2012 ಎಸ್ಸೆಸೆಲ್ಸಿ ಪರೀಕ್ಷೆ ಪಂಚ್ ತೋರಲು ಸಿದ್ಧ

0
16
loading...

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಜ್ವರ ವಿದ್ಯಾರ್ಥಿಪಾಲಕರ ಜೊತೆ ಆಡಳಿತ ವ್ಯವಸ್ಥೆಗೂ ತಟ್ಟಿದೆ. ಮೂವರ ಮುಖಗಳಲ್ಲಿ ದಿನಗಳ ಲಿಛಿಠಟಿಣ ಜಠಟಿಳಿ ಪ್ರಾರಂಭಗೊಂಡಿದೆ.  ಸಿದ್ಧತೆಗಳು ಭರದಿಂದ ಸಾಗಿವೆ. 2010ರವರೆಗೆ ರಾಜ್ಯಕ್ಕೆ ಮೊದಲ 10 ಸ್ಥಾನಗಳಲ್ಲಿ 5-6 ಸ್ಥಾನ ಪಡೆಯುತ್ತಿದ್ದ ಬೆಳಗಾವಿ ಜಿಲ್ಲೆ 2011 ರಲ್ಲಿ 11 ನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.  ಬೆಳಗಾವಿ ಜಿಲ್ಲೆಯಲ್ಲಿ ನನ್ನ ಕಣ್ಣರಿಕೆಯಲ್ಲಿ ಇದೇ ಮೊದಲ ಬಾರಿಗೆ ಪರೀಕ್ಷೆಗಳು ಜರುಗುತ್ತಿವೆ. ಹಿಂದೆ ಮಾಡಿದ ಅನುಭವವನ್ನೇ ಇಲ್ಲಿ ಧಾರೆಯೆರೆಯಲಿದ್ದೇನೆ. ಫಲಿತಾಂಶವನ್ನು ಸವಾಲಾಗಿ ಸ್ವೀಕರಿಸಿರುವ ದಕ್ಷಿಣ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಚ್.ವೀರಣ್ಣ ಈ ಬಾರಿ 1-5 ರ ಸ್ಥಾನಕ್ಕೆ ಏರುವ ಸರ್ವಸಿದ್ಧತೆಗಳನ್ನು ಮಾಡಿ ಮುಗಿಸಿದ್ದಾರೆ.

 

ಸಮರ್ಪಕ ತರಬೇತಿ 2012 ರ ಎಪ್ರಿಲದಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಬೆಳಗಾವಿ ಜಿಲ್ಲೆ ಸಂಪೂರ್ಣ ಸಜ್ಜಾಗಿದೆ. ಜಿಲ್ಲೆಯಲ್ಲಿ ಅನೇಕ ತರಬೇತುದಾರರಿಗೆ ಈಗಾಗಲೇ ಮಾರ್ಗದರ್ಶನ ತರಬೇತಿ ನೀಡಲಾಗಿದೆ. ಅವರು ತಮಗೆ ನಿರ್ವಹಿಸಿದ ಕೇಂದ್ರಗಳಡಿಯಲ್ಲಿ ಜಿಲ್ಲೆಯ ಎಲ್ಲ 10 ನೆಯ ವರ್ಗಕ್ಕೆ ಬೋಧಿಸುವ  ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಪತ್ರಿಕೆಗೆ  ತಿಳಿಸಿದ್ದಾರೆ.

