ಗೋಹತ್ಯೆ ನಿಷೇಧಕ್ಕೆ ಇಸ್ಕಾನ್ ಒತ್ತಾಯ

0
30
loading...

ಬೆಳಗಾವಿ,10- ಹಿಂದುಗಳಿಗೆ ಪೂಜ್ಯ ಮತ್ತು ಆರಾಧ್ಯ ದೈವವಾಗಿರುವ ಗೋಮಾತೆಯನ್ನು ಸಂರಕ್ಷಿಸಿ ಪೋಷಿಸುವುದು ಎಲ್ಲರ ಕರ್ತವ್ಯವಾಗಿದೆ. ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತರಬೇಕು. ಕೆಲ ರಾಜ್ಯಗಳಲ್ಲಿ ಈ ಕಾಯಿದೆ ಜಾರಿಯಲ್ಲಿದ್ದು, ಕರ್ನಾಟಕದಲ್ಲಿ ಗೋಹತ್ಯ ನಿಷೇಧ ಕಾನೂನು ಜಾರಿಗೊಳಿಸ ಬೇಕೆಂದು ಬೆಳಗಾವಿ ಇಸ್ಕಾನ್ ಹಾಗೂ ಶ್ರೀರಾಮ ಸೇನೆ ಒತ್ತಾಯಿಸಿವೆ.

ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗೋ ಆರಾಧಕರು ಶ್ರೀರಾಮ ಸೇನೆಯ ರಾಷ್ಟ್ತ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಕರ್ನಾಟಕದಲ್ಲಿ ಗೋಹತ್ಯಾ ನಿಷೇಧ ಕಾಯಿದೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗೋಹತ್ಯೆ ಮಹಾಪಾಪ. ಹಿಂದುಗಳ ಸಮಸ್ತ ದೇವತೆಗಳನ್ನು ಹೊಂದಿರುವ ಗೋಮಾತೆಯ ರಕ್ಷಣೆಯಾಗ ಬೇಕು. ಗೋವುಗಳ ಪಾಲನೆಗೆ ಸರ್ಕಾರ ವಿಶೇಷ ಗಮನ ಹರಿಸಬೇಕು. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧಕ್ಕೆ ಮುಂದಾಗ ಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಇಸ್ಕಾನ್ ಪದಾಧಿಕಾರಿಗಳು, ಶ್ರೀರಾಮ ಸೇನೆಯ  ಕಾರ್ಯಕರ್ತರು ಮನವಿ ಕೊಡುವ ಸಂದರ್ಭದಲ್ಲಿ ಹಾಜರಿದ್ದರು…

loading...

LEAVE A REPLY

Please enter your comment!
Please enter your name here