25ರಿಂದ ಬಿರನಹೋಳಿ ಗೋಪುರದ ಕಳಸಾರೋಹಣ

0
35
loading...

ಯಮಕನಮರಡಿ 23 :- ಧರ್ಮಗಳ ಬೀಡಾದ ನಮ್ಮ ಕನ್ನಡ ನಾಡಿನಲ್ಲಿ ಗ್ರಾಮೀಣ ಪ್ರದೇಶಗಳಾದ ಗ್ರಾಮಗಳಲ್ಲಿ ದುರ್ಗಾದೇವತೆ, ಲಕ್ಷ್ಮೀ ದೇವತೆ, ಶಾಕಾಂಬರಿ ಶಕ್ತಿ ದೇವಿ, ಇತ್ಯಾದಿ ದೇವತೆಗಳನ್ನು ಪೂಜಿಸಿ ಪ್ರತಿ ವರ್ಷಕ್ಕೊಮ್ಮೆ ಭಯಭಕ್ತಿಯಿಂದ ಎಲ್ಲ ಜನರು ಸೇರಿಕೊಂಡು ಜಾತ್ರೆ ಉತ್ಸವ ದೇವತೆಗಳ ಹರಕೆ ಮುಟ್ಟಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಮಾಡುತ್ತಾ ತಮ್ಮ ತಮ್ಮ ಮನ ಧನವನ್ನು ದೇವರಿಗೆ ಅರ್ಪಿಸಿ ಜಾತ್ರೆ ಸಮಾರಂಭಗಳನ್ನು ಆಯೋಜಿಸುತ್ತಾ ಬಂದಿರುವುದು ಒಂದು ಗ್ರಾಮೀಣ ಪ್ರದೇಶದ ಪ್ರತೀತಿ.

ಹುಕ್ಕೇರಿ ತಾಲೂಕಿನ ಬಿರನಹೊಳಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ದಿ: 25 ರಂದು ಸಾಯಂಕಾಲ 5 ಗಂಟೆಗೆ ಕಳಸದ ಮತ್ತು ಶ್ರೀ ದೇವಿಗೆ ದೇಣಿಗೆ ಕೊಟ್ಟ ಬೆಳ್ಳಿ ಕೀರೀಟದ ಮೆರವಣಿಗೆ ಸಕಲ ಕುಂಭಮೇಳದೊಂದಿಗೆ ದೇವಸ್ಥಾನಕ್ಕೆ ಮುಟ್ಟಿಸುವದು. ಅದೇ ದಿನ ರಾತ್ರಿ 10 ಗಂಟೆಗೆ ಬಿರನಹೊಳಿ ಗ್ರಾಮದವರಿಂದ ಭಜನಾ ಕಾರ್ಯಕ್ರಮ ಗುರುವಾರ ದಿ 26 ರಂದು ಮುಂಜಾನೆ 8 ರಿಂದ 10 ಗಂಟೆಯವರೆಗೆ ಕಳಸದ ಅಭಿಷೇಕ ದಿವ್ಯ ಸಾನಿಧ್ಯ ಶ್ರೀ ಶ್ರೀ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು ಅಂಕಲಿಮಠ, ಲಿಂಗಸೂರ ಜಿಲ್ಲಾ ರಾಯಚೂರ ನಂತರ ಇವರ ದಿವ್ಯ ಸಾನಿಧ್ಯದಲ್ಲಿ ಮ.ನಿ.ಪ್ರ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಕಾರಿಮಠ ಹತ್ತರಗಿ, ಪರಮಪೂಜ್ಯ ಶಿವಲಿಂಗೇಶ್ವರ ಮಹಾಸ್ವಾಮಿಗಳು ಅಡವಿ ಸಿದ್ದೇಶ್ವರಮಠ ಇಸ್ಲಾಂಪೂರ, ಶ್ರೀ ಬಾಳಯ್ಯ ಸ್ವಾಮಿಗಳು ಗುಟಗುದ್ದಿ, ಶ್ರೀ ರಾಚಯ್ಯ ಸ್ವಾಮಿಗಳು ಗವಿಮಠ ಬಸ್ಸಾಪೂರ, ಶ್ರೀ ಬಾಬು ಶರಣರು ಶ್ರೀಕೃಷ್ಣ ಮಠ ಬಿರನಹೊಳಿ, ಕಳಸಾರೋಹಣದ ಕಾರ್ಯಕ್ರಮದ ಉದ್ಘಾಟಕರು ಉಮೇಶ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರು

