ಬೆಳಗಾವಿ ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ: ಶೇ.95.18ರಷ್ಟು ಸಾಧನೆ

0
7
loading...

ಬೆಳಗಾವಿ,21- ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಇದೇ ಫೆಬ್ರುವರಿ 19 ಹಾಗೂ 20 ರಂದು ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 595650 ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಮೂಲಕ ಪ್ರತಿಶತ 95.18 ರಷ್ಟು ಸಾಧನೆಯನ್ನು ಮಾಡಲಾಗಿದೆಯೆಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 625801 ಮಕ್ಕಳಿಗೆ ಪಲ್ಸ್ ಪೊಲಿಯೋ ಹನಿ ಹಾಕುವ ಗುರಿ ಹೊಂದಲಾಗಿತ್ತು. ಈ ಪೈಕಿ ಜಿಲ್ಲೆಯ ಗ್ರಾಮೀಣ ಪ್ರದೇಶದ 470524 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿಯನ್ನು ಹೊಂದಿ 457630 ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ. ಅದರಂತೆ ನಗರ ಪ್ರದೇಶದ 155277 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿಯನ್ನು ಹೊಂದಿ 138020 ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲಾಗಿದೆ. ಮಕ್ಕಳಿಗೆ ಪೋಲಿಯೋ ಹನಿ ಹಾಕಿದ ಕುರಿತು ಶೇಕಡಾವಾರು, ತಾಲೂಕಾವಾರು ವಿವರ ಈ ಕೆಳಗಿನಂತಿದೆ.

ಅಥಣಿ-97.31, ಬೈಲಹೊಂಗಲ-94.67, ಬೆಳಗಾವಿ-87.46, ಚಿಕ್ಕೌಡಿ-91.81, ಗೋಕಾಕ-100.34, ಹುಕ್ಕೇರಿ-98.92, ಖಾನಾಪೂರ 96.78, ರಾಯಬಾಗ-99.37, ರಾಮದುರ್ಗ-96.75, ಸವದತ್ತಿ-96.83 ರಷ್ಟು ಸಾಧನೆ ಮಾಡಲಾಗಿದೆ…

loading...

LEAVE A REPLY

Please enter your comment!
Please enter your name here