ನೀರನ್ನು ಮಿತವಾಗಿ ಬಳಸುವದರೊಂದಿಗೆ ಸದ್ಬಳಕೆಮಾಡಿಕೊಳ್ಳಲು ರೈತರಿಗೆ ಕರೆ : ಗೋವಿಂದ ಕಾರಜೋಳ

0
17
loading...

ಬಾಗಲಕೋಟ, 19- ನೀರನ್ನು ಮಿತವಾಗಿ ಬಳಸಿಕೊಂಡು ಬೆಳೆ ಬೆಳೆಯುವದರೊಂದಿಗೆ ಆರ್ಥಿಕವಾಗಿ ಸದೃಡರಾಗಿ ಎಂದು ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕ್ಕತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ರೈತರಿಗೆ ಕರೆ ನೀಡಿದರು.

ಅವರು ಇಂದು ಮುಧೋಳ ತಾಲೂಕಿನ ಶಿರೋಳ ಗ್ರಾಮದ ದತು ್ತಬಾಗ ಇಂಗು ಕೆರೆಗೆ ಬಾಗೀನ ಅರ್ಪಿಸಿ ಮಾತನಾಡಿ, ಈ ಭಾಗದ ರೈತರ ಬಹುದಿನಗಳ ಕನಸು ನನಸಾಗಿದ್ದು, ಹರ್ಷವಾಗಿದೆ ಎಂದರು. ನೀರನ್ನು ಸದುಪಯೋಗ ಪಡಿಸಿಕೊಂಡು ರೈತರು ಆರ್ಥಿಕವಾಗಿ ಪ್ರಗತಿ ಹೊಂದಬೇಕು. ನೀರನ್ನು ಸ್ವಚ್ಛವಾಗಿ ಇಡುವಲ್ಲಿ ಶ್ರಮಿಸಬೇಕೆಂದರು. ಈ ಕೆರೆಯ ನಿರ್ಮಾಣದಿಂದ ಸುತ್ತಮುತ್ತಲಿನ 1.50 ಕಿ.ಮೀ ಬಾವಿ ಮತ್ತು ಬೋರ ವೆಲ್ಗಳಿಗೆ ಅಂತರಜಲ ಮಟ್ಟ ಹೆಚ್ಚುತ್ತದೆ.

ರೈತರು ಹೆಚ್ಚು ನೀರನ್ನು ಹೊಲಗಳಲ್ಲಿ ಹರಿಬಿಟ್ಟರೆ, ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಬಳಸಿದ ಗೊಬ್ಬರ, ಮಣ್ಣು ಮುಂತಾದವು ಹರಿದು ಹೋಗುವುದನ್ನು ತಡೆಗಟ್ಟಲು ನೀರನ್ನು ವಿತವಾಗಿ ಬಳಸಿ ಎಂದರು.

ಬೌಗೋಳಿಕ ತಜ್ಞರ ಸಮಿತಿ ಹೇಳಿದಂತೆ ಮುಂಬರುವ 2020ರ ವೇಳೆಗೆ ಉತ್ತರ ಕರ್ನಾಟಕದ 8 ಜಿಲ್ಲೆಗಳು ಮರ ಭೂಮಿಯಾಗಿ ಗೋಚರಿಸಲಿದೆಯಂತೆ. ಅದನ್ನು ಅರಿತುಕೊಂಡು ನೀರನ್ನು ಮಿತವಾಗಿ ಬಳಸಿ ಹೊಲಗಳಲ್ಲಿ ಒಡ್ಡು, ಹೊಂಡ ಮುಂತಾದವುಗಳನ್ನು ನಿರ್ಮಿಸಿ ಅಂತರ ಜಲಮಟ್ಟವನ್ನು ಹೆಚ್ಚಿಸಬಹುದಾಗಿದೆ ಎಂದರು. ಈ ನಿಟ್ಟಿನಲ್ಲಿ ರೈತರು ನೀರನ್ನು ಹಾಲಿನಂತೆ ಉಪಯೋಗಿಸಿ ಎಂದು ಹೇಳಿದರು.

