ಹೋಳಿ ಹಬ್ಬ ಆಚರಣೆ

0
441
loading...

ಭಾರತದಲ್ಲಿ ಆಚರಿಸುವ  ರಂಗು ರಂಗಿನ  ಹಬ್ಬ ಹೋಳಿ  ಕಾಮನ ಹುಣ್ಣಿಮೆ ವಸಂತ ಹುಣ್ಣಿಮೆ ಹೋಳಿ ಹುಣ್ಣಿಮೆ  ಮುಂತಾದ ಹೆಸರುಗಳಿವೆ. ವಸಂತ  ಮಾಸದಲ್ಲಿ  ಹಣ್ಣಾದ ಎಲೆಗಳು  ಉದುರಿ  ಹೊಸ ಎಲೆಗಳು ಚಿಗುರಿ  ನಿಂತಿರುತ್ತವೆ.  ಎಲೆ ಚಿಗುರಿನ  ರಸ ಹೀರಿ ಕೋಗಿಲೆಯ  ಕುಹೂ  ಕುಹೂ ಕೇಳಿ ಬರುತ್ತದೆ. ಮುತಗದ ( ಮುದಡದ)  ಗಿಡದ ಹೂ ಮಾವು ಮಲ್ಲಿಗೆ ಸಂಪಿಗೆ ಹೂ ಬಿಟ್ಟು ನಿಸರ್ಗ ರಂಗು ರಂಗಾಗಿ ಕಾಣುತ್ತದೆ.  ಹೋಳಿ ಹಬ್ಬದ ಹಿಂದೆ ಪ್ರಕೃತಿಯ ಋುತು ಪರಿವರ್ತನೆಯ ರಹಸ್ಯವು ಅಡಗಿದೆ. ಋುತು ಪರಿವರ್ತನೆಯ ವೇಳೆಯಲ್ಲಿ  ಯಾವ ರೋಗ ಉಂಟಾಗುವುದೋ  ಅವುಗಳನ್ನು  ನಿವಾರಿಸಲು  ವಿಘ್ನಬಾಧೆಗಳನ್ನು ನಿವಾರಿಸುವ ಘಟನೆಗಳು ಅಡಗಿಕೊಂಡಿವೆ. ಹಾಗೂ ಜನರಲ್ಲಿ ಸಾಮರಸ್ಯ  ಸ್ವತಂತ್ರ  ಸ್ವಚ್ಛಂದ  ವಾತಾವರಣ ದೇಹದಲ್ಲಿ ನೂತನ ಚೈತನ್ಯ ಹೊರಹೊಮ್ಮುವುದು.

ಹೋಳಿ ಹಬ್ಬವು ಬೇಸಿಗೆಯ ದಿನಗಳಲ್ಲಿ ಸೂರ್ಯನ ಕಿರಣಗಳು ನಮ್ಮ ಚರ್ಮದ ಮೇಲೆ ನೇರವಾಗಿ ಬೀಳುತ್ತವೆ. ಇದರಿಂದ ಶರೀರದಲ್ಲಿ ಕಾವು ಹೆಚ್ಚಾಗುವುದು ಕಾವು ಹೆಚ್ಚಾದರೆ  ಸಿಟ್ಟು ಹೆಚ್ಚಾಗುವುದು  ಖಿನ್ನತೆಯೂ ಬರುವುದು ನಮ್ಮ ಶರೀರದ  ಸೆಜಿಯನ್ನು ಸಹಿಸುವ ಕ್ಷಮತೆಯ ಹೆಚ್ಚಾಗಲಿ ಎಂದು ಮುತ್ತಗದ ಪುಷ್ಪಗಳನ್ನು  ನೆನೆ ಹಾಕಿ ಬಣ್ಣ ಆಡುವರು ಆದರೆ ಇಂದು ರಸಾಯನಿಕ ಮಿಶ್ರಿತ ಬಣ್ಣ ಎರಚುವುದೇ ಹೆಚ್ಚು  ಮುತ್ತುಗದ ಪುಷ್ಪಗಳ ಬಣ್ಣ ಕಫ ನಿವಾರಕ  ಹಾಗೂ ಮುತ್ತಗದ ಎಲೆಯಿಂದ ಮಾಡಿದ  ತಾಟಿನಲ್ಲಿ ಊಟ ಆರೋಗ್ಯಕ್ಕೆ ಒಳ್ಳೇಯದು ಬಣ್ಣ ಆಡುವುದರಿಂದ  ದೇಹದಲ್ಲಿ ರೋಗ ಪ್ರತಿಕಾರಕ ಶಕ್ತಿ  ಸದೃಢವಾಗುವುದು ಕಾಮಾಲೆಯಿಂದ ರಕ್ಷಣೆ ನೀಡುವುದು.

