ತೋಟಗಾರಿಕೆ ನೇಮಕಾತಿ ಅರ್ಜಿ ಕರೆ

0
306
loading...

ವಿಜಾಪುರ,ಏ.13- ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ವಿಜಾಪುರ ಜಿಲ್ಲೆಯ ಐದು ತಾಲೂಕುಗಳಲ್ಲಿ ವಿಷಯ ತಜ್ಞ ಹುದ್ದೆ ಹಾಗೂ ರೈತ ಸಹಾಯಕರ ಹುದ್ದೆಗಾಗಿ ಮಾನವ ಸಂಪನ್ಮೂಲ ಒದಗಿಸುವ ನೋಂದಾಯಿತ ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ವಿಷಯ ತಜ್ಞ ಹುದ್ದೆಗೆ ಕೃಷಿ ಅಥವಾ ತೋಟಗಾರಿಕಾ ವಿವಿ ಪದವೀಧರರ ವಿಷಯ ತಜ್ಞರು, ಹಾಗೂ ಡಿಪ್ಲೊಮಾ ತೋಟಗಾರಿಕೆ ಅಥವಾ ಜೆ.ಓ.ಸಿ. ಪದವಿ ಪಡೆದವರಾಗಿರಬೇಕು.

ಅರ್ಜಿ ಫಾರ್ಮಗಳನ್ನು ದಿ: 16-4-2012 ರಿಂದ 23-4-2012 ರವರೆಗೆ ನೀಡಲಾಗುವುದು. ಅರ್ಜಿಗಳನ್ನು ದಿ: 23-4-2012 ಸಂಜೆ 4 ಗಂಟೆಯೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಜಿ.ಪಂ. ವಿಜಾಪುರ ದೂ:08352-250244 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

 

 

loading...

LEAVE A REPLY

Please enter your comment!
Please enter your name here