ದಾಂಡೇಲಿ ಅಭಯಾರಣ್ಯಕ್ಕೆ 240 ಚ.ಕಿ.ಅರಣ್ಯ ಸೇರ್ಪಡೆ

0
18
loading...

ಕಾರವಾರ,21- ಇತ್ತೀಚೆಗೆ ಕೇಂದ್ರ ಸರಕಾರವು ಖಾನಾಪುರ ತಾಲೂಕಿನ 900 ಚ.ಕಿ. ಮಹಾದಾಯಿ ಅರಣ್ಯ ಪ್ರದೇಶವನ್ನು ಅಭಯಾರಣ್ಯವನ್ನಾಗಿ ಘೋಷಿಸಿದ ಬೆನ್ನಲ್ಲೇ ದಾಂಡೇಲಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಕ್ಯಾಸಲ್ರಾಕ್- ಅನಮೋಡ- ಅಖೇತಿ ಸುತ್ತಲಿನ 248 ಚ.ಕಿ.ಮೀ. ಅರಣ್ಯ ಪ್ರದೇಶವನ್ನು ಹೊಸದಾಗಿ ಸೇರಿಸಿ ಸರಕಾರವು ಆದೇಶ ಹೊರಡಿಸಿದೆ. ಇದರಿಂದಾಗಿ ಮಹಾರಾಷ್ಟ್ತ್ರದ ರಾಧಾನಗರಿ ಅಭಯಾರಣ್ಯ ಗೋವಾದ ಬೊಂಡ್ಲಾ, ಭಗವಾನ್ ಮಹಾವೀರ ಹಾಗೂ ಕಾಟಿಗಾಂವ್ ಅಭಯಾರಣ್ಯ, ಬೆಳಗಾವಿ ಜಿಲ್ಲೆಯ ಮಹಾದಾಯಿ ಅಭಯಾರಣ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಭಯಾರಣ್ಯ ಹಾಗು ಹುಲಿ ಯೋಜನೆ ಎಲ್ಲವೂ ಒಂದಕ್ಕೊಂದು ಕೂಡಿದಂತಾಗಿದೆ. ದೇಶದಲ್ಲೇ ತನ್ನ ಪೂರ್ವದಿಕ್ಕಿನ ಎಲ್ಲ ಅರಣ್ಯ ಪ್ರದೇಶವನ್ನು ಅಭಯಾರಣ್ಯವನ್ನಾಗಿಸಿಕೊಂಡಿದ ಗೋವಾ ರಾಜ್ಯದ ಅರಣ್ಯ ಪ್ರದೇಶವು ಮಹಾರಾಷ್ಟ್ತ್ರ ಹಾಗೂ ಬೆಳಗಾವಿ-ಉತ್ತರ ಕನ್ನಡ ಅಭಯಾರಣ್ಯಗಳಿಗೆ ಹೊಂದಿಕೊಂಡಿದೆ. ವನ್ಯಜೀವಿ ಪ್ರಾಣಿಗಳು ಮೂರು ರಾಜ್ಯಗಳ ವ್ಯಾಪ್ತಿಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಾತಂಕವಾಗಿ ಓಡಾಡಿಕೊಂಡಿರುವ ಬಗ್ಗೆ ಧಾರವಾಡದ ಗ್ರೀನ್ ಅರ್ಥ ಸಂಸ್ಥೆಯು 2001 ರಲ್ಲಿ ಅಧ್ಯಯನ ನಡೆಸಿ ಸಮೀಕ್ಷೆ ವರದಿ ಸಿದ್ಧಪಡಿಸಿತ್ತು. ವನ್ಯ ಪ್ರಾಣಿಗಳಿಗೆ ರಾಜ್ಯದ ಗಡಿಯೆಂಬ ನಿರ್ಭಧವಿಲ್ಲದಿರುವ ಬಗ್ಗೆ ಹಾಗೂ ಆಹಾರ ನೀರು ಹುಡುಕುವ ಸಂದರ್ಭದಲ್ಲಿ ಒಟ್ಟು 6500 ಚ.ಕಿ.ಮೀ. ಪ್ರದೇಶದಲ್ಲಿ ಓಡಾಡಿಕೊಂಡಿರುತ್ತವೆ. ಈ ಎಲ್ಲ ಅರಣ್ಯ ಪ್ರದೇಶಗಳು ಈಗ ಅಭಯಾರಣ್ಯ ವ್ಯಾಪ್ತಿಗೊಳಪಡುವುದರಿಂದ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಅನುಕೂಲವಾಗಲಿದೆ. ದಾಂಡೇಲಿ ಅಭಯಾರಣ್ಯಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಕ್ಯಾಸಲ್ರಾಕ್- ಅನಮೋಡ-ಅಖೇತಿ ಸುತ್ತಲಿನ 248 ಚ.ಕಿ.ಮೀ. ವ್ಯಾಪ್ತಿಯಲ್ಲಿ ಅನೇಕ ವಿರಳ ಅಪರೂಪದ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳಿವೆ. ಅನಮೋಡದ ಕೆಲ ಅರಣ್ಯ ಪ್ರದೇಶದ ಜಂಬಿಟ್ಟಿಗೆಯ ಗುಹೆಗಳಲ್ಲಿ 2002 ರಲ್ಲಿ ಅಪರೂಪದ ರೋಟನ್ಶ ಫ್ಟೀಟೇಲ್ಡ ಬಾವಲಿ ಕಂಡು ಬಂದಿರುವುದು ದೇಶದ ಪರಿಸರ ಪ್ರೀಯರಿಗೆ ಸಂತಸದ ವಿಷಯವಾಗಿದೆ. ಅಖೇತಿ ಹಾಗೂ ಹೆಮ್ಮಡಗಾ ಗಡಿಭಾಗದಲ್ಲಿರು ಮೇಲ್ಮೈ ಲಕ್ಷಣಗಳನ್ನು ಹೊಂದಿದೆ. 1950-60 ರಲ್ಲಿ ಪೋರ್ಚುಗೀಸರ ಸಮುಯದಲ್ಲಿ ಇಲ್ಲಿರುವ ಕಣಿವೆಗಳ ಕಳ್ಳಮಾರ್ಗದಲ್ಲಿ ವ್ಯವಹಾರ ನಡೆಯುತ್ತಿದ್ದರ ಬಗ್ಗೆ ಕುರುಹುಗಳಿವೆ…

loading...

LEAVE A REPLY

Please enter your comment!
Please enter your name here