ಬೆಳಗಾವಿ ನಗರ, ಗ್ರಾಮೀಣ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಖಾನಾಪೂರ, ಕಿತ್ತೂರಗಳಲ್ಲಿ ಯಶಸ್ವಿಯುತ ತರಬೇತಿಗಳು ನಡೆದಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಲಾಗಿದೆ. ಅವರಿಗೆ ವಿಷಯಾವಾರು ವಿಶೇಷ ತರಗತಿಗಳನ್ನು ಮುಂಜಾನೆ ಮತ್ತು ಸಾಯಂಕಾಲ ತೆಗೆದುಕೊಳ್ಳಲಾಗುತ್ತಿದೆ. ಅದಕ್ಕೆ ವಿದ್ಯಾರ್ಥಿಗಳ ಸ್ಪಂದನೆಯೂ ದೊರೆಯುತ್ತಿದೆ. 0ಅ ಇದ್ದ ವಿದ್ಯಾರ್ಥಿಗಳು 40ಅ ರಷ್ಟು ಪ್ರಗತಿ ಸಾಧಿಸಿದ್ದಾರೆ.

ಬೆಳಗಾವಿ ನಗರದ ಅನುತ್ತೀರ್ಣತೆಯ ಪ್ರಮಾಣ ಹೆಚ್ಚಳವಿದ್ದು, ಇದಕ್ಕಾಗಿ ಉಪನಿರ್ದೇಶಕರನ್ನೊಳಗೊಂಡತೆ ಕ್ಷೇತ್ರ ಶಿಕ್ಷಣಾಧಿಕಾರಿ, ಡೈಟ್ ಪರೀವೀಕ್ಷಕರು, ಸಿಇಟಿ ಉಪನ್ಯಾಸಕರುಗಳಿಗೆ ದತ್ತು ಯೋಜನೆ ಹಾಕಿಕೊಂಡಿದ್ದು, ಹಿನ್ನೆಡೆಗೆ ಕಾರಣ ಕಂಡು ಹಿಡಿಯಲಾಗಿದೆ. ಸರದಾರ್ಸ, ಚಿಂತಾಮಣಿ ಪ್ರೌಢ ಶಾಲೆಗಳ ಫಲಿತಾಂಶ ಗಣನೀಯ ಕಡಿಮೆಯಿದೆ ಅದಕ್ಕೆ ಬೇಕಾದ ಸಲಹೆ-ತರಬೇತಿ ನೀಡಲಾಗಿದೆ. ಖಾಸಗಿ ಅನುದಾನಿತ ಶಾಲೆಗಳು ತೀರಾ ಹಿಂದುಳಿದ್ದು, ಅದಕ್ಕೆ ಅಲ್ಲಿನ ಶಿಕ್ಷಕಕರ ಕೊರತೆ ಕಾರಣವಾಗಿದೆ.  ಇತ್ತೀಚೆಗೆ ಹಮ್ಮಿಕೊಂಡಿರುವ  ಜಿಲ್ಲಾಮಟ್ಟದ 2 ಸರಣಿ ಪರೀಕ್ಷೆಗಳಲ್ಲಿ  ಎಲ್ಲಾ ಶಾಲೆಗಳ ಫಲಿತಾಂಶಗಳಲ್ಲಿ ತೀವ್ರ ಮುನ್ನಡೆ ಕಂಡುಬಂದಿದೆ. ಪ್ರತಿಯೊಬ್ಬ ಮುಖ್ಯಾಧ್ಯಾಪಕ ಸೇರಿದಂತೆ ಶಿಕ್ಷಕ ಸಿಬ್ಬಂದಿ ಪರಿಶ್ರಮದ ಜವಾಬ್ದಾರಿಯುತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಫಲಿತಾಂಶ ಸುಧಾರಣೆಯ ಎಲ್ಲ ಕಾರ್ಯತಂತ್ರಗಳನ್ನು ಹೆಣೆದು ಕರ್ನಾಟಕ್ಕೆ ಮಾದರಿಯಾಗುವ ಹೆಜ್ಜೆಯನ್ನಿಡಲಾಗುತ್ತಿದೆ.

