ಕ್ಯಾನ್ಸರ್ ಇದೆ ಹಾರ್ಟಅಟ್ಯಾಕ್ ಇಲ್ಲ

0
21
loading...

ಬಾನುವಾರ ಮೈಸೂರಿನಲ್ಲಿ  ಮಾತನಾಡಿದ  ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ  ಅವರು  ವಿರೋಧಿ ಪಕ್ಷದವರು  ನಮ್ಮ ಸರಕಾರಕ್ಕೆ ಹಾರ್ಟ ಅಟ್ಯಾಕ್ ಆಗುತ್ತದೆ ಈ ಸರಕಾರ ಉರುಳಿ ಹೋಗುತ್ತದೆ ಎಂದು ಕಾಯುತ್ತಾ ಕುಳಿತಿದ್ದಾರೆ ಆದರೆ ನಮ್ಮ ಸರಕಾರಕ್ಕೆ ಹಾರ್ಟ ಅಟ್ಯಾಕ್ ಆಗುವುದಿಲ್ಲ ಆದರೆ ಸ್ವಲ್ಪ ಪ್ರಮಾಣದಲ್ಲಿ ಕ್ಯಾನ್ಸರ್ ಇದೆ. ನಾವು ಕೆಮ್ಮುತ್ತಲೇ ನಮ್ಮ ಅಧಿಕಾರದ ಅವಧಿಯನ್ನು ಪೂರ್ಣ ಗೊಳಿಸುತ್ತದೆ ಎಂದು ಹಾಸ್ಯಭರಿತವಾಗಿ  ಹೇಳುವ ಮೂಲಕ ತಮ್ಮ ವಿರೋಧಿಗಳಿಗೆ  ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ದವರು ನಮ್ಮ ಸರಕಾರ ಬೀಳುತ್ತದೆ. ಈ ಸರಕಾರಕ್ಕೆ ಹಾರ್ಟ ಅಟ್ಯಾಕ್ ಆಗುತ್ತದೆ. ಸರಕಾರ ಬಿದ್ದು ಹೋಗಿ ಮಧ್ಯಂತರ ಚುನಾವಣೆ ಬರುತ್ತದೆ. ಎಂದು ಕಾಯುತ್ತಾ ಕುಳಿತಿದ್ದಾರೆ.   ಆದರೆ ನಮಗೆ ಹಾರ್ಟ ಅಟ್ಯಾಕ ಆಗುವುದಿಲ್ಲ ನಮ್ಮ ಸರಕಾರ  ಬೀಳುವುದಿಲ್ಲ ಈ ಸರಕಾರಕ್ಕೆ ಒಂದು ವರ್ಷದ ಅವಧಿ ಇದೆ.  ಆ ಅವಧಿಯಲ್ಲಿ ಕೆಮ್ಮುತ್ತಾ ಕೆಮ್ಮುತ್ತಾ ಪೂರ್ಣಗೊಳಿಸುತ್ತದೆ ಎಂದು ಹೇಳಿದ್ದಾರೆ.

ಅವರ ಈ ಮಾತನ್ನು ಕೇಳಿದಾಗ ಅವರು ಪಕ್ಷದಲ್ಲಿ ಆಂತರಿಕ ಕಚ್ಚಾಟ ಇರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.  ಕಚ್ಚಾಟ ಇದ್ದರೂ ಸರಕಾರದ ಭದ್ರತೆಗೆ ಯಾವುದೇ ಅಪಾಯ ಇಲ್ಲ. ನಾವು ಕಚ್ಚಾಡುತ್ತಲೇ ನಮ್ಮ ಅವಧಿಯನ್ನು ಪೂರ್ಣಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.  ಇದರಿಂದ ಕಚ್ಚಾಟ ಇರುವುದನ್ನು  ಅವರು ಒಪ್ಪಿಕೊಂಡಿದ್ದರೂ ಆ ಕಚ್ಚಾಟ ದಿಂದ  ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ಎಂಬ ಅಭಯ ನೀಡುವ ಕಾರ್ಯವನ್ನು ಮಾಡಿದ್ದಾರೆ.