ಹಲವು ಕಡೆ ಕಾಮಣನನ್ನು ಸುಟ್ಟು ಬಣ್ಣ ಆಡಿದರೆ  ಹಲವು ಕಡೆ ಬಣ್ಣ ಆಡಿ ಕಾಮಣ್ಣನನ್ನು ಸುಡುತ್ತಾರೆ. ಬೆಂಕಿ ತಂದು ಅದರಲ್ಲಿ ಕಡಲೆ ಸೇಂಗಾ ಸುಟ್ಟು ತಿಂದು ಸ್ನಾನ ಮಾಡಿ ಹೋಳಿಗೆ  ಊಟ ಮಾಡುತ್ತಾರೆ. ಕೆಲವು ಕಡೆ ಗಂಡಸರಿಗೆ  ಮಾತ್ರ ಬಣ್ಣ  ಆಡುವ ರೂಡಿ ಇದೆ. ಈಗ  ಲಿಂಗ ಬೇದವಿಲ್ಲದೆ ಬಣ್ಣ ಎರಚಿ ಬಣ್ಣ ಆಡುತ್ತಾರೆ. ಹಿಂದೆ ತಾರಕಾಸುರನೆಂಬ ರಾಕ್ಷಸನ ಉಪಟಳಕ್ಕೆ ದೇವಾನು ದೇವತೆಗಳಲ್ಲಿ ಸೋತು ಸುಣ್ಣವಾಗಿದ್ದರು. ಶಿವ ಪಾರ್ವತಿಯರ  ಪುತ್ರನಲ್ಲದೆ ಬೇರೆ  ಯಾರು ತಾರಕನನ್ನು ಕೊಲ್ಲಲಾರರು ಆದ್ದರಿಂದ ಶಿವ ಪಾರ್ವತಿಯರ ವಿವಾಹ ಮಾಡಿವೆ. ಎಂದು ಬ್ರಹ್ಮ ಸಲಹೆ ನೀಡುತ್ತಾನೆ. ಇತ್ತ ಶಿವ ಭೀಕರ ತಪೋ ನಿರತನಾಗಿದ್ದಾನೆ. ಅವನು ಪಾರ್ವತಿಯಲ್ಲಿ ಅನುರಕ್ತನಾಗುವಂತೆ ಮಾಡಬಲ್ಲವ ನೆಂದರೆ ಜನರ ಮನಸ್ಸನ್ನೆ  ಮಥಿಸಬಲ್ಲ ಮನ್ಮಥ ಮಾತ್ರ ಎಂದು ನಿರ್ಧರಿಸಿದ ಇಂದ್ರ ಅವನನ್ನು ಕರೆಸಿಬಾಯಿ ತುಂಬಾ  ಹೊಗಳುತ್ತಾನೆ. ಹೊಗಳಿಕೆಗೆ  ಉಬ್ಬುವದು  ಮನ್ಮಥನ ಸ್ವಭಾವ  ಆ ತಕ್ಷಣ ಅನುಗ್ರ ವಸಂತನ  ಸಹಾಯವಂದಿದ್ದರೆ ಪರಶಿವನನ್ನೆ ವಶಪಡಿಸಿಕೊಳ್ಳಬಲ್ಲೆ ಉಳಿದವರು  ಯಾವ ಲೆಕ್ಕ ಎಂದು  ಜಂಬ  ಕೊಚ್ಚುತ್ತಾನೆ  ನೀನು ಎಲ್ಲ ಜನರನ್ನು ಸೆಳೆಯಬಲ್ಲ ಮಹಾಸಾಧಕ ನೀನೆ ಧನ್ಯ ನಿನ್ನಿಂದ ಮೂರು ಲೋಕಕ್ಕೂ ಹಿತವಾಗುತ್ತದೆ. ಪಾರ್ವತಿಯ ಸೌಂದರ್ಯಕ್ಕೆ ಶಿವನು ಮನಸೋಲು ವಂತೆ ಮಾಡು ಎಂದು  ಹುರಿದುಂಬಿಸಿ ಕಳಿಸುತ್ತಾನೆ.

