ಬಸವ ಜಯಂತಿ ಕಾರ್ಯಕ್ರಮದಲ್ಲಿ ಎಸ್ಪಿ ಸಂದೀಪ ಪಾಟೀಲರ ಸನ್ಮಾನ

0
9
loading...

ಬೆಳಗಾವಿ,23- ನಗರದ ಕಾಲೇಜು ರಸ್ತೆಯ ಗಾಂಧಿ ಭವನದಲ್ಲಿ ರವಿವಾರದಂದು ಜಗಜ್ಯೌತಿ ಶ್ರೀ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಹಾಗೂ ವಿವಿಧ ವೀರಶೈವ ಸಂಘಟನೆಗಳಿಂದ ಬಸವ ಜಯಂತಿ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಮಾನಸಿಕ ಆರೋಗ್ಯದ ಪರಿಕಲ್ಪನೆ ವಿಷಯ ಕುರಿತು ವಿಶೇಷ ಗೋಷ್ಠಿ ನಡೆಯಿತು. ಸಮಾರಂಭದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕ ಕರ್ತವ್ಯಕ್ಕಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಬೆಳಗಾವಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಅವರನ್ನು ಸತ್ಕರಿಸಲಾಯಿತು.  ಈ ಸಂದರ್ಭದಲ್ಲಿ ಧಾರವಾಡದ ಬಸವ ಮಹಾಮನೆಯ ಶ್ರೀ ಬಸವಾನಂದ ಮಹಾಸ್ವಾಮಿಗಳು, ಬಸವ ತತ್ವ ಅನುಭಾವ ಕೇಂದ್ರದ ಮಾತೆ ವಾಗ್ದೇವಿ ತಾಯಿ, ಮಾಜಿ ಕೇಂದ್ರ ಸಚಿವ ಬಾಬಾಗೌಡಾ ಪಾಟೀಲ, ವ್ಹಿ.ಕೆ.ಪಾಟೀಲ, ಸದಾಶಿವ ದೇವರಮನಿ, ಸುರೇಶ ಖಿರಾಯಿ, ಜಿಲ್ಲಾ ವೀರಶೈವ ಅಧ್ಯಕ್ಷ ಬಿ.ವಿ.ಕಟ್ಟಿ, ನೀಲಗಂಗಾ ಚರಂತಿಮಠ ಸೇರಿದಂರೆ ಶರಣರು ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here