ಗಡ್ಕರಿ ನಾಳೆ ಸಂಜೆ ಬೆಂಗಳೂರಿಗೆ ಬರಲಿದ್ದು, ಅವರ ಮುಂದೆ ತಮ್ಮ ಶಕ್ತಿ ಪ್ರದರ್ಶನ ಮಾಡಿಸದಾನಂದಗೌಡರನ್ನು ಗದ್ದುಗೆಯಿಂದ ಕೆಳಗೆ ಇಳಿಸಲು ಯಡಿಯೂರಪ್ಪ ಬಣ ಮಿಂಚಿನ ಕಾರ್ಯಾ ತಂತ್ರಗಳನ್ನು ಮಾಡತೊಡಗಿದೆ.

ಹೀಗಾಗಿ ಬಣದ ರಾಜಕೀಯ ರಾಜಧಾನಿಯಲ್ಲಿ ಚುರುಕುಗೊಂಡಿದೆ. ಆಪ್ತರೊಂದಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸತತ ಸಮಾಲೋಚನೆ ಗಳನ್ನು ನಡೆಸುತ್ತಿದ್ದಾರೆ. ನಾಳೆ ಯಾವ ರೀತಿ ಕಾರ್ಯತಂತ್ರ ರೂಪಿಸಿ ಗೆಲ್ಲಬೇಕು ಎಂಬುದರ ಕುರಿತು ತೀವ್ರ ಚರ್ಚೆ ನಡೆಯತೊಡಗಿದೆ. ಈ ಮಧ್ಯೆ ಸಚಿವ ಜಗದೀಶ ಶೆಟ್ಟರ್ ಮನೆಯಲ್ಲಿ ಅವರ ಬೆಂಬಲಿಗ ಶಾಸಕರು ಸಭೆ ನಡೆಸಿದ್ದಾರೆ. ಮುಂದಿನ ಕಾರ್ಯತಂತ್ರಗಳ ಬಗ್ಗೆ ಶೆಟ್ಟರ್ ಬೆಂಬಲಿಗರು ಸಮಾಲೋಚನೆಯಲ್ಲಿ ತೊಡಗಿದ್ದಾರೆ. ನಾಳೆ ಸಂಜೆ ರಾಷ್ಟ್ತ್ರೀಯ ಅಧ್ಯಕ್ಷ ಗಡ್ಕರಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಅವರ ಮುಂದೆ ಶಕ್ತಿ ಪ್ರದರ್ಶನ ಮಾಡುವ ಸಂಬಂಧ ನಾಳೆ ತಮ್ಮ ಎಲ್ಲ ಬೆಂಬಲಿಗ ಶಾಸಕರು ಸಂಸದರು ಸಚಿವರ ಸಭೆಗೆ ಬರಬೇಕೆಂದು ಯಡಿಯೂರಪ್ಪ ಕಟ್ಟಪ್ಪಣೆ ಮಾಡಿದ್ದಾರೆ.

