ಆಸ್ತಿ ವಿವಾದ: ಜೀವ ಬೆದರಿಕೆ, ಪೋಲಿಸ್ ವರಿಷ್ಠಾಧಿಕಾರಿಗಳಲ್ಲಿ ದೂರು

0
18
loading...

ಮೂಡಲಗಿ,28-ಧರ್ಮಟ್ಟಿ ಗ್ರಾಮದ ನೀಲವ್ವ ಸಣ್ಣಸಿದ್ದಪ್ಪ ಪಾಟೀಲ ಎಂಬ ಮಹಿಳೆಯ ಜಮೀನು  ತಂಟೆಗೆ  ಸಂಬಂಧಿಸಿದಂತೆ  ಲಕ್ಷ್ಮಣ ತೆಳಗಡೆ ಹಾಗೂ ಇತರರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆಂದು ಅಮಾಯಕ ಪರಿಶಿಷ್ಠ ಪಂಗಡದ ಯುವಕ ಮಲ್ಲಪ್ಪ ನಿಂಗಪ್ಪ ಕುರಣಗಿ ಅವರು   ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ದೂರು ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ

ಘಟನೆಯ ಹಿನ್ನೇಲೆ: ಗೋಕಾಕ ತಾಲೂಕಿನ ಧರ್ಮಟ್ಟಿಯ ಉಪವೀರ ತೋಟದ ನಿವಾಸಿ ನೀಲವ್ವ ಸಣ್ಣಸಿದ್ದಪ್ಪ ಪಾಟೀಲ್ ಎಂಬಾಕೆಯು ತನ್ನ ಸ್ವಂತ ಪಿತ್ರಾರ್ಜಿತ ಆಸ್ತಿಯಾದ 5.15 ಎಕರೆ ಜಮೀನು ಇತ್ತು. ಇದರಲ್ಲಿಯ 3.20 ಎಕರೆ  ಜಮಿನನ್ನು ಸಂಬಂದಿಗಳಾದ ಬಸಲಿಂಗಪ್ಪ ಸಿದ್ದಪ್ಪ ಪಾಟೀಲ ಎಂಬುವವರಿಗೆ ನೀಲವ್ವಾ ಮಾರಿದ್ದಾರೆ. ಆದರೆ ನೀಲವ್ವಳಿಗೆ 2.01 ಎಕರೆ ಜಮೀನು  ಉಳಿಯಬೇಕಾಗಿತ್ತು. ಸಂಬಂದಿಗಳಾದ ಬಸಲಿಂಗಪ್ಪ ಸಿದ್ದಪ್ಪ ಪಾಟೀಲ ಎಂಬ ವ್ಯಕ್ತಿ ನೀಲವ್ವಳ ಉಳಿದ ಜಮೀನನ್ನು ತಮ್ಮದಾಗಿಸಿಕೊಳ್ಳಬೇಕೆಂದು ದುರುದ್ದೇಶದಿಂದ ತಂಟೆ ತಕರಾರು, ಕಿರುಕಳ ಕೊಡುತ್ತಿದ್ದಾನೆಂದು ಗ್ರಾಮದ ಹಿರಿಯರಿಗೆ  ತಿಳಿಸಿದ್ದರೂ ವ್ಯಾಜ್ಯ ಬಗೆ ಹರಿಯದಿದ್ದಾಗ  ಪ್ರಕರಣವು ಮೂಡಲಗಿ ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಿದಾಗ ರಾಜಿ ಪಂಚಾಯಿತಿ ಮೂಲಕ ಅವಳ ಜಮೀನನನ್ನು ಆಕೆಗೆ ಮರಳಿಸಲು ಸೂಚಿಸಿದ್ದರಿಂದ ಸ್ಥಳೀಯ ಯುವಕರಾದ ಲಕ್ಕಪ್ಪ ಪೂಜೇರಿ ಹಾಗೂ ಮಲ್ಲಪ್ಪ ಕುರಣಗಿ ಇನ್ನೀತರರು ಕೂಡಿಕೊಂಡು ಅದರಲ್ಲಿನ 1 ಎಕರೆ ಜಮೀನನ್ನು ಸುನಂದಾಳ ಪಾಲಿಗೆ ಬರುವ ಜಮೀನನ್ನು ಇಸಿದುಕೊಡಿಸಿದ್ದಾರೆ.

ಆದರೆ ಇದೇ ಒಂದು ಕಾರಣ ಮುಂದಿಟ್ಟುಕೊಂಡು  ಜೂನ 5  ರಂದು ಧರ್ಮಟ್ಟಿ ಗ್ರಾಮದ  ಲಕ್ಷ್ಮಣ ಭೀಮಪ್ಪ ತೆಳಗಡೆ, ಸದಾಶಿವ ಹಳ್ಳೂರ ಕೂಡಿಕೊಂಡು ಬಸಲಿಂಗಪ್ಪ ಪಾಟೀಲ ಹಾಗೂ ಅವನ ಸಂಬಂಧಿಗಳು ಸೇರಿಕೊಂಡು  ನೀಲವ್ವ ಪಾಟೀಲ, ಸೊಸೆ ಸುನಂದಾ, ಮಗಳಾದ ಪಾರವ್ವ ಹಾಗೂ ಮೊಮ್ಮಕ್ಕಳಾದ ವಿಜಯ 3 ಹೆಣ್ಣು ಮಕ್ಕಳ ಮೇಲೆ ಅಮಾನುಷ್ಯವಾಗಿ ಬಡಿದು ಜೀವ ಬೆದರಿಕೆ ಹಾಕಿ ಸ್ವತ ತಾವೇ ಮುಂದು ಹೋಗಿ ಸ್ಥಳೀಯ ಪೋಲಿಸ್ ಠಾಣೆಗೆ ದೂರು ದಾಖಲಿಸಿದ್ದಾರೆ.ನೀಲವ್ವ ಹಾಗೂ ಕುಟುಂಬದವರು ತಿವ್ರವಾಗಿ ಗಾಯಗೊಂಡಿದ್ದರಿಂದ ಗೋಕಾಕ ಪಟಗುಂದಿ ಆಸ್ಪತ್ರೆಗೆ ದಾಖಲಾಗಿದ್ದರು.

 

loading...

LEAVE A REPLY

Please enter your comment!
Please enter your name here