ವರಿಷ್ಠರು ಪ್ರವೇಶದಿಂದಾಗಿ ರಾಜ್ಯ ಭಾಜಪದಲ್ಲಿ ತಾತ್ಕಾಲಿಕವಾಗಿ ಕದನಕ್ಕೆ ವಿರಾಮ ಬಿದ್ದಿದೆ. ವಿಧಾನ ಪರಿಷತ್ ಚುನಾವಣೆ ಮುಗಿಯುವವರೆಗೆ ಈ ಕದನ ವಿರಾಮ ಜಾರಿಯಲ್ಲಿ ಇರುವುದು ಈಗ ಸ್ಪಷ್ವಾಗಿ ಗೋಚರಿಸತೊಡಗಿದೆ.  ಜೊತೆಗೆ ಯಡಿಯೂರಪ್ಪನವರ ಮೊಮ್ಮಗಳ ಮದುವೆಗೆ ವರಿಷ್ಠರು ಬಂದು ಹೋದ ನಂತರ ಯಡಿಯೂರಪ್ಪ ಬಹಿರಂಗವಾಗಿ ಯಾವುದೇ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದಿಲ್ಲ ಜೊತೆಗೆ  ಬೆಂಬಲಿಗರ ಸಭೆಯನ್ನು ನಡೆಸಿರುವುದಿಲ್ಲ.  ಹೀಗಾಗಿ  ನಾವು  ಕೆಮ್ಮುತ್ತಾ ಕೆಮ್ಮುತ್ತಾ ಅಧಿಕಾರದ ಅವಧಿಯನ್ನು  ಪೂರ್ಣ ಮಾಡುತ್ಥೇವೆ. ಎಂಬ ಆತ್ಮ ವಿಶ್ವಾಸದ ಮಾತುಗಳನ್ನು  ಕೆ.ಎಸ್. ಈಶ್ವರಪ್ಪ ಆಗಿದ್ದಾರೆ. ಈಶ್ವರಪ್ಪನವರು ವಿಧಾನ ಪರಿಷತ್ತಿನ ಚುನಾವಣೆ ಪ್ರಚಾರ ಕಾರ್ಯದಲ್ಲಿ  ತೊಡಗಿಕೊಂಡಿದ್ದಾರೆ.  ಮುಖ್ಯ ಮಂತ್ರಿ  ಸದಾನಂದಗೌಡರು ಆಡಳಿತದಲ್ಲಿ ಸಭೆ ಸಮಾರಂಭಗಳಲ್ಲಿ  ಪಾಲ್ಗೌಳ್ಳುತ್ತಾ  ಕಾಲ ಕಳೆಯುತ್ತಿದ್ದಾರೆ. ಭಾಜಪದಲ್ಲಿ ಈಗ ಆಂತರಿಕ ಕಚ್ಚಾಟಕ್ಕೆ ಬ್ರೇಕ್ ಬಿದ್ದಿರುವ ಸಮಯದಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಆರಂಭವಾಗಿದೆ. ಆದರೆ ರಾಹುಲ್ ಗಾಂಧಿ ರಾಜ್ಯಕ್ಕೆ ಬೇಟ್ಟಿ ನೀಡಿದ ಸಂದರ್ಭದಲ್ಲಿ ಆಂತರಿಕ ಕಚ್ಚಾಟದಲ್ಲಿ ತೊಡಗಿದರೆ ಅಂತವರನ್ನು ಪಕ್ಷದಿಂದ ಹೊರಗೆ ದಬ್ಬಭಭೇಕಾಗುತ್ತದೆ ಎಂಬ ನೇರವಾದ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಜೊತೆಗೆ ಮುನಿಷಿಕೊಂಡಿದ್ದ ಸಿದ್ದರಾಮಯ್ಯನವರನ್ನು ಸಮಾಧಾನ ಪಡಿಸುವ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೆ ಸಿದ್ದರಾಮಯ್ಯನವರು ಸೋಮವಾರ ದೆಹಲಿಗೆ ತೆರಳಿದ್ದು ಅಲ್ಲಿ ವರಿಷ್ಠರೊಂದಿಗೆ ಸಮಾಲೋಚನೆ  ನಡೆಸುವ ಸಾಧ್ಯತೆ ಇದೆ. ಮುನಿಸಿಕೊಂಡಿದ್ದ ಸಿದ್ದರಾಮಯ್ಯ ಈಗ ಕೂಲ್ ಕೂಲ್ ಆಗಿದ್ದಾರೆ. ಜೆಡಿಎಸ್ ಪಕ್ಷದಲ್ಲಿಯೂ ಬಿರುಕು ಕಾಣಿಸಿಕೊಂಡಿದ್ದು ತಮಗೆ ಟಿಕೇಟ ನೀಡಲಿಲ್ಲ ಎಂಬ ಕಾರಣಕ್ಕಾಗಿ ಅಜೀಮ್ ಅವರು ಕೋಪಗೊಂಡಿದ್ದಾರೆ. ಶಾಸಕಾಂಗ ಕಾರ್ಯದರ್ಶಿಯ  ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು  ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಿಲ್ಲ ಒಂದು ರೀತಿಯ ತೊಂದರೆಗಳು ಉಂಟಾಗಿವೆ.  ಆದರೆ ರಾಹುಲ ಗಾಂಧಿ ಮಧ್ಯ ಪ್ರವೇಶದಿಂದ ಸಿದ್ದರಾಮಯ್ಯನವರ ವಿಸದ ಪ್ರಕರಣ ಸುಖಾಂತ್ಯಗೊಂಡಂತೆ ಆಗಿದೆ.