ಇತ್ತ ಮದನ ಸುಕೋಮಲ ಸೈನ್ಯ ಕಣ್ಣು ಕುಕ್ಕಿಸುವಂತ  ರೂಪರಾಶಿ  ಸತಿ ರತಿ ಸುಖ  ವಸಂತರೊಂದಿಗೆ ಶಿವನ ತಪೋಭೂಮಿಯಾದ ಹೇಮಕೂಟಕ್ಕೆ ಬಂದಿದ್ದಾನೆ. ಪಾರ್ವತಿ ಬೆಂಗಾವಲಿಗೆ  ನಿಂತು ಸಹಕರಿಸುತ್ತಾಳೆ.  ಐದು ಪುಷ್ಪ ಬಾಣಗಳನ್ನು ಪ್ರಯೋಗಿಸುತ್ತಾನೆ.  ಕೆರಳಿದ ಶಿವಚಿತ್ತ  ಚಂಚಲಗೂಡು ಹಣೆಗಣ್ಣಿನ ಕಿಚ್ಚಿನಿಂದ ಕಾಮನನ್ನು ದಹಿಸುತ್ತವೆ. ರತಿ  ಅಳುತ್ತಿದ್ದಾಳೆ. ಕೊನೆಗೂ ಪಾರ್ವತಿಯ  ಕಠೋರ ತಪಸ್ಸಿಗೆ  ಶಿವ ಒಲಿದಾಗ  ಮನ್ಮಥ  ಸತ್ತು ಬದುಕಿದಂತಾಯಿತು. ಆಗ ಪಾರ್ವತಿ ಶಿವನಿಗೆ ಈಕೆಯ  ಪತಿಯನ್ನು ನಿಮ್ಮಿಂದ ಪಡೆದು ಕೊಡುವನೆಂದು  ಹೇಳಿದ್ದೆ ಎಂದು  ರತಿಯನ್ನು ತೋರಿಸುತ್ತಾಳೆ. ಶಿವ ದಯ ತೋರಿ  ರತಿಯ ಬೇಡಿಕೆ ಈಡೇರಿಸಿದ ಕಾಮನಿಗೆ ಎಲ್ಲಾ ಸ್ತ್ತ್ರೀ  ಪುರುಷರ ಹೃದಯದಲ್ಲಿ ಸ್ಥಾನ  ದೊರೆಯಿತು. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಹುಣ್ಣಿಮೆಯೆಂದು ಆದ್ದರಿಂದ ಇದು ಕಾಮನ  ಹುಣ್ಣಿಮೆ  ಅಥವಾ ಕಾಮನ ಹಬ್ಬ.

ರತಿ ದಕ್ಷ ಬ್ರಹ್ಮನ ಮಗಳು ಮನ್ಮಥನ ಹೆಂಡತಿ ಪರಮೇಶ್ವರನ  ಹಣೆ ಗಣ್ಣಿನಿಂದ ಬೂದಿಯಾದ ಜಾನಪದ ಕಥೆ ಪ್ರಕಾರ ಪ್ರೇಮಮಯರಾದ ಕಾಮ ರತಿಯರು ಕಾಲ ವೇಳೆ ನೋಡದೆ ಪ್ರೇಮಾಲಾಪದಲ್ಲಿ  ಮುಳುಗಿದ್ದಾರೆ. ಒಮ್ಮೆ  ಒಬ್ಬ ಋುಷಿ ಇವರ ಅಕಾಲ ಸಂಯೋಗವನ್ನು  ಕಂಡು ಕೆರಳಿ ಶಾಪಕೊಟ್ಟ ಅದರ ಪರಿಣಾಮವಾಗಿ ಕಾಮ ಬೂಲೋಕದ ಒಬ್ಬ ಬ್ರಾಹ್ಮಣ  ಕುಮಾರನಾಗಿ  ರತಿ ಒಬ್ಬ ಹರಿಜನ ಕನ್ಯೆಯಾಗಿಯೂ ಜನಿಸಿದಳು.