ಅಂದಿನ ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಈ ಕೆರೆ ಕಾಲಾಂತರದಲ್ಲಿ ಬೇಸಾಯದ ಭೂಮಿಯಾಗಿ ಪರಿಣಮಿಸಿ ತದನಂತರ ವರ್ಷಗಳಲ್ಲಿ ಭೂಮಿಯನ್ನು ಕೆರೆ ನಿರ್ಮಾಣಕ್ಕೆ ನೀಡಿದ ಆ ರೈತರಿಗೆ ಅಭಿನಂದನೆ ಹೇಳಿದರು. ಕೆರೆ ನಿರ್ಮಾಣದ ಯೋಜನೆಯ ಅಂದಾಜು ಮೊತ್ತ 362 ಲಕ್ಷಗಳಾಗಿದ್ದು, ಕೆರೆಯಲ್ಲಿ ಸಂಗ್ರಹಿಸಲಾದ ನೀರಿನಿಂದ ಸುಮಾರು 90 ಹೆಕ್ಟೆರ್ ಹಾಗೂ 222 ಎಕರೆ ಜಮಿನುಗಳಿಗೆ ಕಲ್ಪಿಸಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ಆರ್.ಬಿ.ಪಾಟೀಲ ಅವರು ಮಾತನಾಡಿ ಈ ಕೆರೆಯಲ್ಲಿ 9.45 ಎಂ.ಸಿ.ಎಫ್.ಡಿ ಹಾಗೂ 0.267 ಎಮ್.ಸಿ.ಎಮ್ ನೀರನ್ನು ಸಂಗ್ರಹಿಸಬಹುದಾಗಿದೆ. ಹಾಗೂ ಪರೋಕ್ಷವಾಗಿ 90 ಹೆಕ್ಟೆರ ಮತ್ತು 222 ಎಕರೆ ಜಮೀನು ನೀರಾವರಿ ಆಗುತ್ತದೆ ಎಂದರು. ಕೆರೆ ನಿರ್ಮಾಣದಿಂದ ಶಿರೋಳ, ಸೋರಗಾಂವ. ಕುಳಲಿ ಹಾಗೂ ಮಳಲಿ ಗ್ರಾಮದ ರೈತರು ಫಲಾನುಭವಿಗಳಾಗಿರುತ್ತಾರೆ.

ಈ ಕೆರೆಯ ಉದ್ದ 918 ಮೀಟರಗಳಾಗಿದ್ದು, ಎತ್ತರ 7.86 ಮೀ. ಹಾಗೂ ಕೆರೆಯ ನೀರು ಹರಿಯುವ ಕೋಡಿ ಉದ್ದ 420 ಮೀ. ಅಗಲ 36 ಮೀ. ಇದೆ ಎಂದರು.

ಕಾರ್ಯಕ್ರಮದಲ್ಲಿ ಸುಗರ ಲಿ. ಅಧ್ಯಕ್ಷರಾದ ಆರ್.ಸಿ ತಳೇವಾಡ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿರೋಳ ಗ್ರಾ.ಪಂ. ಅಧ್ಯಕ್ಷರಾದ ತುಳಜಪ್ಪ ವಾಲಿಮರದ ಸೇರಿದಂತೆ ವಿವಿಧ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಾನಿಧ್ಯವನ್ನು ಶಿರೋಳದ ರಾಮಾರೋಡಮಠದ ಮಹಾಸ್ವಾಮಿಗಳಾದ ಶ್ರೀಶ್ರೀಶ್ರೀ ಶಂಕರಾರೂಢ ಸ್ವಾಮಿಗಳು ವಹಿಸಿದ್ದರು. ಪ್ರಾರಂಭದಲ್ಲಿ ಶಾಲಾ ಮಕ್ಕಳು ಪ್ರಾರ್ಥನಾ ಹಾಗೂ ನಾಡಗೀತೆಯನ್ನು ಹಾಡಿದರು. ಸ್ವಾಗತವನ್ನು ನಿವೃತ್ತ ಪ್ರಾಚಾರ್ಯರಾದ ಐ.ಎಂ.ಹಳಂಗಳಿ ಅವರು ಮಾಡಿದರು. ಕೊನೆಯಲ್ಲಿ ಅಶೋಕ ಜವಳಗಿ ವಂದಿಸಿದರು.

ಕಾರ್ಯಕ್ರಮದಲ್ಲಿ ಕೆರೆ ನಿರ್ಮಾಣಕ್ಕೆ ನೀಡಿದ ಬೂದಾನಿಗಳಿಗೆ ಹಾಗೂ ಕೆರೆ ನಿರ್ಮಾಣದಲ್ಲಿ ಶ್ರಮಿಸಿದವರಿಗೆ ಸನ್ಮಾನಿಸಲಾಯಿತು.

loading...

LEAVE A REPLY

Please enter your comment!
Please enter your name here