ವಿಜ್ಞಾನವು ಮನುಷ್ಯನ ಬದುಕಿನ ಅವಿಭಾಜ್ಯ ಅಂಗ : ಮಠಪತಿ

0
15
loading...

ಬೆಳಗಾವಿ,4- ನಗರದ ಶೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸದಾಶಿವಪ್ಪ ಪ್ರಭಪ್ಪ ಮೂಗಿ  ಡಿ.ಇಡಿ. ಕಾಲೇಜು ಶಿವಬಸವ ಬಗರ, ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಷ್ಟ್ತ್ರೀಯ ವಿಜ್ಞಾನ ದಿನಾಚರಣೆ ಮತ್ತು ಸರ್ ಸಿ.ವಿ.ರಾಮನ್ರ ಜನ್ಮದಿನದ ಅಂಗವಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿ.ಬಿ.ಮಠಪತಿ ಮಾತನಾಡಿ, ವಿಜ್ಞಾನವು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ ಹಾಗೂ ವಿಜ್ಞಾನದಲ್ಲಿ ಆಸಕ್ತಿ, ಅಭಿರುಚಿ ಸಂಶೋಧನಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷೆತಯನ್ನು ಭಾರತಿ ಮಠದ ವಹಿಸಿ ಮಾತನಾಡಿ ಭಾರತ ಒಂದು ಶಕ್ತಿಶಾಲಿ ರಾಷ್ಟ್ತ್ರವಾಗಿ ಹೊರಹೊಮ್ಮಲು ಭಾರತೀಯ ವಿಜ್ಞಾನಿಗಳ ಕೊಡುಗೆ ಅಮೂಲ್ಯವಾದುದು ಎಂದು ಹೇಳಿದರು. ವಿಶೇಷ ಉಪನ್ಯಾಸಕಿಯಾಗಿ ಆಗಮಿಸಿದ ಎಂ.ಯು.ಮಟ್ಟೀಕಲ್ಲಿ ಮಾತನಾಡಿ, ಭಾವಿ ಶಿಕ್ಷಕರು ವಿಜ್ಞಾನದಲ್ಲಿ ಹೆಚ್ಚು ಹೆಚ್ಚು ಆವಿಷ್ಕಾರಗಳನ್ನು ಕಂಡುಕೊಂಡು ವಿಜ್ಞಾನದ ಸರಳತೆಯನ್ನು ಮಕ್ಕಳಿಗೆ ಬೋಧಿಸಬೇಕೆಂದು ಕರೆ ನೀಡಿದರು. ಗೀತಾ ಮಟ್ಟೀಕಲ್ಲಿ ಸ್ವಾಗತಿಸಿದರು. ಸುಮಂಗಲಾ ನರೇರ ವಂದಿಸಿದರೆ, ನಾಗರತ್ನಾ ಕುಲಕರ್ಣಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.

loading...

LEAVE A REPLY

Please enter your comment!
Please enter your name here