ಹುಕ್ಕೇರಿ ತಾಲೂಕಾ ಗಡಿ ಕನ್ನಡ ಸಮ್ಮೇಳನ ಸಮಾರೋಪ

0
22
loading...

 ಕನ್ನಡಿಗರಿಗೆ ಹೆಚ್ಚಿನ ಉದ್ಯೌಗಾವಕಾಶ ಕಲ್ಪಿಸಲು ಮುಮ ಚಂದ್ರು ಕರೆ

ಬೆಳಗಾವಿ,4- ಕನ್ನಡ ಶಾಲೆಗಳಿಗೆ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸುವುದರಿಂದ ಹಾಗೂ ಕನ್ನಡಿಗರಿಗೆ ಹೆಚ್ಚಿನ ಉದ್ಯೌಗಾವಕಾಶ ಒದಗಿಸುವುದರಿಂದ ಕನ್ನಡದ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ  ಮುಖ್ಯಮಂತ್ರಿ ಚಂದ್ರು ಅವರು ಹೇಳಿದ್ದಾರೆ.

ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅನುದಾನದ ಅಡಿ ನಿರ್ಮಿಸಿದ ಕನ್ನಡ ಭವನ ಉದ್ಘಾಟಿಸಿ, ಹುಕ್ಕೇರಿ ತಾಲೂಕಾ ಗಡಿ ಕನ್ನಡ ಗಡಿ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಕಡಿಮೆಯಾಗುತ್ತಿದೆ. ಶಿಕ್ಷಕರ, ಸಿಬ್ಬಂದಿಗಳ, ಪೀಠೋಪಕರಣಗಳ, ರಸ್ತೆ ಸೇರಿದಂತೆ ಅವಶ್ಯಕ ಸೌಲಭ್ಯ ಕಲ್ಪಿಸಿದ್ದಲ್ಲಿ ಕನ್ನಡ ಕಲಿಯುವ ವಿದ್ಯಾರ್ಥಿಗಳ ಪ್ರಮಾಣ ಸಹ ಹೆಚ್ಚಾಗಲಿದೆ. ಅದರಂತೆ ಕನ್ನಡಿಗರಿಗೆ ಹೆಚ್ಚಿನ ಉದ್ಯೌಗಾವಕಾಶ ಕಲ್ಪಿಸುವುದರಿಂದ ಕನ್ನಡ ಅಭಿವೃದ್ದಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.

