ಪಾಲ್ ಹ್ಯಾರಿಸ್ ಹುಟ್ಟುಹಬ್ಬ ಆಚರಣೆ

0
17
loading...

ಅಥಣಿ,2- ಗುರುವಾರ 19ರಂದು ಪಾಲ್ ಹ್ಯಾರಿಸ್ ಅಂತರಾಷ್ಟ್ತ್ರೀಯ ಸಂಸ್ಥೆ ರೋಟರಿ ಇದರ ಜನಕ, ಇವರ 144ನೇ ಜನ್ಮದಿನವನ್ನು ಆಚರಿಸಲಾಯಿತು. ಈ ಮುಖ್ಯ ಕಾರ್ಯಕ್ರಮಕ್ಕೆ ಟಿ.ಡಿ.ಜಿ. ರೋ. ಡಾ. ಗೀರೀಶ ಉದಪುಡಿರವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು.

ಅತಿಥಿ ಪರ ಭಾಷಣದಲ್ಲಿ ರೋಟರಿ ಫೌಂಡೇಶನ ಇದರ ಕಾರ್ಯವೈಖರಿಯ ಬಗ್ಗೆ ವಿವರವಾಗಿ ತಿಳಿಸಿದರು. ರೋಟರಿ ಫೌಂಡೇಶನಗೆ ಸಂದಾಯಿಸುವ ಪ್ರತಿಯೊಂದು ಡಾಲರು ವ್ಯಯವಾಗದಂತೆ ನಿಖರವಾದ ಲೆಕ್ಕವನ್ನು ಇಟ್ಟು ರೋಟರಿ ಸಂಸ್ಥೆಯು ಹಮ್ಮಿಕೊಳ್ಳುವ ಆರೋಗ್ಯ, ಶಿಕ್ಷಣ, ಪ್ರಾಕೃತಿಕ ವಿಕೋಪಕ್ಕೆ ಹಾಗೂ ಅಂಬ್ಯಾಸಡಿರಿಯನ್, ಸ್ಕಾಲರ ಶಿಫ್ಕ್ಕೆ ವಿನಯೋಗಿಸುದೆಂದು ತಿಳಿಸಿದರು.                         ರೋಟರಿ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ ವ್ಯಕ್ಕಿ ಪಾಲ್ ಹ್ಯಾರಿಸ್ ಇವರ ಕೊಡುಗೆಯನ್ನು ನೆರೆದಂತಹಯ ಸಭಿಕರಿಗೆ ಮನದಟ್ಟು ಮಾಡಿ ಕೊಟ್ಟರು.

ಸ್ವಾಗತ ಪರ ಭಾಷಣ ಮಾಡಿದ ರೋಟರಿ ಅಧ್ಯಕ್ಷ ರೋ, ಡಾ.ಪಿ.ಪಿ. ಮಿರಜ ಇವರು ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಮೂರು ರೋಟರಿಯನ್ನರಿಗೆ ಪಾಲ್ ಹ್ಯಾರಿಸ್ ಫೆಲೋ ಫಿನ್ ಹಾಗೂ ಸರ್ಟಿಫಿಕೇಟ, ಅದೇ ರೀತಿ ಸಂಸ್ಥೆಗೆ ಹೊಸದಾಗಿ ಸೇರಿಕೊಂಡಂತಹ ಹೊಸ ಸದಸ್ಯರ ಸೇರ್ಪಡೆ ಹಾಗೂ ರೋಟರಿ ಸಂಸ್ಥೆಯ ಪೋಲಿಯೋ ಚಾಲೆಂಜ್ ನಿಧಿಗೆ ಹೆಚ್ಚಿನ ಮೊತ್ತ ಕೊಟ್ಟು ಪ್ರೊತ್ಸಾಹಿಸಿದ ಗಣ್ಯರಿಗೆ ಡಿಸ್ಟ್ತ್ರಿಕ್ಟ 3170 ದಿಂದ ಕೊಡ ಮಾಡಿದ ಪೋಲಿಯೋ ಪ್ರಶಂಸನಾ ಪತ್ರ ವಿತರಣ  ಕಾರ್ಯಕ್ರಮಗಳನ್ನು ಇವತ್ತೀನ ಕಾರ್ಯಕ್ರಮದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು. ಸಂಸ್ಥಾಪಕ ಅಧ್ಯಕ್ಷ ರೋ, ಗಜಾನನ ಮಂಗಸೂಳಿಯವರು ಅಥಣಿ ರೋಟರಿ ಸಂಸ್ಥೆ ನಗರದಲ್ಲಿ ಇಲ್ಲಿಯವರೆಗೆ, ಮಾಡಿದ ಎಲ್ಲ ಜನಪರ ಕಾರ್ಯಕ್ರಮ ಗಳ ಬಗ್ಗೆ ತಿಳಿಸಿದರು.

ಈ ಕಾರ್ಯಕ್ರಮ ದಲ್ಲಿ ರೋ, ಅರುಣ ಯಲಗುಂದಿ,  ರೋ.ಅನಂತ ಮುತಾಲಿಕ, ರೋ, ಡಂ ಕೋರಾಣ ಮಠ, ರೋ.ಡಾ.ಚಿಮ್ಮಡ, ರೋ. ಡಾ.ಸಂಕ್ರಟ್ಟಿ, ರೋ. ಡಾ.ಮಾಳಿ, ರೋ. ಪ್ರವೀಣ ಭಾಟೆ, ರೋ.ಶ್ರೀಕಾಂತ ಅಥಣಿ ಇನ್ನು ಅನೇಕ ರೋಟರಿ ಸದಸ್ಯರು ಇನರವೀಲ್ ಅಧ್ಯಕ್ಷ ಆಯನ್, ಸುಮೇಧಾ ಮಿರಜ ಹಾಗೂ ಅನೇಕ ಇನ್ಹರುವೀಲ್ ಸದಸ್ಯರು ಪಾಲ್ಗೊಂಡಿದ್ದರು.

ರೋ. ಸಿ.ಎಸ್.ಹತ್ತಿ ವಂದನಾರ್ಪಣೆ ಮಾಡಿದರು. ರೋ. ಅರುಣ ಯಲಗುಂದ್ರಿ ಕಾರ್ಯಕ್ರಮದ ಸಂಪೂರ್ಣ ಪ್ರಯೋಜಕತೆಯನ್ನು ರೋ. ಅನೀಲ ದೇಶಪಾಂಡೆ ವಹಿಸಿಕೊಂಡಿದ್ದರು.

 

loading...

LEAVE A REPLY

Please enter your comment!
Please enter your name here