ಬೆಳಗಾವಿ ಪೋರ ರೋಹನ್ಗೆ ಗಿನ್ನಿಸ್ ದಾಖಲೆಯ ಕೀರೀಟ

0
31
loading...

ಬೆಳಗಾವಿ,10- ಇತ್ತೀಚೆಗೆ ಇಟಲಿಯ ರೋಮ್ದಲ್ಲಿ ನಡೆದ ಲೋವೆಸ್ಟ್ ಲಿಂಬೋ ಸ್ಕೇಟಿಂಗ್ 10ಮೀಟರ್ ವ್ಯಾಪ್ತಿಯ ಸ್ಕೇಟಿಂಗ್ನಲ್ಲಿ ಬೆಳಗಾವಿ ನಗರದ ಪೋರ ರೊಹನ್ ಕೋಕನೆ ಗಿನ್ನಿಸ್ ದಾಖಲೆ ಮಾಡುವ ಮೂಲಕ ಬೆಳಗಾವಿ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಮೆರೆಸಿದ್ದಾನೆ.

ಈ ಮೊದಲು ಮುಂಬೈನಲ್ಲಿ ನಡೆದ ಸ್ಕೇಟಿಂಗ್ನಲ್ಲಿ 20 ಕಾರ್ಗಳ ಬುಡದಿಂದ ಸ್ಕೇಟಿಂಗ್ ಮೂಲಕ ನುಗ್ಗಿ ವಿಶ್ವದಾಖಲೆಯ ಗಿನ್ನಿಸ್ ದಾಖಲೆಗೆ ಸೇರಿಕೊಂಡಿದ್ದ ರೋಹನ್ ಇಟಲಿಯ ಸ್ಪರ್ಧೆಯಲ್ಲಿ ಯಶಸ್ವಿಯಾಗುವ ಮೂಲಕ ಎರಡನೇಯ ದಾಖಲೆಗೆ ಭಾಜನನಾಗಿದ್ದಾನೆ. ಲೋರೆರೋ ಜಕ್ತ್ತ್ರಿ ಹಾಗೂ ಮಾರ್ಗೋ ಫ್ರೆಗ್ಟಿ ಅವರು ರೋಹನ್ಗೆ ದಾಖಲೆಯ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಕಳೆದ 7 ವರ್ಷಗಳಿಂದ ಬಾಲಕ ರೋಹನ್ ಸ್ಕೇಟಿಂಗ್ ಸಾಧನೆಯ ಅವಿರತ ಪ್ರಯತ್ನದಲ್ಲಿದ್ದಾನೆ. ಓದಿನೊಂದಿಗೆ ಕ್ರೀಡೆಯಲ್ಲಿಯೂ ಸಾಧಕನಾಗಿರುವ ರೋಹನ್ಗೆ ಓಲಂಪಿಕ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಮಹದಾಸೆ.

ರೋಹನ್ಗೆ ಮಾರ್ಗ ದರ್ಶಕರಾಗಿ ಉಮೇಶ ಕಲ್ಗಟಗಿ, ಸೂರ್ಯಕಾಂತ್ ಹಿಂಡಲಗೇಕರ, ಅಶೋಕ ಶಿಂತ್ರೆ, ಪ್ರಸಾಧ ತೆಂಡೂಲ್ಕರ್, ಸುಧೀರ ಕುನ್ಸಾನೆ ಮೊದಲಾದವರು ಕಾರ್ಯ ತತ್ಪರರಾಗಿದ್ದಾರೆ. ಈ ಮೊದಲು ಅನೇಕ ಸಂಘಸಂಸ್ಥೆಗಳು ಆಯೋಜಿಸಿದ ಸಮಾಜ ಮುಖಿ ಸ್ಕೇಟಿಂಗ್ ಪಂದ್ಯಾವಳಿ ಯಲ್ಲಿ ರೋಹನ್ ಪಾಲ್ಗೊಂಡು ಉತ್ಕ್ಕಷ್ಟ ಸಾಧನೆ ಮೆರೆದಿದ್ದಾನೆ…

loading...

LEAVE A REPLY

Please enter your comment!
Please enter your name here