ಕಲ್ಯಾಣರಾವ್ ಮುಚಳಂಬಿ ಆಯ್ಕೆ ಖಚಿತ ಶಶಿಕಾಂತ

0
17
loading...

ಬೆಳಗಾವಿ,17- ಕಲ್ಯಾಣರಾವ್ ಮುಚಳಂಬಿಯವರು ಜನಪರ ಹೋರಾಟಗಾರರು. ರೈತ ಮುಂದಾಳುಗಳಾಗಿ ಶ್ರಮಿಸಿದ್ದಾರೆ. ಸಾಹಿತ್ಯ ಪ್ರಿಯರಾಗಿದ್ದು ಅನೇಕ ಕೃತಿಗಳನ್ನು ಪ್ರಕಾಶನಗೊಳಿಸಿದ್ದಾರೆ. ಇವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವದು ಖಚಿತವಾಗಿದೆ ಎಂದು  ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಾಂತ ನಾಯ್ಕ ಅವರು ಇಂದು ಹಸಿರುಕ್ರಾಂತಿ ಪ್ರಚಾರ ಸಮಿತಿ ಕಾರ್ಯಾಲಯಕ್ಕೆ ಭೆಟ್ಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು. ಅವರು ಮುಂದುವರೆದು ಮಾತಾಡುತ್ತ ನಾನು ಜಿಲ್ಲೆಯ ಅನೇಕ ಕಡೆಗೆ ಪ್ರಯಾಣಿಸುತ್ತಿದ್ದಾಗ ಕ.ಸಾ. ಪರಿಷತ್ತಿನ ಬಹುತೇಕ ಅನೇಕ ಸದಸ್ಯರು ನನಗೆ ಭೆಟ್ಟಿಯಾಗಿ ಕಲ್ಯಾಣರಾವ್ ಮುಚಳಂಬಿಯವರಿಗೆ ನಮ್ಮ ಮತಗಳು ಮೀಸಲಾಗಿವೆ ಎಂದು ಹೇಳಿದ್ದಾರೆ ಎಂದರು.

ಕಲ್ಯಾಣರಾವ್ ಮುಚಳಂಬಿಯವರು ಜನಪ್ರಿಯ ನಾಯಕರಾಗಿದ್ದು ಅವರಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರೌತ್ಸಾಹ ದೊರೆಯಲಿದೆ. ನಿತ್ಯ ಚಟುವಟಿಕೆ ಪ್ರಿಯರೂ, ಉತ್ಸಾಹಿಗಳೂ, ಸಾಹಿತ್ಯಾಸಕ್ತರು ಆಗಿರುವ ಮುಚಳಂಬಿಯವರಿಗೆ ನನ್ನ ಬೆಂಬಲವಿದೆ. ಕ.ಸಾ.ಪ. ಸದಸ್ಯರು ತಮ್ಮ ಅಮೂಲ್ಯ ಮತನೀಡಿ ಆಯ್ಕೆಗೊಳಿಸಬೇಕೆಂದು ನಾನು ಕ.ಸಾ.ಪ. ಸದಸ್ಯರಲ್ಲಿ ಕೇಳಿಕೊಳ್ಳುತ್ತೇನೆ ಎಂದು ನುಡಿದರು.

ಈ ಸಂದರ್ಭದಲ್ಲಿ ಸಾಹಿತಿ  ಪುಂಡಲೀಕ ಪಾಟೀಲ,  ಜಲತ್ಕುಮಾರ ಪುಣಜಗೌಡ, ಸ.ರಾ. ಸುಳಕೂಡೆ, ಬಸವರಾಜ ಸುಣಗಾರ ಸಾಹಿತಿ ಬಿ.ಕೆ. ಹೊಂಗಲ, ಗ್ರಾ.ಪಂ.ಸದಸ್ಯರಾದ ನಾಯಕ, (ಹೊಸೂರು), ಸುಕುಮಾರ ರಾಮಗೊನಹಟ್ಟಿ, ಅಬ್ದುಲ್ ಟಗರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಾಗಿದ್ದರು…

loading...

LEAVE A REPLY

Please enter your comment!
Please enter your name here