ಹುಲ್ಯಾನೂರ ಗ್ರಾಮಸ್ಥರಿಂದ ಅಬಕಾರಿ, ಪೋಲಿಸ ಸಿಬ್ಬಂದಿಗಳ ದಿಗ್ಬಂಧನ

0
22

ಪರ್ಯಾಯ ಉದ್ಯೌಗಕ್ಕೆ ಆಗ್ರಹ

loading...

ಬೆಳಗಾವಿ,17- ತಾಲೂಕಿನ ಹುಲ್ಯಾನೂರು ಗ್ರಾಮದಲ್ಲಿ ಕಳ್ಳಭಟ್ಟಿ ತಯಾರಿಸುವ ಕಾರ್ಯಕ್ಕೆ ಮಂಗಳವಾರ ತಡೆಯೊಡ್ಡಲು ಹೋಗಿದ್ದ ಅಬಕಾರಿ ಹಾಗೂ ಪೋಲಿಸ್ ಇಲಾಖೆಯ 20ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗೆ ದಿಗ್ಬಂಧನ ಹಾಕಿ, ಸರಾಯಿ ಮಾರಾಟ ಹಾಗೂ ತಯಾರಿಕೆ ನಿಲ್ಲಿಸುತ್ತೇವೆ. ನಮಗೆ ಪರ್ಯಾಯ ಉದ್ಯೌಗ ಕಲ್ಪಿಸಿ ಎನ್ನುವ ಒತ್ತಡ ಹೇರಿದ ಘಟನೆ ನಡೆದಿದೆ.

ಅಧಿಕಾರಿ ಸಿಬ್ಬಂದಿಗೆ ಗ್ರಾಮಸ್ಥರು ಯಾವುದೇ ರೀತಿಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿಲ್ಲ. ಆದರೆ ಕಳ್ಳಭಟ್ಟಿ ತಯಾರಿಕೆಯ ತಮ್ಮ ತಲೆಮಾರುಗಳಿಂದ ಬಂದ ಉದ್ಯೌಗವನ್ನು ನಿಲ್ಲಿಸುವುದಾಗಿ ಒತ್ತಡ ಹೇರುವುದರ ಜೊತೆಗೆ ಹಿಂಸೆ ಕೊಡುತ್ತಿದ್ದೀರಿ, ಇಲ್ಲ ಸಲ್ಲದ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದೀರಿ. ತಾವು ಈ ವೃತ್ತಿಯಿಂದ ಹೊರಬರುತ್ತೇವೆ. ನಮಗೆ ಉದ್ಯೌಗ ಕೊಡಿ ಎನ್ನುವ ಆಗ್ರಹ ಇಡೀ ಗ್ರಾಮದ್ದಾಗಿತ್ತು.

ಕೆಲ ಗಂಟೆಗಳ ಕಾಲ ಸಿಬ್ಬಂದಿಯನ್ನು ಹಿಡಿದಿಟ್ಟುಕೊಂಡ ಕಳ್ಳಭಟ್ಟಿ ಸರಾಯಿ ತಯಾರಿಕೆ ಕಾಯಕದಲ್ಲಿದ್ದವರು ಯಾವುದೇ ಅಮಾನುಷ ಕೃತ್ಯಗಳನ್ನು ಎಸಗಿಲ್ಲ. ಈ ಹಿಂದೆ ತಮಗೆ ಮಾತು ಕೊಟ್ಟಂತೆ ಉದ್ಯೌಗ ಕೊಡಿ ಎನ್ನುವ ಒತ್ತಾಯ ಮಾತ್ರ ಅವರ ಉದ್ದೇಶವಾಗಿತ್ತು. ಕಳ್ಳಭಟ್ಟಿ ಸರಾಯಿ ತಯಾರಿಕೆ ಕೈಬಿಡುತ್ತೇವೆ. ತಮಗೊಂದು ನಿತ್ಯ ಹೊಟ್ಟೆಹೊರೆಯುವ ಉದ್ಯೌಗ ಕಲ್ಪಿಸಿದರೆ ಸಾಕು ಎನ್ನುವ ಅಭಿಪ್ರಾಯಗಳು ಊರಿನವರಾಗಿದ್ದವು.

ಕೆಲ ದಿನಗಳ ಹಿಂದೆ ಸುತ್ತಲಿನ ನೂರಾರು ಹಿಂದುಳಿದ ಗ್ರಾಮಗಳ ಕಳ್ಳಭಟ್ಟಿ ವಹಿವಾಟಿನಲ್ಲಿದ್ದವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಉದ್ಯೌಗ ಕಲ್ಪಿಸುವಂತೆ ಒತ್ತಾಯಿಸಿ ಇಲ್ಲಸಲ್ಲದ ಪ್ರಕರಣ ದಾಖಲಿಸುವ ಕುರಿತು ಪ್ರತಿಭಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ…

loading...

LEAVE A REPLY

Please enter your comment!
Please enter your name here