ಯಡಿಯೂರಪ್ಪ ಅಭಿನಂದನೆಗೆ ಅದ್ದೂರಿ ಸಿದ್ದತೆ

0
10
loading...

ಹುಬ್ಬಳ್ಳಿ, ಮಾ.10: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಶಕ್ತಿ ಪ್ರದರ್ಶನವನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಜನ್ಮದಿನದ ಅಭಿನಂದನಾ ಸಮಾರಂಭವನ್ನು ಹುಬ್ಬಳ್ಳಿಯಲ್ಲಿ ರವಿವಾರ ಏರ್ಪಡಿಸಲಾಗಿದ್ದು, ಈ ಸಮಾವೇಶವನ್ನು ಅದ್ದೂರಿಯಾಗಿ ನಡೆಸಲು ಅವರ ಬೆಂಬಲಿಗರ ಎಲ್ಲ ರೀತಿಯ ಸಿದ್ದತೆಗಳನ್ನು ಹಗಲುರಾತ್ರಿ ಎನ್ನದೆ ಮಾಡ ತೊಡಗಿದ್ದಾರೆ.

ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಈ ಸಮಾವೇಶವನ್ನು ಅಯೋಜಿಸಲಾಗಿದೆ.  ರಾಜ್ಯದ ಎಲ್ಲ ಜಿಲ್ಲೆಗಳಿಂದ ಕಾರ್ಯಕರ್ತರ ಬೆಂಬಲಿಗರನ್ನು ಕರೆ ತರಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಕನಿಷ್ಠ 2 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸುವದು ಯಡಿಯೂರಪ್ಪ ಬೆಂಬಲಿಗರ ಉದ್ದೇಶವಾಗಿದೆ.

ಬಹಿರಂಗದಲ್ಲಿ ಇದು ಶಕ್ತಿ ಪ್ರದರ್ಶನವಲ್ಲ ಯಡಿಯೂರಪ್ಪನವರು 70ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವದರಿಂದ ಅವರಿಗೆ ನಡೆಸಲಿರುವ ಅಭಿನಂದನಾ ಸಮಾರಂಭವಾಗಿದೆ ಎಂದು ಯಡಿಯೂರಪ್ಪ ಬೆಂಬಲಿಗ ಸಚಿವರು ಸ್ಪಷ್ಟನೆ ನೀಡುತ್ತಿದ್ದರೂ ಸಹ ಇದು ಯಡಿಯೂರಪ್ಪನವರ ಶಕ್ತಿ ಪ್ರದರ್ಶನಕ್ಕಾಗಿಯೇ ನಡೆಯುತ್ತಿರುವ ಸಮಾವೇಶವಾಗಿದೆ ಎಂದು ಹೇಳಲಾಗಿದೆ.

ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮೀನ ಮೇಷ ಮಾಡುತ್ತಿರುವ ವರಿಷ್ಠರಿಗೆ ರಾಜ್ಯದಲ್ಲಿ ಯಡಿಯೂರಪ್ಪನವರಿಗೆ ಎಷ್ಟು ಜನರ ಬೆಂಬಲವಿದೆ ಎಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಈ ಸಮಾರಂಭ ನಡೆಯಲಿದೆ ಎಂದು ಹೇಳಲಾಗಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಆಮಂತ್ರಣ ನೀಡಲಾಗಿತ್ತು. ಆದರೆ ಈ ಮೊದಲು ಸಮಾರಂಭದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದ ಸದಾನಂದಗೌಡರು ಈಗ ಪೂರ್ವಭಾವಿ ಕಾರ್ಯಕ್ರಮ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯ ಪ್ರಚಾರದ ನೆಪಗಳನ್ನು ಮುಂದೆ ಮಾಡುತ್ತಿರುವದರಿಂದ ಅವರು ಆಗಮಿಸುವರೆ ಇಲ್ಲವೇ ಎಂಬುದು ಅನುಮಾನಕ್ಕೆ ಕಾರಣವಾಗಿದೆ.

ಜೊತೆಗೆ ರಾಷ್ಟ್ತ್ರೀಯ ಅಧ್ಯಕ್ಷ ನೀತೀನ್ ಗಡ್ಕರಿ ಹಾಗೂ ರಾಜ್ಯದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೂ ಆಮಂತ್ರಣವನ್ನು ನೀಡಲಾಗಿದೆ. ರಾಜ್ಯದ ಭಾಜಪ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಧರ್ಮೇಂದ್ರ ಪ್ರಧಾನ್ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದು, ನಾಳೆ ಅವರು ಹುಬ್ಬಳ್ಳಿಗೆ ಬರುತ್ತಾರೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಯಡಿಯೂರಪ್ಪ ಬೆಂಬಲಿಗ ಶಾಸಕರು ಸಚಿವರು ಈ ಸಮಾವೇಶವನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳ ತೊಡಗಿದ್ದಾರೆ. ನೆಹರು ಮೈದಾನದಲ್ಲಿ ವಿಶಾಲವಾದ ಪೆಂಡಾಲ್ ಮತ್ತು ಸುಸಜ್ಜಿತವಾದ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ನಗರದ ತುಂಬಾ ಬ್ಯಾನರ್ ಮತ್ತು ಕಟೌಟ್ಗಳನ್ನು ಕಟ್ಟಿ ಜೊತೆಗೆ ಭಾಜಪ ಧ್ವಜಗಳನ್ನು ಕಟ್ಟಿ ನಗರವನ್ನು ಶೃಂಗರಿಸುವ ಕಾರ್ಯವನ್ನು ಮಾಡಲಾಗಿದೆ. ಈ ರೀತಿಯಾಗಿ ನಗರವನ್ನು ಈ ಸಮಾರಂಭಕ್ಕಾಗಿ ಮದುಮಗಳನ್ನು ಶೃಂಗರಿಸುವ ಕಾರ್ಯವನ್ನು ಮಾಡಲಾಗಿದೆ. ಸಮಾವೇಶದ ಯಶಸ್ಸಿಗಾಗಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸಲು ಪಕ್ಷದ ಎಲ್ಲ ಶಾಸಕರು, ಮತ್ತು ಸಂಸದರು ಧುರೀಣರಿಗೆ ಆಹ್ವಾನವನ್ನು ನೀಡಲಾಗಿದೆ.

ಈ ರೀತಿಯಾಗಿ ಈ ಸಮಾರಂಭದ ಯಶಕ್ಕಾಗಿ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಉದಾಸಿ ಮುರುಗೇಶ ನಿರಾಣಿ ಉಮೇಶ್ ಕತ್ತಿ ಮೊದಲಾದವರು ದುಡಿಯ ತೊಡಗಿದ್ದಾರೆ…

loading...

LEAVE A REPLY

Please enter your comment!
Please enter your name here