ಚುನಾವಣೆಯಲ್ಲಿ ಯಲ್ಲಪ್ಪ ಕೆಂಚಪ್ಪ ನಂದಿ ಆಯ್ಕೆಯಾಗಿ ವಿಜಯೋತ್ಸವ ಆಚರಣೆ

0
22
loading...

ಗೋಕಾಕ ಏ.13-ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರಿ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಾಲದಿನ್ನಿ ಗ್ರಾಮದ ಯಲ್ಲಪ್ಪ ಕೆಂಚಪ್ಪ ನಂದಿ ಅವರು ಆಯ್ಕೆಯಾಗಿದ್ದಾರೆ.

ಒಕ್ಕೂಟದ ಮತಕ್ಷೇತ್ರ ನಂ.1ಕ್ಕೆ ನಡೆದ ಚುನಾವಣೆಯಲ್ಲಿ ಯಲ್ಲಪ್ಪ ನಂದಿ ಅವರು ಆಯ್ಕೆಯಾಗಿದ್ದು ಅವರ ಆಯ್ಕೆಗಾಗಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಟಿ. ಆರ್. ಕಾಗಲ, ಎಪಿಎಮ್ಸಿ ನಿರ್ದೇಶಕ ಮಡ್ಡೆಪ್ಪ ತೋಳಿನವರ, ತಾಲೂಕ ಪಂಚಾಯತ ಸದಸ್ಯ ವಿಠ್ಠಲ ಗುಂಡಿ ಅವರು ಶ್ರಮಿಸಿದರು.

ಯಲ್ಲಪ್ಪ ನಂದಿ ಅವರ ಆಯ್ಕೆಯ ನಂತರ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ನೀರು ಬಳಕೆದಾರ ಸಹಕಾರಿ ಸಂಘಗಳ ಅಧ್ಯಕ್ಷರುಗಳಾದ ರಮೇಶ ತುಕ್ಕಾನಟ್ಟಿ, ಬಸವಣ್ಣೆಪ್ಪ ಕಂಬಾರ, ಭೀಮಪ್ಪ ತೋಳಿನವರ, ಭೀಮಪ್ಪ ಬಬಲೆನ್ನವರ, ಅಶೋಕ ಕೊಣ್ಣೂರ, ರಾಮಪ್ಪ ಅರಭಾಂವಿ, ಹಿರಿಯರಾದ ಅಡಿವೆಪ್ಪ ತೋಟಗಿ, ಶಿದ್ದಪ್ಪ ಖಾನಪ್ಪನವರ, ಫಕೀರಪ್ಪ ಕೊಳವಿ, ರಾಮಣ್ಣ ದ್ಯಾಮಕ್ಕಗೋಳ, ನಾಗಪ್ಪ ನಂದಿ, ಫಕೀರಪ್ಪ ಹಳ್ಳೂರ, ಬಾಳೇಶ ದಾನಕುಟ್ಟಿ, ಶಿವನಾಯ್ಕ ನಾಯ್ಕ, ಪರಸಪ್ಪ ಬಬಲೆನ್ನವರ, ನಿಂಗಪ್ಪ ವಡ್ಡರಗಾಂವಿ, ಸುರೇಶ ದಂಡಿನ, ಶಿದ್ದಪ್ಪ ದಂಡಿನ, ಗ್ರಾಮ ಪಂಚಾಯತ ಸದಸ್ಯರಾದ ಭೀಮಪ್ಪ ದುರ್ಗಿಪೂಜೇರಿ, ಮಾಳಪ್ಪ ರಾಜಪ್ಪನವರ, ಅನಿಲಕುಮಾರ ಕಂಬಾರ, ರಂಗಪ್ಪ ಬಬಲೆನ್ನವರ, ಲಕ್ಕಪ್ಪ ಮಾಳಗಿ, ಮುತ್ತೆಪ್ಪ ಬೀರನಗಡ್ಡಿ, ವಿಠ್ಠಲ ಗಿಗ್ಗಿ, ರಂಗಪ್ಪ ರಂಗನ್ನವರ, ಬಸವರಾಜ ಚಂದರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು ವಿಜಯೋತ್ಸವದಲ್ಲಿ ಆಚರಿಸಿದರು.

ಫೋಟೊ 13ಜಿಕೆಕೆ7 – ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರಿ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯಲ್ಲಪ್ಪ ಕೆಂಚಪ್ಪ ನಂದಿ ಆಯ್ಕೆಗೊಂಡಿದ್ದಕ್ಕಾಗಿ ವಿಜಯೋತ್ಸವ ಆಚರಿಸುತ್ತಿರುವದು.

 

 

loading...

LEAVE A REPLY

Please enter your comment!
Please enter your name here