ಹೀಗಾಗಿ ನಾಳಿನ ನಿರ್ಣಾಯಕ ಸಭೆಗೆ ಎಲ್ಲ ಶಾಸಕರು ಬರಬೇಕು ನನ್ನ ಪರವಾಗಿ ನಿಂತುಕೊಳ್ಳಬೇಕು. ನನಗೆ ಬೆಂಬಲ ಕೊಡಬೇಕು ಇಲ್ಲ ಎಂದರೆ ನಾನು ಪಕ್ಷವನ್ನೇ ಬಿಟ್ಟು ಹೋಗುತ್ತೇನೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಎಲ್ಲ ಶಾಸಕರಿಗೆ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ನನ್ನ ಪರವಾಗಿ ನಿಂತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಈ ಕೆಲಸಕ್ಕೆ ತಮ್ಮ ಆಪ್ತರಾದ ಬಸವರಾಜ ಬೊಮ್ಮಾಯಿ ರೇಣುಕಾಚಾರ್ಯ, ಸಿ.ಸಿ. ಪಾಟೀಲ್, ವಿ. ಸೋಮಣ್ಣ ಅವರನ್ನು ಬಳಸಿಕೊಂಡು ಶಕ್ತಿ ಪ್ರದರ್ಶನಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಯಡಿಯೂರಪ್ಪನವರ ಬಳಿ ಎಷ್ಟು ಬಲ ಇದೆ ಎಷ್ಟು ಶಾಸಕರು ಇದ್ದಾರೆ ಎಂಬುದನ್ನು ಮಾಧ್ಯಮದ ಮೂಲಕವೇ ತೋರಿಸಿಕೊಟ್ಟು ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಪ್ರಯತ್ನಕ್ಕೆ ಯಡ್ಡಿ ಕೈ ಹಾಕಿದ್ದಾರೆ. ಒಂದು ವೇಳೆ ತಮ್ಮನ್ನು ಮತ್ತೆ ಮುಖ್ಯಮಂತ್ರಿ ಮಾಡಲುವಿರೋಧ ಮಾಡಿದರೆ ಲಿಂಗಾಯತ ಕೋಮಿಗೆ ಸೇರಿದ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರು ಗಡ್ಕರಿ ಅವರ ಮೇಲೆ ಒತ್ತಡ ಹೇರಲಿದ್ದಾರೆ. ಒಂದು ಕಡೆಗೆ ಮೂರು ಹಕ್ಕಿ ಹೊಡೆಯುವ ಚಾಣಾಕ್ಷ ತಂತ್ರವನ್ನು ಅವರು ರೂಪಿಸಿದ್ದಾರೆ. ನಾಳೆ ಅವರು ಅಂತಿಮ ಕಸರತ್ತು ನಡೆಯಲಿದೆ. ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವುದು ಆ ಜಾಗಕ್ಕೆ ಶೆಟ್ಟರ್ ಅವರನ್ನು ಕೂಡ್ರಿಸುವದು ನನ್ನನ್ನು ಕಡೆಗಣಿಸಿದರೆ ಮುಂದೆ ಉಳಿಗಾಲವೇ ಇಲ್ಲ ಎಂದು ವರಿಷ್ಠರಿಗೆ ಪರೋಕ್ಷ ಎಚ್ಚರಿಕೆಯ ಸಂದೇಶ ರವಾನೆ ಮಾಡುವದು ಯಡಿಯೂರಪ್ಪ ಅವರ ಮುಖ್ಯ ಉದ್ದೇಶವಾಗಿದೆ.

ಈ ಮಧ್ಯೆ ಹೇಳಿಕೆ ನೀಡಿರುವ ಜಗದೀಶ್ ಶೆಟ್ಟರ್ ನಾನು ನಿನ್ನೆ ಯಡಿಯೂರಪ್ಪನವರನ್ನು ಭೇಟಿ ಮಾಡಿರುವುದು ನಿಜ ಅವರು ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದಾರೆ. ನಾಳೆಯ ಸಭೆಯಲ್ಲಿಯೂ ಪಾಲ್ಗೊಳ್ಳಲು ಅವರು ನನಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಮಧ್ಯೆ ಸಿಪಿ ಯೋಗೇಶ್ವರ್ ಮತ್ತು ಎ. ರಾಮದಾಸ ಸಹ ನಾಳೆಯ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ಈ ಮಧ್ಯೆ ಮುಖ್ಯಮಂತ್ರಿ ಸದಾನಂದಗೌಡರು ನಾನು ವೀರಶೈವ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿಲ್ಲ ಅದೆಲ್ಲ ಸುಳ್ಳಿನ ಕಂತೆ ಎಂದು ಹೇಳಿದ್ದಾರೆ. ಅಲ್ಲದೆ ನಾಳೆ ಗಡ್ಕರಿ ಬರುತ್ತಿದ್ದು, ಪಕ್ಷದಲ್ಲಿ ಉಂಟಾಗಿರುವ ಎಲ್ಲ ಸಣ್ಣ ಪುಟ್ಟ ಗೊಂದಲಗಳು ಪರಿಹಾರವಾಗಲಿವೆ ಎಂಬ ಆತ್ಮ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಗಡ್ಕರಿ ಏನು ಮಾಡುತ್ತಾರೆ ಎಂಬುದು ಈಗ ಕುತೂಹಲದ ಪ್ರಶ್ನೆಯಾಗಿದ್ದು, ಭಾಜಪ ನಾಯಕರು ಮಾತ್ರವಲ್ಲ ರಾಜ್ಯದ ಜನರು ಅವರ ಕಡೆಗೆ ಕುತೂಹಲದಿಂದ ನೋಡತೊಡಗಿದ್ದಾರೆ…

loading...

LEAVE A REPLY

Please enter your comment!
Please enter your name here