ಗುಣಮಟ್ಟದ ಕಾಮಗಾರಿ ಕೈಗೊಳ್ಳಿ

0
23
loading...

ವಿಜಾಪುರ.ಮಾ,19-ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು ಗುಣಮಟ್ಟವನ್ನು ಕಾಯ್ದುಕೊಂಡು ಪರಿಪೂರ್ಣವಾಗಿ ನಿರ್ವಹಿಸಬೇಕೆಂದು ಬೆಳಗಾವಿ ವೃತ್ತ ಲೋಕೋಪಯೋಗಿ  ಅಧೀಕ್ಷಕ ಅಭಿಯಂತರ ಎಂ.ನಾರಾಯಣ ಸಲಹೆ ನೀಡಿದರು.

ಅವರು ಲೋಕೋಪ ಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವಿಭಾಗೀಯ ಕಚೇರಿಯಲ್ಲಿ ಇಂದು ಲೋಕೋಪ ಯೋಗಿ ತಾಂತ್ರಿಕ ಸಿಬ್ಬಂದಿ, ಗುತ್ತಿಗೆದಾ ರರಿಗೆ ಆಯೋಜಿಸಿದ ಗುಣ ಭರವಸೆ ತರಬೇತಿಯನ್ನು ಉದ್ಘಾಟಿಸಿ ಮಾತ ನಾಡುತ್ತ, ಶೆಡ್ಯೂಲ್ನಂತೆ ಕಾರ್ಯ ನಿರ್ವಹಿಸಬೇಕು. ವ್ಯತಿರಿಕ್ತವಾಗಿ ಕಾರ್ಯನಿರ್ವಹಣೆ ಮಾಡಬಾರದು ಎಂದು ಸಲಹೆ ನೀಡಿದರು.

ಅಧಿಕಾರಿಗಳು ಗುತ್ತಿಗೆದಾ ರರು, ಕೆಲಸದಲ್ಲಿ ತಪ್ಪು ಮಾಡಿ ಪ್ರಶ್ನೆಗೆ ಒಳಗಾಗಬಾರದು. ಗುಣಮಟ್ಟಕ್ಕೆ ಆದ್ಯತೆ ನೀಡಿ ಲೋಕೋಪಯೋಗಿ ಇಲಾಖೆಗೆ ಗೌರವ ತರಬೇಕೆಂದು ಹೇಳಿದರು.

ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಯಡಹಳ್ಳಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗುಣಮಟ್ಟದ ಕೆಲಸ ಮಾಡಿ, ಐತಿಹಾಸಿಕ ವಿಜಾಪುರ ನಗರವನ್ನು ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸಬೇಕು. ಇದಕ್ಕಾಗಿ ಇಲಾಖೆ ಯ ಎಲ್ಲ ಸಿಬ್ಬಂದಿ, ಗುತ್ತಿಗೆದಾರರು, ಉತ್ತಮ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಸಿ.ಎನ್. ಪಾಟೀಲ, ಜಿ.ಎಸ್.ಪಾಟೀಲ, ರಾಜು ಮಜುಮದಾರ, ಆರ್.ಪಾಲಣ್ಣಾ, ದ್ವಾರಕಾ ಮಸಳಿ, ಎಂ.ಎ.ಪಾಟೀಲ, ಗುತ್ತಿಗೆದಾರರಾದ ನಂದಯ್ಯಗೋಳ, ಎಸ್.ಸಿ.ಚಿಕ್ಕರಡ್ಡಿ, ಪಿ.ಎಸ್.ಖದರಿ, ಎನ್.ಬಿ.ಬಿಂಜಲಬಾವಿ, ಸೋಮು, ಶ್ರೀಕಾಂತ ಹೊಸಪೇಟೆ, ಇತರರು ಭಾಗವಹಿಸಿದ್ದರು.

ಆರಂದಲ್ಲಿ  ವಿ.ಡಿ. ಹಲಕುಡೆ, ಸ್ವಾಗತಿಸಿದರು. ಪಂಡಿತರಾವ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎಂ.ಎ.ಪಾಟೀಲ ವಂದಿಸಿದರು.

 

 

loading...

LEAVE A REPLY

Please enter your comment!
Please enter your name here