ಸುದ್ದಿಗೊಂದು ಚುಚ್ಚು ಮಾತು

0
14
loading...

ಪುಂಡತನ ಮಾಡಿದ ಐವರು ವಕೀಲರನ್ನು  ಪರಪ್ಪನ ಅಗ್ರಹಾರದ ಕಾರಾಗೃಹಕ್ಕೆ ಕಳಿಸಲಾಗಿದೆ.

– ಸುದ್ದಿ

  ಆ ವಕೀಲರು ಶಾಂತವಾಗಿ ಜೈಲಿನಲ್ಲಿ ಕುಳಿತು ತಾವು ಮಾಡಿದ್ದು ಸರಿಯೇ ತಪ್ಪೇ  ಎಂಬುದನ್ನು ತಮ್ಮ ಆತ್ಮಕ್ಕೆ ಕೇಳಿಕೊಳ್ಳುವ ಕಾರ್ಯವನ್ನು ಮಾಡಬೇಕಾಗಿದೆ.

ಯಡಿಯೂರಪ್ಪ ತೀವ್ರ ತಳಮಳದಲ್ಲಿ ಕುದಿಯತೊಡಗಿದ್ದು ಏನು ಮಾಡಲಿ ಏನು ಬಿಡಲಿ ಎಂಬ ಗೊಂದಲದಲ್ಲಿ ಸಿಕ್ಕಿ ಹಾಕಿ ಕೊಂಡಿದ್ದಾರೆ.

-ಸುದ್ದಿ

 ಅವರ  ತಳಮಳಕ್ಕೆ ಓಷಧವನ್ನು ನೀಡಬೇಕಾದ ವರಿಷ್ಠರು  ಆ ಬಗ್ಗೆ ಆಸಕ್ತಿಯನ್ನು ತಾಳದೆ ಇರುವುದರಿಂದ ಈ ರೀತಿ ಯಡಿಯೂರಪ್ಪನವರಿಗೆ ತಳಮಳ ಉಂಟಾಗಿದೆ.

  ನೀಲಿ ಚಿತ್ರ ನೋಡಿದವರು ಕೇವಲ ಮೂವರಲ್ಲ ಹತ್ತು ಜನರಿದ್ದಾರೆ ಎಂದು ಸದನ ಸಮೀತಿಯ ಸದಸ್ಯ ನೆಹರು ಓಲೆಕಾರ ಹೇಳಿದ್ದಾರೆ.

-ಸುದ್ದಿ          

ಮೂವರನ್ನೇ ಸಂಭಾಳಿಸುವುದು ಹೇಗೆ ಎಂಬ ಚಿಂತೆಯಲ್ಲಿ ಪಕ್ಷದ ನಾಯಕರು ಸಿಲುಕಿದ್ದರೆ  ಈ ಓಲೇಕಾರ ಮತ್ತಷ್ಟು ಅವರನ್ನು ಈ ರೀತಿ ಹೇಳುವ ಮೂಲಕ ಸಂಕಟಕ್ಕೆ ದೂಡಿದ್ದಾರೆ. 

ತೊಗರಿ ಖರೀದಿ ಮಾಡಲು ಹಣವೇ ಇಲ್ಲ ಎಂದು ನೆಪ ಹೇಳಿ ಸರಕಾರ ತೊಗರಿ ಖರೀದಿ ಮಾಡುವದನ್ನು ನಿಲ್ಲಿಸಿ ಬಿಟ್ಟಿದೆ.

– ಸುದ್ದಿ        

ಸರಕಾರದಲ್ಲಿ ಇದ್ದ ಹಣವನ್ನು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಮಠ ಮಾನ್ಯಗಳಿಗೆ ನೀಡಿ ಖಾಲಿ ಮಾಡಿರುವದರಿಂದ ತೊಗರಿ ಖರೀದಿಗೆ ಸರಕಾರದ ಬಳಿ ಹಣ ಇಲ್ಲದಂತೆ ಆಗಿರಬಹುದು.