ಮುಖ್ಯ ಅತಿಥಿಗಳು: ರಮೇಶ ಕತ್ತಿ ಸಂಸದರು ಚಿಕ್ಕೌಡಿ, ಶಶಿಕಾಂತ ಅಕ್ಕಪ್ಪ ನಾಯ್ಕ ಮಾಜಿ ಸಚಿವರು, ಸತೀಶಣ್ಣಾ ಲ. ಜಾರಕೀಹೊಳಿ ಶಾಸಕರು ವಿಧಾನಸಭಾ ಯಮಕನಮರಡಿ, ಲಖನ ಲ. ಜಾರಕೀಹೊಳಿ ಖ್ಯಾತ ಉದ್ಯಿಮೆದಾರರು, ಡಾ|| ಎಸ್.ಡಿ.ಪಾಟೀಲ ಅಧ್ಯಕ್ಷರು ಚನ್ನಮ್ಮ ವಿಜಯೋತ್ಸವ ಕಾಕತಿ, ರಾಯಪ್ಪ ಸಾ. ನಾಗಾರ ವಾಣಿಜ್ಯ ತೆರಿಗೆ ಇಲಾಖೆ.

ಅತಿಥಿಗಳು: ಗೌರವ್ವ ಸಿದ್ದಲಿಂಗ ಸಿದ್ದಗೌಡರ ಜಿಲ್ಲಾ ಪಂಚಾಯತ ಸದಸ್ಯರು ಪಾಶ್ಚಾಪೂರ, ದುರ್ಗವ್ವಾ ದೊಡ್ಡಫಕೀರಪ್ಪಾ ಹುಂದರಿ ತಾಲೂಕಾ ಪಂಚಾಯತ ಸದಸ್ಯರು ಶಹಾಂಬದರ, ಕಾಶವ್ವಾ ಬಾಳಪ್ಪಾ ಮುಂಡಲಿ, ಭೀಮಪ್ಪಾ ಮಾರುತಿ ಗುದಗೆ ಎಲ್.ಐ.ಸಿ ಏಜಂಟರು ಚಿಕ್ಕೊಡಿ, ವಿರುಪಾಕ್ಷಿ ಯರಗಟ್ಟಿ, ಹೊಳೆಪ್ಪಾ ಯಲ್ಲಪ್ಪಾ ಗೌಡರ ಕಾಟಾಬಳ್ಳಿ, ಲಕ್ಷ್ಮಣ ಹುಣಗೇಕರ, ಆಲೋಗಡ್ಡೆ ವ್ಯಾಪಾರಸ್ಥರು ಬಸಪ್ಪ ಅ ವಾಲಿ, ಶೇಂಗಾ ವ್ಯಾಪಾರಸ್ಥರು ದೊಡಶ್ಯಾನಟ್ಟಿ. ನಾರಾಯಣ ರಾಮಾ ಅವಾಚಾರಿ, ಕಾಯಿಪಲ್ಲೆ ವ್ಯಾಪಾರಸ್ಥರು, ಬಸವಣ್ಣಿ ರಾಮಪ್ಪಾ ಗಸ್ತಿ, ಮುಶ್ರಥ ಎ. ಮುಜಾವರ, ಶೇಂಗಾ ವ್ಯಾಪಾರಸ್ಥರು, ಶಿವಗುಂಡ ಬ ಬುಡಕಿ, ಶಿವರಾಯಿ ಬಿ. ಗುರವ, ಸಿದ್ದಲಿಂಗ ಬಾ ಹುಕ್ಕೇರಿ ಸಾ: ಜಂಗಟಿಹಾಳ ವಕೀಲರು.

ಗೋಪುರ ನಿರ್ಮಾಣ ಬಸವರಾಜ ಕಮ್ಮಾರ ನೆರಲಿ, ಮಹಾಪ್ರಸಾದ ವ್ಯವಸ್ಥೆ ಮತ್ತು ನೆನಪಿನ ಕಾಣಿಕೆ ಶ್ರೀ ದುರ್ಗಾದೇವಿ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ.ಯಮಕನಮರಡಿ (ಬಿರನಹೊಳಿ) ಸಾಯಂಕಾಲ 5 ಗಂಟೆಗೆ ಬಸವೇಶ್ವರ ದೇವರಿಗೆ ಅಭಿಷೇಕ ಅದೇ ದಿನ ರಾತ್ರಿ 10 ಗಂಟೆಗೆ ಸಂಗ್ಯಾ ಬ್ಯಾಳಾ ಸಣ್ಣಾಟ. ದಿ28 ರಂದು ರಾತ್ರಿ 10 ಗಂಟೆಗೆ ನಾಟಕ ಕೆಂಗಟ್ಟ ಕ್ರಾಂತೀವೀರ. ದಿ29 ರಂದು ರಸಮಂಜರಿ ಕಾರ್ಯಕ್ರಮ ಈ ಪ್ರಕಾರ ಕಾರ್ಯಕ್ರಮಗಳು ಜರುಗಲಿವೆ.

 

loading...

LEAVE A REPLY

Please enter your comment!
Please enter your name here