ವಾರ್ಡವಾರು ಕ್ರಿಕೇಟ್ ಪಂದ್ಯಾವಳಿ ಉದ್ಘಾಟನೆ

0
34
loading...

ಚಿಕ್ಕೌಡಿ:25ಸಿಕೆಡಿ-01ಗ್ರಾಮೀಣ ಭಾಗದ ಕ್ರಿಕೇಟ್ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸದುದ್ದೇಶದಿಂದ ವಾರ್ಡವಾರು ಕ್ರೀಕೇಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಪಂದ್ಯಾವಳಿ ಸಂಘಟಕ ವಿಕ್ರಮ ಶಿರಸೇಟ್ ಹೇಳಿದರು.

ತಾಲೂಕಿನ ಅಂಕಲಿ ಗ್ರಾಮದಲ್ಲಿ ಏರ್ಪಡಿಸಿರುವ ವಾರ್ಡವಾರು ಕ್ರಿಕೇಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಕ್ರಿಕೇಟ್ ಪಂದ್ಯಾವಳಿಯಲ್ಲಿ ಗ್ರಾಮದ 16 ಸಂಘಗಳು ಭಾಗವಹಿಸಿದ್ದು, ಎಲ್ಲ ತಂಡದವರು ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.

ಸದಾಶಿವ ಮಗದುಮ್ಮ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ, ಕ್ರೀಡೆಯೂ ಮನುಷ್ಯನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಸತೀಶ ಕೋರೆ, ತುಕಾರಾಮ ಪಾಟೀಲ, ಶಿವಾಜಿ ಕೋಠಿವಾಲೆ, ದೀಪಕ ಮೇದಾರ, ಪಾಂಡುರಂಗ ವಡ್ಡರ, ಸಚೀನ ಶಿತೋಳೆ, ಅಖೀಲ ಮುಲ್ಲಾ, ಸಚೀನ ಪಾಟೀಲ, ನಂದೂ ಶೀತೋಳೆ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here