ಸಿಡಿಪಿ ಅನುಷ್ಠಾನದ ಹೊಣೆಯನ್ನು ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದಿಂದ  ಕಸಿದುಕೊಂಡು ಸಿ ಆರ್ ಡಿಪಿ ವಿಭಾಗಕ್ಕೆ ಸರಕಾರ ನೀಡಿದೆ.

-ಸುದ್ದಿ

ಇದರಿಂದ ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರ ಮೈ ಪರಚಿಕೊಳ್ಳುವ ಸ್ಥಿತಿಯನ್ನು ತಲುಪಿದೆ ಎಂದು ಹೇಳಲಾಗಿದೆ.

ಬೆಳಗಾವಿಯ ಟಿ.ವಿ. 9 ವರದಿಗಾರರಿಗೆ ದಮಕಿ ಹಾಕಿದ್ದ ಗೋಕಾಕ ವಕೀಲರ ಪರವಾಗಿ ಗೋಕಾಕ ಸಂಘದ ಅಧ್ಯಕ್ಷ ತಮ್ಮ ತಪ್ಪು ಒಪ್ಪಿಕೊಂಡು ಕ್ಷಮೆಯಾಚನೆ ಮಾಡಿದ್ದರು.

-ಸುದ್ದಿ

ತಪ್ಪು ಮಾಡಿದವರು ಒಬ್ಬರಾದರೆ ಕ್ಷಮೆ ಕೇಳುವವರು  ಮತ್ತೊಬ್ಬರಾಗಿದ್ದಾರೆ.

ವಕೀಲರ ಹಲ್ಲೆಯನ್ನೇ  ನೀವೇ  ದೇವೇಗೌಡರ ಕುಟುಂಬದ ಕೈವಾಡವಿದೆ ಎಂದು ಮೈಸೂರು ಸಂಸದ ಎಚ್. ವಿಶ್ವನಾಥ ಹೇಳಿದ್ದಾರೆ.                                                                                                                             -ಸುದ್ದಿ

ಈ ವಿಶ್ವನಾಥ ಅವರ ಕಣ್ಣಿಗೆ ಕಾಮಿಣಿಯಾಗಿರುವುದರಿಂದ ಅವರಿಗೆ ಜಗತ್ತೆಲ್ಲ ದೇವೇಗೌಡರ ಮಯವಾಗಿ ಕಾಣಿಸುವಂತೆ ಕಂಡು ಬರುತ್ತದೆ.

ಉಡುಪಿ- ಚಿಕ್ಕಮಗಳೂರು ಉಪ ಚುನಾವಣೆ ನಡೆಯುತ್ತಿರುವಾಗಲೇ ರಾಜ್ಯದಲ್ಲಿ ನಾಲ್ಕು ರಾಜ್ಯ ಸಭಾ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.                                                                                                     – ಸುದ್ದಿ

ನಾವು ಮೇಲಿಂದ ಮೇಲೆ ಚುನಾವಣೆ ಮಾಡುತ್ತಲೆ  ಇರುತ್ತೇವೆ ಯಡಿಯೂರಪ್ಪ ತಾನು ಸಿ. ಎಂ. ಆಗಬೇಕು ಎಂದು ಬಾಯಿ ಬಾಯಿ  ಬಡಿದುಕೊಳ್ಳುತ್ತಲೆ ಇರಲಿ ಎಂದು ಚುನಾವಣಾ ಆಯೋಗ ಹೇಳಿರಬಹುದು.

ಸಚಿವ ಯೋಗೇಶ್ವರ ವಜಾಗೊಳಿಸಿ ಎಂದು ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.

-ಸುದ್ದಿ

ರಾಜಭವನಕ್ಕೆ ತೆರಳಲು ಕೈ ನಾಯಕರಿಗೆ ಈಗ ಮತ್ತೊಂದು ಕಾರಣ ದೊರೆತಂತಾಗಿದೆ.

 

 

loading...

LEAVE A REPLY

Please enter your comment!
Please enter your name here