ದೇಶದಲ್ಲಿ ಬ್ರಷ್ಟಾಚಾರ ಮೀತಿ ಮೀರಲು ವಿದ್ಯಾವಂತರೇ ಕಾರಣ: ನಾಡೋಜ ಪಾಟೀಲ ಪುಟ್ಟಪ್ಪ

0
89
loading...

ರಾಮದುರ್ಗ: ದೇಶದಲ್ಲಿ ಬ್ರಷ್ಟಾಚಾರ ಮೀತಿ ಮೀರಿ ಹೆಚ್ಚಲು ವಿದ್ಯಾವಂತರೇ ಆಗಿದ್ದು ದೇಶದ ನಿಜವಾದ ಶತ್ರುಗಳು ಎಂದರೆ ವಿದ್ಯಾವಂತರಲ್ಲಿ ಸಮಯಸಾಧಕತನ ಹೆಚ್ಚಿರುವದೇ ಬ್ರಷ್ಟಾಚಾರಕ್ಕೆ ಮೂಲ ಕಾರಣ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದರು.

ನಗರದ ತಾಲೂಕಾ ಪಂಚಾಯತ ಸಭಾಭವನದಲ್ಲಿ ಶನಿವಾರ ಸಂಜೆ ರಾಜ್ಯ ಮಾನವ ಹಕ್ಕು ಮತ್ತು ಸಂಸ್ಕ್ಕತಿ ರಕ್ಷಣಾ ವೇದಿಕೆ ಉದ್ಘಾಟಿಸಿ ಮಾತನಾಡಿದ ಪಾಪು ಅವರು ಕಣ್ಮುಂದೆ ಬ್ರಷ್ಠಾಚಾರ, ಅನ್ಯಾಯ ಮತ್ತು ಅಕ್ರಮಗಳು ನಡೆದರು ಸಹಿತ ಅದನ್ನ ಪ್ರತಿಭಟಿಸದೇ ಅದು ನಮಗೆ ಸಂಭಂಧವಿಲ್ಲ ಎಂದು ಸುಮ್ಮನಿರುವ ವಿದ್ಯಾವಂತರು ದೇಶದ ಅಭಿವೃದ್ದಿಗೆ ಮಾರಕವಾಗಿದ್ದು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆಂದು ತಮ್ಮ ಅಸಮಧಾನ ವ್ಯಕ್ತಪಡಿಸಿದ ಪಾಪು ಗ್ರಾಮೀಣ ಪ್ರದೇಶದ ಅವಿದ್ಯಾವಂತರು ತಮಗಾದ ಅನ್ಯಾಯವನ್ನು ಪ್ರತಿಭಟಿಸಲು ಸರಿಯಾದ ಮಾರ್ಗವನ್ನು ವಿದ್ಯಾವಂತರು ತೋರಿಸಬೇಕು ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಮನೋಭಾವನೆ ಬೆಳಸಿಕೊಳ್ಳಬೇಕೆಂದು ಕರೆ ನೀಡಿದರು.

ದೇಶದಲ್ಲಿ ಇಂದು ಹಲವರು ರಾಷ್ಟ್ತ್ರ ನಾಯಕರ ಜಯಂತಿಗಳನ್ನು ವಿಜೃಂಭನೆಯಿಂದ ಆಚರಣೆ ಮಾಡುವವರೆಲ್ಲ ಆ ನಾಯಕರ ಜೀವನದ ಆದರ್ಶಗಳನ್ನು ಕೆಲವನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳ ಆಚರಣೆಗೆ ಅರ್ಥ ಬರುತ್ತದೆ ಎಂದು ನುಡಿದರು.

ದೇಶದಲ್ಲಿ ಪರಿಶಿಷ್ಠರ ಕಾಲೋನಗಳ ಪ್ರತ್ಯೇಕತೆ ನಿಲ್ಲಬೇಕು ಅಂದಾಗ ಜಾತಿಯ ಭೂತ ಸಮಾಜದಿಂದ ದೂರವಾಗಲು ಸಾಧ್ಯ ಇಲ್ಲದಿದ್ದರೆ ಜಾತಿಯತೆ ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣವಾಗುತ್ತಿದೆ ಎಂದು ಹೇಳೀದರು.