ಒಂದು ದಿನ ರಸ್ತೆಯಲ್ಲಿ ಕಸಗುಡಿಸುತ್ತಿರುವ ರತಿಯನ್ನು ಕಂಡ ಕಾಮ ಪೂರ್ವಜನ್ಮ ಸಂಸ್ಕಾರದಿಂದ ಅನುಶಕ್ತನಾದ  ತಂದೆ ಪ್ರತಿಭಟಿಸಿದಾಗ ಮನೆಯ ಬಿಟ್ಟು ಅವಳ ಮನೆಯಲ್ಲೇ  ವಾಸ ಮಾಡಿದ ಅಲ್ಲಿ ನಿತ್ಯ ಏಕಾದಶಿ  ಹಸಿವಿನ  ವೇದನೆ ತಡೆಯಲಾರದೆ  ಕಾಮ ಅವಳ ಮನೆಯಲ್ಲೇ ಸತ್ತ  ಅವನ ದಪನದ ಜೊತೆಗೆ ಕಟ್ಟಿಗೆ ಕೊಳ್ಳುವ ಸ್ಥಿತಿಯಿರಲಿಲ್ಲ ಆಗ  ಕಾಮನ ಗೆಳೆಯರು ಕಟ್ಟಿಗೆ ಬೆರಣಿ ಸೇರಿಸಿ ರತಿಯ ಮನೆಯ ಬೆಂಕಿ ತಂದು ಅಗ್ನಿ ಸಂಸ್ಕಾರ ಮಾಡಿದರು.

ಇದು ಸಹ ಫಾಲ್ಗುಣ ಶುದ್ಧ  ಹುಣ್ಣಿಮೆಯಂದು ನಡೆದಿದೆ.  ಆ ನೆನಪಿಗಾಗಿಯೇ ಇಂದೂ ಸಹ ಕಾಮ ದಹನ ಕಾಲಕ್ಕೆ ಹರಿಜನ  ಕೇರಿಯಿಂದ ಬೆಂಕಿ ತರುವ ರೂಢಿ ಬಳಕೆಗೆ  ಬಂದಿರಬಹುದು.

ಇನ್ಮೊಂದು ಕಥೆ ಪ್ರಕಾರ ರಘುರಾಜನ ರಾಜ್ಯದಲ್ಲಿ ಡೊಂಡಾ ಹೆಸರಿನ  ರಾಕ್ಷಸಿ  ಮಕ್ಕಳನ್ನು  ಹೆದರಿಸುತ್ತಿದ್ದಳು ಆಗ ರಾಜ ಮುಂದೆ  ಬಂದು ಪುರೋಹಿತರ  ಸಲಹೆ ಕೇಳಲಾಗಿ ಅವಳ ಸಾವು ಆಸ್ತ್ತ್ರ ಶಸ್ತ್ತ್ರ ಅಥವಾ ಮಳೆ, ಬಿಸಿಲು  ಚಳಿಯಿಂದ ಸಾವು ಇಲ್ಲಿ ಮಕ್ಕಳಿಂದ  ಅವಳಿಗೆ ಸಾವು ಇದೆ ಅವರು ನಗುವುದು ಬಾಯಿ ಬಡಿದುಕೊಳ್ಳುವುದು ಹೀಗೆ ಮಾಡಿ ಅಗ್ನಿಯಲ್ಲಿ  ಸುಡುವರು ಲಂಬಾಣಿ  ಜನಾಂಗದವರು  ಹೋಳಿ ಹಬ್ಬ ವಿಶಿಷ್ಟವಾಗಿ ಆಚರಿಸುತ್ತಾರೆ. ಈ ಹಬ್ಬಕ್ಕೆ ಅವರು ಧೂಂಡ ಎನ್ನುತ್ಥಾರೆ. ಕಲ್ಕತ್ತದಲ್ಲಿ ದೋಲ್ ಪೌರ್ಣಮಿ ಎನ್ನುತ್ತಾರೆ.  ಹರ್ಯಾನದಲ್ಲಿ  ದುಲಂದಿ ಹಬ್ಬ  ಎಂದು ಆಚರಿಸುತ್ತಾರೆ. ಈ ಹಬ್ಬ ಫಾಲ್ಗುಣ ಮಾಸದ  ಹುಬ್ಬಾ ನಕ್ಷತ್ರದ ದಿನ ಆಚರಿಸುತ್ತಾರೆ. ಹಲವು ಕಡೆ ಐದು ದಿನ ಆಚರಿಸುತ್ತಾರೆ.

