ಧುಪದಾಳ : ಶಿವಾಜಿ ಮಹಾರಾಜರ ಜಯಂತಿ ಆಚರಣೆ

0
15
loading...

ಘಟಪ್ರಭಾ,23- ಸ್ಥಳೀಯ ಧುಪದಾಳ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತ್ಯೌತ್ಸವವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಶ್ರೀ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಸತ್ಯಪ್ರಕಾಶ ಮಲ್ಲಾಪೂರೆ ಅವರು ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಗಂಗವ್ವ ಪೂಜೇರಿ, ಪುಷ್ಪಾ ಅರಳಿ, ಪ್ರಕಾಶ ಬಾಗೇವಾಡಿ, ಹಣಮಂತ ಭೋವಿ, ಅಣ್ಣಪ್ಪ ಶಿರಹಟ್ಟಿ, ಚಿಂತಾಮಣಿ ಬೆಳವಿ, ರಾಯವ್ವ ಸಂಪಗಾಂವಿ, ಅಭಿವೃದ್ದಿ ಅಧಿಕಾರಿ ಜಯರಾಮ ಕಾದ್ರೌಳ್ಳಿ ಸಿಬ್ಬಂದಿಗಳಾದ ಪ್ರಕಾಶ ತೆಳಗೇರಿ, ಸುಭಾಸ ತೆಳಗೇರಿ, ಮಹಾಂತೇಶ ದೊಡ್ಡಲಿಂಗಪ್ಪಗೋಳ, ಅಮೃತ ಮುತ್ತೇಪ್ಪಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here