ವಿಧಾನ ಪರಿಷತ್ತಿನ ಚುನಾವಣೆ  ಮುಗಿದ ನಂತರ  ಸಂಪುಟ ವಿಸ್ತರಣೆ  ಹಾಗೂ ನಿಗಮ ಬಂಡಾಯಗಳ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದು ಈಶ್ವರಪ್ಪ  ಹೇಳಿದ್ದಾರೆ.  ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ  ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮಮಂಡಳಿಗಳ ಅಧ್ಯಕ್ಷ ಸ್ಥಾನದ ನೇಮಕಾತಿ ನಡೆಯುವ ಸಂದರ್ಭದಲ್ಲಿ ಯಾವ ರೀತಿಯ  ಪರಿಸ್ಥಿತಿ ಭಾರತೀಯ  ಜನತಾ ಪಕ್ಷದಲ್ಲಿ ಉಂಟಾಗುತ್ತದೆ.  ಎಂಬುದನ್ನು ಈಗಲೇ ಹೇಳಲು ಸಾಧ್ಯವಾಗುವುದಿಲ್ಲ ಆದರೆ ವಿಧಾನ ಪರಿಷತ್ತಿನ ಆರು ಆಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅನುಸರಿಸಿದ ಶೇಕಡಾ 50-50 ತತ್ವವನ್ನು ಸಂಪುಟ ವಿಸ್ತರಣೆಯ ಹಾಗೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನದ ನೆೇಮಕಾತಿ  ಸಂದರ್ಭದಲ್ಲಿ               ಉಪಯೋಗಿ ಸಿದರೆ ಈ ಎರಡೂ ಕಾರ್ಯಗಳು ಸುಗಮವಾಗಿ  ನಡೆಯುವ ಸಾಧ್ಯತೆ ಇದೆ. ಆದರೆ ಇದು ಎಷ್ಟರ ಮಟ್ಟಿಗೆ  ನಿಜವಾಗುತ್ತದೆ. ಎಂಬುದನ್ನು ಕಾಯ್ದು ನೋಡಬೇಕಾಗಿದೆ.  ವರಿಷ್ಠರು ಇದೇ ತತ್ವದ ಆಧಾರದ ಮೇಲೆ ಸಂಪುಟ ವಿಸ್ತರಣೆ ಹಾಗೂ ನಿಗಮ  ಮಂಡಳಿಗಳ ಅಧ್ಯಕ್ಷರು ನೇಮಕಾತಿಯನ್ನು ಮಾಡಿಕೊಳ್ಳಿ ಎಂದರೆ ಅದನ್ನು ಉಭಯ ಬಣದವರು ಒಪ್ಪಿಕೊಂಡರೆ ಯಾವುದೇ ತೊಂದರೆ ಇಲ್ಲದೆ ಈ ಎರಡೂ ಕಾರ್ಯಗಳನ್ನು ಪೂರ್ಣಗೊಳಿಸಿ ಸರಕಾರವನ್ನು ಮುಂದುವರೆಸಿಕೊಂಡು ಬರುವುದಕ್ಕೆ ಸಾಧ್ಯವಾಗುತ್ತದೆ.  ಆ ರೀತಿ ಮಾಡಿದರೆ ಮಾತ್ರ ಈಗ ಈಶ್ವರಪ್ಪ  ಹೇಳಿದಂತೆ  ಕೆಮ್ಮುತ್ತಾ ಕೆಮ್ಮುತ್ತಾ ಸರಕಾರದ ಅವಧಿಯನ್ನು ಪೂರ್ಣಗೊಳಿಸುವದಕ್ಕೆ ಸಾಧ್ಯವಾಗುತ್ತದೆ. ಇದೇ ಅರ್ಥದಲ್ಲಿ ಈ ಮಾತನ್ನು ಈಶ್ವರಪ್ಪನವರು ಹೇಳಿರುವ ಸಾಧ್ಯತೆ ಇರುವುದನ್ನು  ನಾವು ಗಮನಿಸಬೇಕಾಗಿದೆ.

                ಒಟ್ಟಿನಲ್ಲಿ ಸಂಪುಟ ವಿಸ್ತರಣೆ ಹಾಗೂ ನಿಗಮ ಮಡಳಿಗಳ ಅಧ್ಯಕ್ಷರ ನೆೇಮಕಾತಿ ನಡೆದ ನಂತರವೇ ಈ ಸರಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆಯೇ ಅಥವಾ ಇಲ್ಲವೆ ಎಂಬುದನ್ನು ಖಚಿತವಾಗಿ ಹೇಳುವುದಕ್ಕೆ ಸಾಧ್ಯವಾಗುತ್ತದೆ. ಈ ಎರಡೂ ಕಾರ್ಯಗಳು ಮುಗಿಯುವ ವರೆಗೆ ಖಚಿತವಾಗಿ ಏನನ್ನೂ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬುದನ್ನು  ನಾವು  ಇಲ್ಲಿ ಗಮನಿಸಬೇಕಾದ ಅವಶ್ಯಕತೆ ಇರುವುದನ್ನು ಮನವರಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುವುದನ್ನು ಇಲ್ಲಿ ಕಾಣುವದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾಗಿದೆ.

ಪ್ರಚಲಿತ -ಮಲ್ಲಣ್ಣ

loading...

LEAVE A REPLY

Please enter your comment!
Please enter your name here