ಓಕಳಿಯ ನೆಪದಲ್ಲಿ ರಸಾಯನಿಕ ಬಣ್ಣ ಎರಚುವುದು  ಸಲ್ಲ ಬೆಲೆ  ಬಾಳುವ ಬಟ್ಟೆ ಹಾಳು ಮಾಡುವುದು ಮರ ಕಡಿಯುವುದು  ಅಪರಾಧವಾಗುತ್ತದೆ.  ಇನ್ನು ಹಲವು ಕಥೆಗಳು  ಉಂಟು  ಅದರ ನೀತಿ ತಿಳಿದು ಬೇರೆ ಬೇರೆ  ಪ್ರಾಂತ್ಯದಲ್ಲಿ ಹೋಳಿ ಹಬ್ಬದ ಆಚರಣೆ  ವೈವಿಧ್ಯವಿದ್ದು  ಮತ್ತೊಬ್ಬರಿಗೆ ಹಾನಿ ಮಾಡದಂತೆ  ಆಚರಿಸಿದರೆ ಉತ್ತಮ.

                     ಬಣ್ಣದ ವೈಶಿಷ್ಟ್ಯಗಳು:

        ಹಸಿರು ಕೆಂಪು  ನೀಲಿ ಇವು ಪ್ರಾಥಮಿಕ ಬಣ್ಣಗಳು  ಪ್ರಾಥಮಿಕ ಬಣ್ಣಗಳ ಬೆಜಕೆಯಿಂದ  ಮೆಜೆಂಟಾ ಸಯಾನ್ ಯಲ್ಲೌ ದ್ವಿತೀಯಕ ಬಣ್ಣಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಕೆಲವು ಬಣ್ಣಗಳು ಮನಸ್ಸಿಗೆ  ಹಿತವೆನಿಸುತ್ತವೆ. ಕೆಲವು ಹಿತವೆನಿಸುವುದಿಲ್ಲ. ಆದರೆ ಬಹು ಜನರಿಗೆ ಅನ್ವಯಿಸುವಂತೆ ಉಜ್ವಲ ಕೆಮಪು ಕಣ್ಣಿಗೆ ರಾಚಿದಂತೆ ಆಗುತ್ತದೆ. ಆಕಾಶ ಮತ್ತು ಸಮುದ್ರದ ನೀಲಿ  ಬಣ್ಣಗಳು  ಪ್ರಶಾಂತತೆಯ  ಭಾವನೆಯನ್ನು  ಉಂಟುಮಾಡುತ್ತವೆ.  ಬಣ್ಣಗಳನ್ನು ಶೀತಲ ಹಾಗೂ ಶಾಖಸೂಚಕ  ವರ್ಣಗಳೆಂದೂ  ವಿಂಗಡಿಸುತ್ತಾರೆ. ನೀಲಿ  ಶೀತಲ ವರ್ಗದಲ್ಲಿ ಮನಸ್ಸಿನ ತಳಮಳ ತಗ್ಗಿಸುತ್ತದೆ ಆದರೆ  ಕಡು ನೀಲಿ ಬಣ್ಣ ಇಂಥ  ಹಿತ ತರಲಾರದು ಕೆಂಪು  ಉದ್ರೇಕಕಾರಿ ಇದು ಶಾಖ ಸೂಚಕ  ವರ್ಣ ಆದರೂ ಕೆಂಪು  ಉದ್ರೇಕಕಾರಿ ಇದು ಶಾಖಸೂಚಕ ವರ್ಣ ಆದರೂ ಕೆಂಪು ಜನಪ್ರಿಯ ಬಣ್ಣ ಅನಂತರ ನೀಲಿ ಹಸಿರು ಹಳದಿ ಬಣ್ಣಗಳು

ಎಂ.ವೈ. ಮೆಣಶಿನಕಾಯಿ

        ಬೆಳಗಾವಿ. ಮೊ: 9449209570

loading...

LEAVE A REPLY

Please enter your comment!
Please enter your name here