ಅದರಂತೆ ಶಿಕ್ಷಣ ಹಾಗೂ ಉದ್ಯೌಗದಲ್ಲಿ ಕಡ್ಡಾಯವಾಗಿ ಕನ್ನಡ ಇರುವ ರಾಷ್ಟ್ತ್ರೀಯ ನೀತಿಯೊಂದು ಜಾರಿಯಾಗಬೇಕು. ರಾಜ್ಯ ಸರಕಾರ ಈ ಕುರಿತಂತೆ ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ಹಕ್ಕು ಒತ್ತಾಯ ಮಾಡಿ ಸಲ್ಲಿಸಬೇಕು. ಕನ್ನಡವನ್ನು ಕಡ್ಡಾಯಗೊಳಿಸುವ ಕುರಿತಂತೆ ಸಚಿವ ಸಂಪುಟಗಳಲ್ಲಿ ಗಟ್ಟಿಯಾದ ನಿರ್ಣಯಗಳನ್ನು ಕೈಗೊಂಡು ಕನ್ನಡಿಗರಿಗೆ ಉದ್ಯೌಗ, ಗಡಿ ಸಮಸ್ಯೆ ಪರಿಹರಿಸುವುದು ಸೇರಿದಂತೆ ಕನ್ನಡಪರ ವಾತಾವರಣ ನಿರ್ಮಿಸುವ ಪರಿಣಾಮಕಾರಿಯಾದ ನಿರ್ಣಯಗಳನ್ನು ಕೈಗೊಳ್ಳಬೇಕು. ಕನ್ನಡ ಭಾಷೆ ಅಭಿವೃದ್ದಿಗೆ ಸರಕಾರದ ಜೊತೆಗೆ ನಾಗರಿಕರೆಲ್ಲರೂ ಸ್ವಇಚ್ಛೆಯಿಂದ ಕೈಜೋಡಿಸಬೇಕೆಂದು ಕರೆ ನೀಡಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಹೆಚ್ಚಿನ ಗಮನ ನೀಡುವ ಉದ್ದೇಶದಿಂದ ಶೇ. 50 ರಷ್ಟು ಅನುದಾನವನ್ನು ಈ ಭಾಗದಲ್ಲಿ ನೀಡಲಾಗಿದೆ. ನಾವು ಭಾಷಾ ಭಾವೈಕ್ಯತೆ ಕಾಯ್ದುಕೊಳ್ಳುವ ಜೊತೆಗೆ ಕನ್ನಡ ಭಾಷೆಯ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಗಡಿ ಕನ್ನಡ ಸಮ್ಮೇಳನವನ್ನು ಗಡಹಿಂಗ್ಲಜ್ದಲ್ಲಿಯೂ ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಹಲವಾರು ಗಡಿ ಪ್ರದೇಶಗಳಲ್ಲಿ ಇಂತಹ ಸಮ್ಮೇಳನ ಏರ್ಪಡಿಸಿ ಕನ್ನಡಪರ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಗಡಿ ಕನ್ನಡಿಗರ ಸಮಸ್ಯೆಗಳನ್ನು ನಿವಾರಿಸಲು ಆಯವ್ಯಯದಲ್ಲಿ ವಿಶೇಷ ಅನುದಾನ ಒದಗಿಸಬೇಕು. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳನ್ನು ಇಲ್ಲಿಯ ಜನಪ್ರತಿನಿಧಿಗಳೊಂದಿಗೆ ಮನವಿಯನ್ನು ಸಲ್ಲಿಸಲಾಗುವುದು. ಕನ್ನಡ ಅಭಿವೃದ್ದಿಗೆ, ಕ್ರೀಡೆ, ಸಾಂಸ್ಕ್ಕತಿಕ ಅಭಿವೃದ್ದಿ, ಕಲಾವಿದರಿಗೆ ಮಾಸಾಶನ ಅರ್ಹರಿಗೆ ದೊರಕಿಸಲು ಕನ್ನಡ ಮತ್ತು ಸಂಸ್ಕ್ಕತಿ ಖಾತೆ ಸಚಿವರನ್ನು ಮನವಿ ಸಲ್ಲಿಸಲಾಗುವುದು. ಈ ಗಡಿ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳಲ್ಲಿ ಕೈಗೊಂಡ ಎಲ್ಲ ನಿರ್ಣಯಗಳ ಶಿಫಾರಸ್ಸುಗಳನ್ನು ಸರಕಾರಕ್ಕೆ ಸಲ್ಲಿಸಲು ಅವರು ಸಲಹೆ ನೀಡಿದರು.

ಸಮಾರಂಭದಲ್ಲಿ ಮಾತನಾಡಿದ ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅವರು ರಾಜ್ಯ ಸರಕಾರವು ಕನ್ನಡ ಅಭಿವೃದ್ದಿಗಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ರಚಿಸಿದೆ. ಗಡಿ ಪ್ರದೇಶಗಳ ಅಭಿವೃದ್ದಿಗಾಗಿ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ರಚಿಸಿದೆ. ನಂಜುಂಡಪ್ಪ ವರದಿಯನ್ವಯ 114 ಹಿಂದುಳಿದ ತಾಲೂಕುಗಳೆಂದು ಘೋಷಿಸಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕನ್ನಡ ಭಾಷೆ, ಗಡಿ ಪ್ರದೇಶಗಳ ಅಭಿವೃದ್ದಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಕರ್ನಾಟಕದ ಕೇಂದ್ರ ಬಿಂದುವಾದ ಬೆಳಗಾವಿಯಲ್ಲಿ ಸಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಕರ್ನಾಟಕದಲ್ಲಿ ಕನ್ನಡಪರ ಚಟುವಟಿಕೆಗಳು ಇನ್ನೂ ಹೆಚ್ಚಾಗಿ ನಡೆಯಬೇಕು. ಪ್ರತಿ ಮನೆ ಮನೆಗಳಲ್ಲಿ ಕನ್ನಡ ಭಾಷೆ ಬೆಳೆಯಬೇಕು. ಮರಾಠಿ ಭಾಷಿಕ ಪ್ರದೇಶಗಳನ್ನು ಅಭಿವೃದ್ದಿಗೊಳಿಸಿ ಅವರನ್ನು ಕನ್ನಡಪರ ಹೋರಾಟದ ಮುಖ್ಯ ವಾಹಿನಿಗೆ ತರಬೇಕೆಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಡಸೋಸಿ ಸಿದ್ದಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ಗಡಿನಾಡು ಹೋರಾಟಗಾರ ಉಮಾದೇವಿ ಟೋಪಣ್ಣವರ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಪದ್ಮಾ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕ ಜನ ಗಣ್ಯರು ಉಪಸ್ಥಿತರಿದ್ದರು.

 

 

 

loading...

LEAVE A REPLY

Please enter your comment!
Please enter your name here