ಹೆಸರಿಗಷ್ಟೆ ಹೋರಾಟ :  ಮಹಾರಾಷ್ಟ್ತ್ರದ ಹಲವಾರು ಕನ್ನಡ ಶಾಲೆಗಳನ್ನು ಅಲ್ಲಿಯ ಸರ್ಕಾರ ಬಂದ ಮಾಡಿ ಮರಾಠಿ ಶಾಲೆಗಳನ್ನು ಆರಂಭಿಸಿದ್ದು ಈ ಬಗ್ಗೆ  ಬೆಳಗಾವಿ ಜನ ಪ್ರತಿಭಟನೆ ಮಾಡದಿರುವದಕ್ಕೆ ತಮ್ಮ ಅಸಮಧಾನ ವ್ಯಕ್ತಪಡಿಸಿದ ಪಾಟೀಲ ಪುಟ್ಟಪ್ಪನವರು ಬೆಳಗಾವಿಯ ಖಡೆ ಬಝಾರದ ಸಾರ್ವಜನಿಕ ಗ್ರಂಥಾಲಯ ಕನ್ನಡಿಗರದ್ದಾಗಿದ್ದರು ಅದು ಮರಾಠಿಗರ ಕೈಯಲ್ಲಿದೆ ಅದನ್ನು ತಾವು ಕಾನೂನು ಪದವಿ ಪಡೆಯುವ ಸಮಯದಲ್ಲಿ ಹೋರಾಟ ಮಾಡಿ ಕನ್ನಡಿಗರ ಗ್ರಂಥಾಲಯ ಮಾಡಲಾಗಿತ್ತು ಆದರೆ ಈಗ ಅದು ಮತ್ತೇ ಮರಾಠಿಗರ ವಶದಲ್ಲಿರುವದನ್ನು ನೋಡಿದರೆ ಬೆಳಗಾವಿಯ ಕನ್ನಡಿಗರು ಹೆಸರಿಗಷ್ಟೆ ಹೋರಾಟ ಮಾಡುತ್ತಿರುವದು ಸ್ಪಷ್ಟವಾಗುತ್ತದೆ ಎಂದು ಅವರು ಕೊನೆಯ ಉಸಿರು ಇರುವವರಗೆ ನಾಡು ನುಡಿಗೆ ಹೋರಾಟ ಮಾಡುವದಾಗಿ ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ವಜನ ಸಮಾದ ರಾಜ್ಯಾಧ್ಯಕ್ಷ ಬಿ. ಗೋಪಾಲ ಮಾತನಾಡಿ ಸಮಾಜದ ಕೆಳ ವರ್ಗದ ಜನರಿಗೆ ಬದುಕುವ ಮತ್ತು ಜೀವನ ನಡೆಸಲು ಸಂವಿದಾನ ಬದ್ದವಾಗಿ ಹಕ್ಕುಗಳನ್ನು ನೀಡಿದ ಸಂವಿದಾನ ಶಿಲ್ಪಿ ಅಂಬೇಡ್ಕರ ಅವರ ಕುರಿತು ಮಾರ್ಮಿಕವಾಗಿ ಮಾತನಾಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಜನರ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಂಸ್ಥೆ ಮಹತ್ವದ ಪಾತ್ರವಹಿಸಬೇಕೆಂದರು.

ತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸೀರಹ್ಮದ ಬೈರಕದಾರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿ. ಪಂ ಮಾಜಿ ಸದಸ್ಯ ಮುಸ್ತಫಾ ದಾವಲಬಾಯಿ, ಸ್ಥಾಯಿ ಸಮಿತಿ ಮಾಜಿ ಚೇರಮನ್ ಬಿ. ಆರ್. ಬೈರಕದಾರ ಸಮುದಾಯ ಘಟಕದ ಅಧ್ಯಕ್ಷ ಬಿ. ಆರ್. ದೊಡಮನಿ, ಪುರಸಭಾ ಸದಸ್ಯ ಅಬ್ದುಲ್ರಶೀದ ಪೆಂಡಾರಿ, ಬಿಜೆಪಿ ಮುಖಂಡ ಮಲ್ಲಣ್ಣ ಯಾದವಾಡ ವೇದಿಕೆಯ ಮೇಲಿದ್ದರು.

ರಾಜಶೇಖರ ಶೆಲವಡಿ ಸ್ವಾಗತಿಸಿದರು. ಆರ್. ವೈ. ಮೇತ್ರಿ ಕಾರ್ಯಕ್ರಮ ನಿರೂಪಿಸಿದರು. ರವಿ ಹರವಿ ವಂದಿಸಿದರು.

 

loading...

LEAVE A REPLY

Please enter your comment!
Please enter your name here