ವರ್ಷದುದ್ದದ ಓದಿಗೆ ಫಲಿತಾಂಶದೊಂದಿಗೆ ವಿರಾಮ

0
21

ಪಾಸಾದ ಹುರುಪಿನಲ್ಲಿ ಮಕ್ಕಳು ಮೇ.30ರಿಂದ  ಹೊಸ ಶೈಕ್ಷಣಿಕ ವರ್ಷಾರಂಭ

loading...

 

ಬೆಳಗಾವಿ,10- ವರ್ಷದುದ್ದದ ಓದಿನ ಶ್ರಮಕ್ಕೆ ಪರೀಕ್ಷೆಗಳು ಕೈಗನ್ನಡಿಯಾಗಿವೆ. ಪರೀಕ್ಷೆ ಬರೆದ ಮಕ್ಕಳು ಫಲಿತಾಂಶ ಪಡೆಯುವ ಮೂಲಕ ತಾವು ಓದಿದ ಓದನ್ನು ಒರೆಗೆ ಹಚ್ಚಿ, ಮುಂದಿನ ತರಗತಿಯ ಪ್ರವೇಶದ ಕಾತರಿದಲ್ಲಿರುತ್ತವೆ. ಏಪ್ರಿಲ್ 10ರಂದು 1 ನೇ ತರಗತಿಯಿಂದ 9 ನೇಯ ತರಗತಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿತು. ಫಲಿತಾಂಶ ಪಡೆಯುವರೊಂದಿಗೆ ಮುಂದಿನ ತರಗತಿಗೆ ಪ್ರವೇಶ. ಬರುವ ಮೇ.30ಕ್ಕೆ ಹೊಸ ಶೈಕ್ಷಣಿಕ ವರ್ಷ ಆರಂಭ.

ಮಂಗಳವಾರ ತಮ್ಮ ಮಕ್ಕಳ ತರಗತಿಗಳ ಪರೀಕ್ಷಾ ಫಲಿತಾಂಶದ ಅಂಕಪತ್ರ  ಪಡೆಯಲು ಪಾಲಕರು ಪುಳಕಿತರಾಗಿದ್ದರೆ, ಮಕ್ಕಳು ಫಲಿತಾಂಶ ಏನಾಗಿರುತ್ತದೋ ಎನ್ನುವ ದುಗುಡದಲ್ಲಿದ್ದರು. ಬೆಳಗಿನ 10 ಗಂಟೆಗೆ ಶಾಲೆಗೆ ನಡೆದ ಮಕ್ಕಳು ಹಾಗೂ ಪಾಲಕ ವಲಯ ತರಗತಿಗಳ ಗುರುಗಳಿಂದ ಪರೀಕ್ಷಾ ಫಲಿತಾಂಶದ ಅಂಕಪತ್ರ ಪಡೆಯುವ ತವಕದಲ್ಲಿದ್ದರು.

ತರಗತಿಗಳ ಗುರುಗಳು ಒಳ್ಳೆಯ ಅಂಕ ಪಡೆದಿರುವಿ, ಇನ್ನೂ ಹೆಚ್ಚಿನ ಅಂಕ ಬರಬೇಕು, ಅದು ಇದು ಕೆಲ ವಿಷಯಗಳಲ್ಲಿ ಹಿಂದಿರುವೆ. ರಜೆಯಲ್ಲಿ ಹಿಂದುಳಿದ ವಿಷಯಗಳ ಓದು ಬರಹ ಮಾಡು ಎಂದು ಉಪದೇಶಿಸಿ ಅಂಕ ಪಟ್ಟಿ ಕೊಟ್ಟು ವಿದ್ಯಾರ್ಥಿಗಳನ್ನು ಬೀಳ್ಕೊಡುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು. ವಿದ್ಯಾರ್ಥಿಗಳು ಪಾಸಾದ ಖುಶಿಯಲ್ಲಿ ತಮ್ಮ ಗುರು ಬಳಗಕ್ಕೆ ಸಿಹಿ ಕೊಟ್ಟು ಆಶೀರ್ವಾದ ಪಡೆದರು.

ಫಲಿತಾಂಶದ ಖುಷಿಯಲ್ಲಿ, ಓದಿನ ಒತ್ತಡದಿಂದ  ಒಂಡೆರಡು ತಿಂಗಳು ವಿರಾಮ ಎನ್ನುವ ಲಗುಬಗೆಯಲ್ಲಿದ್ದ ಮಕ್ಕಳು ವರ್ಷವೀಡೀ ಶಾಲೆಯೆಡೆ ಮುಖಮಾಡಿ ಓದು ಬರಹದ ಒತ್ತಡದಲ್ಲಿದ್ದು. ಫಲಿತಾಂಶ ಪಡೆಯುವುದರೊಂದಿಗೆ ಬೇಸಿಗೆ ರಜೆಯ  ಖುಷಿಯಲ್ಲಿ ಮನೆಯಡೆ ಮುಖಮಾಡಿದ್ದರು. ಅಜ್ಜನೂರು, ಅಮ್ಮನೂರು, ಅಪ್ಪನೂರು ಹೀಗೆ ರಜೆಯಲ್ಲಿ ತಮ್ಮೂರಿಗೆ ಹೋಗುವ ಚರ್ಚೆಯಲ್ಲಿದ್ದರು. ಬೇಸಿಗೆಯ ರಜೆ ಸುಂದರವಾಗಿಲೆಂದು ಹಾರೈಸೋಣ…

loading...

LEAVE A REPLY

Please enter your comment!
Please enter your name here