ಪ್ರತಿ ಶಾಲೆಗಳಿಂದ ಒಡಂಬಡಿಕೆ ಪತ್ರಗಳನ್ನು ಪಡೆಯಲಾಗಿದ್ದು, ಪಿಕನಿಕ್ ಫಜಲ್, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಗುಂಪು ಅಧ್ಯಯನ, ಪ್ರೊಜೆಕ್ಟ ವರ್ಕ, ಗ್ರಂಥಾಲಯ ಬಳಕೆ ಮೂಲಕ ಪರಿಸರಕ್ಕನುಗುಣವಾದ ಕಾರ್ಯಕ್ರಮಗಳನ್ನು ಶೈಕ್ಷಣಿಕ ವರ್ಷವೀಡೀ ಹಂತ ಹಂತವಾಗಿ ಜಾರಿಗೆ ತರಲಾಗಿದೆ. ಇಲ್ಲಿ ಪಾಲಕರ ಸಭೆಗಳು ಏರ್ಪಟ್ಟಿವೆ. ತಮ್ಮ ಮಕ್ಕಳ ಆಶಾದಾಯಕ ಬೆಳವಣಿಗೆಗೆ ಅವರು ಕಂಕಣಬದ್ಧರಾಗಿದ್ದಾರೆ.

ವಿದ್ಯಾರ್ಥಿಗಳಿಗೂ ನಾಯಕತ್ವ, ಸಂಘಟನೆ, ಅಭಿವ್ಯಕ್ತಿ ಮತ್ತು ಆಂತರಿಕ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಅವರೂ ಕೂಡ ಏಕಾಗ್ರಚಿತ್ತದಿಂದ ಮಾರ್ಗದರ್ಶಿ ಓದಿನ ಕಡೆ ಗಮನಹರಿಸಿದ್ದು, ಈ ವರ್ಷ ಜಿಲ್ಲೆ ಉನ್ನತ ಸ್ಥಾನಕ್ಕೇರುವುದರಲ್ಲಿ ಸಂದೇಹವಿಲ್ಲ. ಈ ವರ್ಷ ಬೆಳಗಾವಿ ಜಿಲ್ಲೆಯಲ್ಲಿ  111 ಎಸ್.ಎಸ್.ಎಲ್.ಸಿ. ಕೆಂದ್ರಗಳನ್ನು ನಿಗದಿಗೊಳಿಸಲಾಗಿದೆ. ಅದರಲ್ಲಿ 14 ಸೂಕ್ಷ್ಮ, 15 ಅತಿ ಸೂಕ್ಷ್ಮ ಕೇಂದ್ರಗಳಿವೆ. ಒಟ್ಟು 35,951 ವಿದ್ಯಾರ್ಥಿಗಳು ಪರೀಕ್ಷೆಗೆ ಕೂಡಲಿದ್ದಾರೆ.

ಎಲ್ಲಾ ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೊಗಲಾಡಿಸಲಾಗಿದೆ. ಎಪ್ರಿಲ್ 2 ರಿಂದ 16 ರ ವರೆಗೆ ನಡೆಯಲಿರುವ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನೂ ತಿಳಿಸಲಾಗಿದೆ.  ಪರೀಕ್ಷೆಯಲ್ಲಿ ಹೆಚ್ಚಿಗೆ 15 ನಿಮಿಷಗಳ ಪ್ರಶ್ನೆ ಪತ್ರಿಕೆ ಓದಿನ ಅವಧಿಯನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಗಮನಿಸಬೇಕು. ಶಾಲೆಗಳ-ಇಲಾಖೆಗಳ ಈ ಪರಿಶ್ರಮಕ್ಕೆ ವಿದ್ಯಾರ್ಥಿಗಳೇ ಉತ್ತರವಾಗಬೇಕಿದ್ದು, ಪಂಚ ಸ್ಥಾನಗಳ ಸಾಧನೆಯ ಕನಸು ನನಸಾಗಿಸುವರೋ ಕಾಲವೇ ಉತ್ತರಿಸಲಿದೆ…

loading...

LEAVE A REPLY

Please enter your comment!
Please enter your name here