ಸಿದ್ದು ಮಾತಿನಿಂದ ಅಪಾರ ನೋವು: ಕುಮಾರಸ್ವಾಮಿ

0
11
loading...

ದೇವನಹಳ್ಳೀ ಫೆ. 26: ದೇವಗೌಡರ ಗರಡಿಯಲ್ಲಿ ಬೆಳೆದು ಬಂದು ರಾಜಕೀಯ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯ ಈಗ ಅವರನ್ನು ಗೇಲಿ ಮಾಡುವಷ್ಟು ದೊಡ್ಡವರಾಗಿರುವುದು ನಮ್ಮ ಮನಸ್ಸಿಗೆ ಅಪಾರ ನೋವನ್ನು ಉಂಟು ಮಾಡಿದೆ ಎಂದು ಮಾಜಿಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.  ಇಂದು ತುಮಕೂರಿನಲ್ಲಿ ಸಿದ್ದರಾಮಯ್ಯನವರು ದೇವೇಗೌಡರ ಬಗ್ಗೆ ಗೇಲಿ ಮಾತುಗಳನ್ನು ಆಡಿರುವದಕ್ಕೆ ಉತ್ತರ ನೀಡಿದ ಕುಮಾರಸ್ವಾಮಿ ನಾವು ಸಿದ್ದರಾಮಯ್ಯನವರಷ್ಟು ಕಠಿಣ ಹೃದಯವನ್ನು ಹೊಂದಿರುವದಿಲ್ಲ. ದೇವೇಗೌಡರು ಸಿದ್ದರಾಮಯ್ಯನವರನ್ನು ಯಾವ ರೀತಿಯಿಂದ ರಾಜಕೀಯವಾಗಿ ಬೆಳೆಸಿದ್ದರು ಎಂಬುದನ್ನು ಸಿದ್ದರಾಮಯ್ಯ ತಮ್ಮ ಆತ್ಮಕ್ಕೆ ಕೇಳಿಕೊಳ್ಳುವ ಕಾರ್ಯವನ್ನು ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ರಾಜಕೀಯ ಲಾಭಕ್ಕಾಗಿ ದೇವೇಗೌಡರ ಕುಟುಂಬದ ಮೇಲೆ ಗೂಬೆ ಕೂರಿಸುವ ಕಾರ್ಯವನ್ನು ಸಿದ್ದರಾಮಯ್ಯ ತಕ್ಷಣ ಕೈಬಿಡಬೇಕು ಇಲ್ಲದಿದ್ದರೆ ಅವರು ಈ ರೀತಿಯ ನಡತೆಗಾಗಿ ರಾಜ್ಯದ ಜನರು ಅವರಿಗೆ ತಕ್ಕಪಾಠವನ್ನು ಕಲಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.  ಸಿದ್ದರಾಮಯ್ಯನವರನ್ನು ವಕೀಲ ವೃತ್ತಿಯಿಂದ ರಾಜಕಾರಣಕ್ಕೆ ತಂದವರು ಯಾರು ಅವರನ್ನು ರಾಜಕೀಯವಾಗಿ ಬೆಳೆಸಿದವರು ಯಾರು ಅವರನ್ನು ರಾಜ್ಯದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದವರು ಯಾರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅಷ್ಟೆಲ್ಲ ಉಪಕಾರ ಮಾಡಿದ ದೇವೇಗೌಡರ ವಿರುದ್ದ ಅವರ ಹಿರಿಯತನವನ್ನು ಲೆಕ್ಕಿಸದೆ ಮಾತನಾಡುತ್ತಿರುವ ಸಿದ್ದರಾಮಯ್ಯನವರು ಯಾವ ರೀತಿಯ ವ್ಯಕ್ತಿತ್ವನವನ್ನು ಹೊಂದಿದ್ದಾರೆ ಎಂಬುದನ್ನು ಅವರೇ ರಾಜ್ಯದ ಜನರ ಮುಂದೆ ಪ್ರದರ್ಶನ ಮಾಡಿದಂತೆ ಆಗುತ್ತದೆ.

ತತ್ವ ಸಿದ್ದಾಂತದ ಕಾರಣದಿಂದ ಪ್ರಧಾನಿ ಹುದ್ದೆಯಲ್ಲಿ ದೇವೇಗೌಡರು ತ್ಯಾಗ ಮಾಡಿದ್ದರು. ಅವರು ಎಂದೂ ಅಧಿಕಾರಕ್ಕಾಗಿ ಯಾರ ಮುಂದೆಯೂ ಕೈಯೊಡ್ಡಿಲ್ಲ ಮತ್ತು ಅಧಿಕಾರಕ್ಕಾಗಿ ಕಣ್ಣೀರು ಹಾಕುವ ಕಾರ್ಯವನ್ನು ಮಾಡಿರುವದಿಲ್ಲ ಇದು ಸಿದ್ದರಾಮಯ್ಯನವರು ಅರಿತುಕೊಂಡಿರುವ ಸತ್ಯ ಸಂಗತಿಯಾಗಿದೆ ಎಂದು ಹೇಳಿದರು.

loading...

LEAVE A REPLY

Please enter your comment!
Please enter your name here