ಸುದ್ದಿಗೊಂದು ಚುಚ್ಚು ಮಾತು

0
17
loading...

ಪಾಕಿಸ್ತಾನ ಅಧ್ಯಕ್ಷ ಜರ್ದಾರಿಯವರು ಅಜಮೀರಿಗೆ ಬಂದಾಗ ಅವರು ಹಾಯ್ದು ಹೋಗುವ ರಸ್ತೆಗಳಲ್ಲಿ ಪೋಲಿಸರು ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸಿ ಮನೆಯ ಕಿಡಕಿಗಳನ್ನು ಬಂದು ಮಾಡಿಸಿದ್ದರು.

– ಸುದ್ದಿ

  ಜರ್ಧಾರಿಯವರ ಕೂದಲು ಕೊಂಕಿದರೆ ಜಗತ್ತಿನಲ್ಲಿ ನಮ್ಮ ದೇಶಕ್ಕೆ ಕೆಟ್ಟ ಹೆಸರು ಬರಬಾರದು ಎಂಬ ಉದ್ದೇಶದಿಂದ ಈ ರೀತಿಯ ಎಚ್ಚರಿಕೆಯನ್ನು ವಹಿಸಿರಬಹುದು.

ಕಾನಪೂರದಲ್ಲಿ ಒಬ್ಬ ಬಾಲಕ 14 ವರ್ಷದ ಶಾಲಾ ಶಿಕ್ಷಣ ಪಡೆಯುವಾಗ ಒಂದೇ ಒಂದು ದಿನ ಸಹ ಶಾಲೆ ತಪ್ಪಿಸಿರುವುದಿಲ್ಲ ಅದಕ್ಕಾಗಿ ಅವನ ಹೆಸರು ಗಿನ್ನಿಸ್ ದಾಖಲೆಯಲ್ಲಿ ದಾಖಲಾಗಲಿದೆ.

-ಸುದ್ದಿ

  ಇದ್ದರೆ ಇರಬೇಕು ಇವನಂಗ ಎಂದು ಉಳಿದ ತಂದೆ ತಾಯಿಗಳು ಹೇಳಿಕೊಳ್ಳುತ್ತಿರಬಹುದು.

ಸರಕಾರ ಕೊಳವೆ ಬಾವಿ ಕೊರೆಸಲು ಮೀನ ಮೇಷ ಮಾಡುತ್ತಿರುವಾಗ ಮಂಡ್ಯ  ಜಿಲ್ಲೆಯ ಪಾಂಡವಪುರ ತಾಲೂಕಿನ ಕಾವೇರಿಪುರ ಗ್ರಾಮದ ಕೃಷ್ಣಪ್ಪ ಎಂಬುವರು ಜನರಿಗಾಗಿಯೇ ತಮ್ಮ ಸ್ವಂತ ಹಣ ವೆಚ್ಚ ಮಾಡಿ ಕೊಳವೆ ಭಾವಿ ತೊಡಿಸಿ ಮೂರು  ಗ್ರಾಮಗಳ ಜನರಿಗೆ ಪುಕ್ಕಟೆ ನೀರು ಕೊಡುತ್ತಿದ್ದಾರೆ.                                                                                                               -ಸುದ್ದಿ          

ಕೃಷ್ಣಪ್ಪ ಅವರ ಈ ಕಾರ್ಯ ನೋಡಿ ಸ್ವರ್ಗದಲ್ಲಿರುವ ದೇವರು ಮೆಚ್ಚುಗೆಯನ್ನು  ಅವರಿಗೆ ನೀಡಿರಬಹುದು.

ಬರ ಪರಿಹಾರ ಕಾಮಗಾರಿಯನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬ ಬಗ್ಗೆ ಮುಖ್ಯ ಮಂತ್ರಿ ಸದಾನಂದ ಗೌಡರಿಗೆ ಯಡಿಯೂರಪ್ಪ ಪತ್ರ ಬರೆದು ತಿಳಿಸಿದ್ದಾರೆ.

– ಸುದ್ದಿ     

ಪ್ರವಾಸ ಮಾಡಿದ್ದರ ಉಪಯೋಗ ಪಡೆಯಲು ಅವರು ಈ ರೀತಿ ಪತ್ರ ಬರೆದು ಕೈ ತೊಳೆದುಕೊಂಡಿರಬಹುದು.

