ಬಸ್ ಆಟೊ ಡಿಕ್ಕಿ : ನಾಲ್ಕು ಸಾವು

0
12
loading...

ಹುಬ್ಬಳ್ಳಿ, 25 ತಾಲೂಕಿನ ಕುಸುಗಲ್ಲ ಹತ್ತಿರದ ಕಿರೇಸೂರ ಸೇತುವೆ ಬಳಿ ಖಾಸಗಿ ಬಸ್ ಹಾಗೂ ಆಟೊ ನಡುವೆ ಡಿಕ್ಕಿಯಾಗಿ ಆಟೊದಲ್ಲಿದ್ದ ಬಾಲಕ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಹುಬ್ಬಳ್ಳಿಯ ಆನಂದನಗರ ನವಾಸಿಗಳಾಗಿ ಖ್ವಾಜಾ ಹುಸೇನ್ ಚೆಕ್ಕೆವಾಲೆ (50) ಇವರ ಪುತ್ರಿ ನಸ್ರೀನ (18) ಹಾಗೂ ಮೊಮ್ಮಗ ರೇಹಾನ್ (4) ಅಹಮದಾಬಾದನ ರೆಶ್ಮಾ (20) ಎಂದು ಗುರುತಿಸಲಾಗಿದೆ. ಯಮನೂರ ದೇವಗಿರಿ ಹರಕೆ ತೀರಿಸಲು ಹೋಗಿ ವಾಪಸು ನಗರಕ್ಕೆ ಬರುತ್ತಿದ್ದ ಆರು ಜನರ ಪೈಕಿ ಈ ಮೂವರು ದುರ್ಮರಣಕ್ಕೀಡಾಗಿದ್ದಾರೆ.

ಅಪಘಾತಕ್ಕೆ ಈಡಾದ ವಾಹನದ ಕ್ಲೀನರ್ ಮೃತನಾದ ಬಾಲಕನ ಕಾಲುಗಳಿಗೆ ನಮಸ್ಕರಿಸಿ ಅಳುತ್ತಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಮಾನವೀಯತೆ ಮೆರೆದಿದ್ದಾನೆ. ಮಾಬೂಬ ಚೆಕ್ಕೆವಾಲೆ(22), ಬೀಬಿ ಆಯುಷಾ (55) ಸಾವು ಬದುಕಿನ ಮಧ್ಯ  ಹೋರಾಟ ನಡೆಸಿದ್ದಾರೆ.

 

loading...

LEAVE A REPLY

Please enter your comment!
Please enter your name here