ರೆಡ್ಕ್ರಾಸ್ನಿಂದ ಉಚಿತ ಪ್ರಥಮ ಚಿಕಿತ್ಸಾ ಪೆಟ್ಟಗೆ ವಿತರಣೆ

0
13
loading...

ಕಾರವಾರ,4- ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾಶಾಖೆ ಕಾರವಾರ ಇವರ ವತಿಯಿಂದ ರಾಜ್ಯ ಶಾಖೆ ಬೆಂಗಳೂರಿನಿಂದ ಬಂದಂತಹ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅವಶ್ಯ ಇರುವ ಸರಕಾರಿ ಹಾಗೂ ಅರೆ ಸರಕಾರಿ ಸಂಸ್ಥೆಗಳಿಗೆ ನೀಡಲಾಯಿತು. ಈ ಪೆಟ್ಟಿಗೆ ಗಳನ್ನು ಭಾರತೀಯ ರೆಡ್ ಕ್ರಾಸ್ಸಂಸ್ಥೆ ಜಿಲ್ಲಾಶಾಖೆಯ ಅಧ್ಯಕ್ಷರೂ ಹಾಗೂ ಜಿಲ್ಲಾಧಿಕಾರಿಗಳೂ ಆಗಿರುವ ಇಂಕಾಗ್ಲೌ ಜಮೀರ್ ಹಾಗೂ ಅಪರಾ ಜಿಲ್ಲಾಧಿಕಾರಿ ಗಳೂ ಆಗಿರುವ ಡಾ.ನರಸಿಂಹಮೂರ್ತಿ ರವರ ಮಾರ್ಗದರ್ಶನದಲ್ಲಿ ಅವರ ಆದೇಶದಂತೆ ರೆಡ್ಕ್ರಾಸನ ಚೇರ್ಮೆನ್ ರಾಗಿರುವ ಪಿ.ಎಮ್.ತಾಂಡೇಲರವರ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಈ ಪೆಟ್ಟಿಗೆಗಳನ್ನು ಅವಶ್ಯಕ ಸಂಸ್ಥೆಗಳಿಗೆ ನೀಡಲಾಗುತ್ತಿದ್ದು ಸಂದರ್ಭಕ್ಕನು ಸಾರವಾಗಿ ತುರ್ತಪರಿಸ್ಥಿತಿಯಲ್ಲಿ ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ರೆಡ್ಕ್ರಾಸ್ನ ವೈಸ್ ಚೇರ್ಮೆನ್ರಾದ ನಜೀರ್ ಅಹಮದ್ ಯು.ಶೇಖ್, ರೆಡ್ಕ್ರಾಸ್ನ ರಾಜ್ಯ ಆರೋಗ್ಯ ಉಪಸಮಿತಿಯ ಸದಸ್ಯೆಯಾದ ಫೈರೋಜಾ ಬೇಗಂ ಎನ್.ಶೇಖ್, ರೆಡ್ಕ್ರಸ್ನ ರಾಜ್ಯ ಶಾಖೆಯ ಸದಸ್ಯರಾದ ವೈ.ಸದಾಶಿವ, ರೆಡಕ್ರಾಸ್ನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಭಾಕರ್ ಮಾಳ್ಸೇಕರ್, ಹಾಗೂ ಲಯನ್ಸ ಡಿಸ್ಟ್ತ್ರಿಕ್ ಚೇರ್ಪರ್ಸನ್ರಾದ ಮಂಜುನಾಥ್ ಎಸ್.ಪವಾರ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಭಾರತೀಯ ರೆಡ್ಕ್ರಾಸ್ನ ಕಾರ್ಯದರ್ಶಿಯಾದ ಶಂಭು ಶಟ್ಟಿಯವರು ಎಲ್ಲರನ್ನು ಸ್ವಾಗತಿಸಿದರು.

ಈ ಪೆಟ್ಟಿಗೆಗಳಲ್ಲಿ ಮೂರನ್ನು ಪೋಲಿಸ್ ಇಲಾಖೆಗೆ ನೀಡಿದ್ದು ಇಲಾಖೆಯ ಪರವಾಗಿ ನಗರ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಡರ್ ನಿಶ್ಚಲ್ ಕಮಾರ್ರವರು ಸ್ವೀಕರಿಸಿದರು. ಪೊಲಿಟೆಕ್ನಿಕ್ ಕಾಲೇಜಿಗೆ ನೀಡಿದ ಪೆಟ್ಟಿಗೆಯನ್ನು ಪ್ರಾಚಾರ್ಯರಾದ ವಿ.ಎಮ್.ಹೆಗಡೆ ಯವರು ಸ್ವೀಕರಿಸಿದರು. ಉಳಿದ ಪೆಟ್ಟಿಗೆಗಳನ್ನು ದಿವೇಕರ್ ಕಾಲೇಜು, ಸ್ವೀಕಾರ ಕೇಂದ್ರ, ಆಶಾನಿಕೇತನ ಶಾಲೆ, ನಗರಸಭೆ, ಯುನಿಟಿ ಪ್ರೌಡ ಶಾಲೆಯವರಿಗೆ ನೀಡಲಾಯಿತು.

 

 

 

 

loading...

LEAVE A REPLY

Please enter your comment!
Please enter your name here