ಪ್ರಧಾನಿ ನಿವಾಸದಲ್ಲಿ ಜರ್ಧಾರಿ ಅವರಿಗಾಗಿ ಏರ್ಪಡಿಸಿದ್ದ ಓತಣಕೂಟದಲ್ಲಿ ಸಸ್ಯಾಹಾರಿ ಹಾಗೂ  ಮಾಂಸಹಾರಿ ಮಸಾಲೆ ದೋಸೆಗಳನ್ನು ಮಾಡಿಸಲಾಗಿತ್ತು.

-ಸುದ್ದಿ

ದೆಹಲಿಯಲ್ಲಿ ತಿಂದ ಮಸಾಲೆ ದೋಸೆಯ ರುಚಿಯ ನೆನಪು ಇಸ್ಲಾಮ ಬಾದಕ್ಕೆ ಹೋಗುವರೆಗೆ ಇರಬೇಕು ಎಂದು ಹೀಗೆ ಮಾಡಿರಬಹುದು.

ಪಾಕಿಸ್ತಾನ ಯುವರಾಜ ಬಿಲಾವರ ಭಾರತದ ಯುವರಾಜ ರಾಹುಲ ಗಾಂಧಿ ಅವರನ್ನು ಪಾಕಿಸ್ತಾನಕ್ಕೆ ಬರುವಂತೆ ಆವ್ಹಾನಿಸಿದ್ದಾರೆ.                                                                                                                                                  -ಸುದ್ದಿ

ನಾವಿಬ್ಬರೂ ಒಂದಾದರೆ ಭಾರತ ಉಪಖಂಡವನ್ನು ಚೆನ್ನಾಗಿ ಆಳಬಹುದು. ಎಂದು  ಅವರಿಬ್ಬರೂ ಭಾವಿಸಿರಬಹುದು.

ಬೆಳಗಾವಿಯಲ್ಲಿ ರಾಜ್ಯಪಾಲ ಹಂಸರಾಜ ಬಾರದ್ವಾಜ್ ಮುಖ್ಯಮಂತ್ರಿ ಡಿ. ವಿ ಸದಾನಂದಗೌಡರು ಪಕ್ಕದಲ್ಲಿ ಕುಳಿತು ಕೊಂಡು ಕಿವಿಯಲ್ಲಿ  ಮಾತನಾಡಿಕೊಂಡಿದ್ದರು.                                                                                               – ಸುದ್ದಿ

ಮಾತನ್ನು ಗುಟ್ಟಾಗಿ  ಇಡಲು ಅವರು ಈ ರೀತಿ  ಗುಟ್ಟಾಗಿ ಮಾತನಾಡಿ ಕೊಂಡಿರುವಂತೆ ಕಾಣುತ್ತದೆ.

ಅಜಮೀರ್ ದರ್ಗಾಕ್ಕೆ   ಜರ್ಧಾರಿ ಅವರು 5 ಕೋಟಿ ರೂಪಾಯಿ ಕಾಣಿಮೆ  ನೀಡಿದ್ದಾರೆ.

-ಸುದ್ದಿ

ದೇವರಿಗೆ ಹಣ ಕೊಟ್ಟರೆ  ದೇವರು  ನನಗೆ ಅದಕ್ಕಿಂತ ಹೆಚ್ಚು ಹಣ ಕೊಡುತ್ತಾನೆ ಎಂಬ ನಂಬಿಕೆಯಿಂದ ಅವರು ಈ ದಾನ ಮಾಡಿರಬಹುದು.

ದರ್ಗಾದಲ್ಲಿ ಸಂಜೆ  4 ಗಂಟೆಗೆ ನಡೆಯಬೇಕಾದ ಮದುವೆಯನ್ನು  ಜರ್ಧಾರಿ                                         ಅವರ ಆಗಮನದ ಕಾರಣದಿಂದ ಮುಂಜಾನೆ 11 ಗಂಟೆಗೆ ಮಾಡಿ ಮುಗಿಸಲಾಗಿದೆ.                                                                                  -ಸುದ್ದಿ

ದೊಡ್ಡವರಿಗಾಗಿ ಮೂಹೂರ್ತಗಳನ್ನು ಉಲ್ಟಾ ಪಲ್ಟಾ ಮಾಡಬೇಕಾಗಿ  ಬಂದಿರುವುದುನ್ನು  ಈ ಘಟನೆಯ ಮೂಲಕ ನಾವು ನೋಡಬಹುದು.

loading...

LEAVE A REPLY

Please enter your comment!
Please enter your name here