ಖಾನಾಪುರ ಕಾಲೇಜಿನ ಪ್ರಾಚಾರ್ಯರಾಗಿ ನೋಗಿನಹಾಳ ಅಧಿಕಾರ

0
23
loading...

ಖಾನಾಪುರ,20- ಇಲ್ಲಿಯ ಕೆಎಲ್ಇ ಸಂಸ್ಥೆಯ ಶ್ರೀ ಎಂ.ಎಸ್.ಹೊಸಮನಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಬಿ.ಐ.ನೋಗಿನಹಾಳ ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು.

ಕಳೆದ 30 ವರ್ಷಗಳಿಂದ ಬೆಳಗಾವಿ ನಗರದ ಕಾಲೇಜು ರಸ್ತೆಯ ಕೆಎಲ್ಇ ಸಂಸ್ಥೆಯ ಆರ್ಎಲ್ಎಸ್ ವಿಜ್ಞಾನ ಸಂಸ್ಥೆಯಲ್ಲಿ ಗಣಿತ ಪ್ರಾಧ್ಯಾಪಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ನೋಗಿನಹಾಳ ಅವರು  ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕರಾಗಿ ಎರಡು ವರ್ಷಗಳ ಶೈಕ್ಷಣಿಕ ಸೇವೆ ಕೊಡಮಾಡಿದ್ದಾರೆ. ಗಣಿತ ವಿಷಯದಲ್ಲಿ ತಜ್ಞರಾಗಿರುವ ನೋಗಿನಹಾಳ ಕಠಿಣ ವಿಷಯಗಳನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಲ್ಲಿ ಪರಿಣಿತರಾಗಿದ್ದಾರೆ. ಸರಳ ಸಜ್ಜಣಿಕೆಯ ಹಾಗೂ ಸದಾ ವಿದ್ಯಾರ್ಥಿಗಳ ಪ್ರಗತಿ ಬಯಸುವ ನೋಗಿನಹಾಳ ಖಾನಾಪುರ ಹೊಸಮನಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿರುವುದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಒಂದು ವರದಾನವಾಗಿ ಪರಿಣಮಿಸಿದೆ.

ಪ್ರಾಚಾರ್ಯ ನೋಗಿನಹಾಳ ಅವರು ಅಧಿಕಾರ ವಹಿಸಿಕೊಳ್ಳುವ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಸ್ಥಳೀಯ ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ಆರ್.ವಿ.ಹಂಜಿ, ಶೈಕ್ಷಣಿಕವಾಗಿ ಅಪಾರ ಅನುಭವ ಹೊಂದಿರುವ ನೋಗಿನಹಾಳ ಅವರ ಸೇವೆ ಕಾಲೇಜಿಗೆ ಅಗತ್ಯವಾಗಿದೆ. ಕಳೆದ 30 ವರ್ಷಗಳಿಂದ ಅವರು ಕೆಎಲ್ಇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದರು. ನೂತನ ಪ್ರಾಚಾರ್ಯ ಬಿ.ಐ.ನೋಗಿನಹಾಳ ಮಾತನಾಡಿ, ಸೇವಾ ನಿವೃತ್ತಿಯ ನಂತರ ಮೊದಲ ಬಾರಿಗೆ ಪ್ರಾಚಾರ್ಯರಾಗಿ ಬಡ್ತಿ ಹೊಂದಿದ್ದು ಸಂತಸ ತಂದಿದೆ. ಇದನ್ನು ಸ್ಪರ್ಧಾತ್ಮಕ ಮನೋಭಾವದಿಂದ ಸ್ವೀಕರಿಸಿ, ಪ್ರಾಮಾಣಿಕ ಸೇವೆ ಸಲ್ಲಿಸುವುದರ ಜೊತೆಗೆ ಕಾಲೇಜಿನ ಶೈಕ್ಷಣಿಕ ಪ್ರಗತಿ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರು, ಪ್ರಾಧ್ಯಾಪಕರು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here