ಬೆಳಗಾವಿಯಲ್ಲಿ ವಾಹನಗಳ್ಳರ ಬಂಧನ

0
27
loading...

ಬೆಳಗಾವಿ, ಫೆ. 22: ವಾಹನಗಳನ್ಮ್ನ ಕಳ್ಳತನ ಮಾಡಿ ಬ್ಬೆರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಕಳ್ಳರ ಜಾಲವನ್ನು ಬೆಳಗಾವಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಓರ್ವ ವಾಹನಗಳ್ಳನನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೆಯ ಮುಂದೆ ನಿಲ್ಲಿಸಲಾಗುತ್ತಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ ಸಚೀನ ವಿಠ್ಠಲ ಕಾಳೊಜಿ ಸಾ: ದಾಂಡೇಲಿ ಈತನನ್ನು ಗಡಹಿಂಗ್ಲಜ ತಾಲೂಕಿನ ಹಲಕರ್ಣಿ ಗ್ರಾಮದಲ್ಲಿ ಬಂಧಿಸಿ ಆತನ ವಶದಿಂದ 15 ಲಕ್ಷ ಮೌಲ್ಯದ 06 ವಾಹನಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ. ಸಂದೀಪ ಪಾಟೀಲ, ಐ.ಪಿ.ಎಸ್ ರವರು ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಅವರು ಬೆಳಗಾವಿ ನಗರದ ಮಾಳಮಾರುತಿ, ಮಾರ್ಕೇಟ ಹಾಗೂ ಕ್ಯಾಂಪ ಪೊಲೀಸ ಠಾಣೆಗಳ ವ್ಯಾಪ್ತಿಯಲ್ಲಿ ಆರೋಪಿಯು ವಾಹನಗಳನ್ನು ಕಳ್ಳತನ ಮಾಡುತ್ತಿದ್ದು, ಸದರಿ ಆರೋಪಿತನ ಬಗ್ಗೆ ಬೆರಳಚ್ಚು ತಜ್ಞರಿಂದ ಸೂಕ್ತ ಮಾಹಿತಿ ಕಲೆಹಾಕಿ ಆತನನ್ನು ಬಂಧಿಸುವಲ್ಲಿ ಮಾರ್ಕೇಟ ಠಾಣೆಯ ಪಿ.ಐ ಶ್ರೀ. ಎಸ್.ಎಮ್.ನಾಗರಾಜ, ಮಾಳಮಾರುತಿ ಪೊಲೀಸ ಠಾಣೆ ಪಿ.ಎಸ್.ಐ (ಸಿಬಿ) ಶ್ರೀ. ಎಮ್.ಬಿ. ಸೈಯ್ಯದ,  ಜೆ.ಎಮ್. ಕಾಲಿಮಿರ್ಚಿ ಪಿ.ಎಸ್.ಐ (ಕಾಸು) ಹಾಗೂ ಸಿಬ್ಬಂದಿ ಜನರು ಯಶಸ್ವಿಯಾಗಿರುತ್ತಾರೆ. ಸದರಿ ಆರೋಪಿತನ ವಶದಿಂದ 03 ಇಂಡಿಕಾ ಕಾರ ನೊಂದಣಿ ಸಂಖ್ಯೆ: 1) ಕೆಎ-49/ಎಮ್-2299, 2) ಕೆಎ-25/ಎನ್-2299 ಹಾಗೂ 3) ಕೆಎ-22/ಎನ್-4657, 01 ಎಸ್ಟೀಮ್ ಕಾರ್ ನಂ: ಎಮ್.ಎಚ್-10/ಎ-418 ಮತ್ತು 02 ಟ್ರ್ಯಾಕ್ಸ್ ನಂ: 1) ಕೆಎ-22/ಟೆಂಪ-7807 ಹಾಗೂ 2) ಕೆಎ-31/ಎಮ್-3421 ಹೀಗೆ ಒಟ್ಟು ರೂ. 15 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.

ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಯವರ ಈ ವಿಶೇಷ ಕಾರ್ಯಾಚರಣೆಯಿಂದ ಒಟ್ಟು 06 ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಈ ಆರೋಪಿಯು ಸದರಿ ವಾಹನಗಳನ್ನು ತಾನೋಬ್ಬನೇ ಕಳ್ಳತನ ಮಾಡಿದ್ದನೋ ಅಥವಾ ಬೇರೆ ಯಾರಾದರೂ ಅವನೊಂದಿಗೆ ಸೇರಿ ಕಳ್ಳತನ ಮಾಡಿರುವರೋ ಎಂಬುವ ಬಗ್ಗೆ ಹೆಚ್ಚಿನ ತನಿಖೆಯನ್ನು ಮುಂದುವರೆಯಿಸಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ಎಚ್.ಗಂಗರೆಡ್ಡಿ ಮತ್ತು ಮಾರ್ಕೇಟ ಉಪವಿಭಾಗದ ಸಹಾಯಕ ಪೊಲೀಸ ಅಧೀಕ್ಷಕರಾದ ರವಿ ಚನ್ನಣ್ಣವರ ರವರು ಉಪಸ್ಥಿತರಿದ್ದರು…

loading...

LEAVE A REPLY

Please enter your comment!
Please enter your name here