ಟ್ಯಾಂಕರ್ ಮೂಲಕ ಐದು ಹಳ್ಳಿಗಳಿಗೆ ಉಚಿತ ಕುಡಿಯುವ ನೀರು ವಿತರಣೆ

0
23
loading...

ಚಿಕ್ಕೌಡಿ:11ಸಿಕೆಡಿ-02: ಪ್ರಸ್ತುತ ಬರಗಾಲದ ಪರಿಸ್ಥಿತಿಂದ ತಾಲೂಕಿನ ನಾಗರಮುನ್ನೌಳ್ಳಿ ಹಾಗೂ ಕರೋಶಿ ಹೋಬಳಿಗಳಲ್ಲಿ ಹಾಗೂ ರಾಯಬಾಗ ತಾಲೂಕಿನ ಕೆಲ ಹಳ್ಳಿಗಳಲ್ಲಿ ಜನಜಾನುವಾರುಗಳು ಪರದಾಡುವ ಪರಿಸ್ಥಿತಿ ಬಂದಿದ್ದರಿಂದ ದೂದಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಹಾಗೂ ಶಿವಶಕ್ತಿ ಸಕ್ಕರೆ ಕಾರ್ಖಾನೆಗಳ ವತಿಂದ ಐದು ಹಳ್ಳಿಗಳ್ಲಿ ಉಚಿತ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀಡಲಾಗುತ್ತಿದೆ.

ದೂದಗಂಗಾ ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ತಾಲೂಕಿನ ಜೈನಾಪೂರ ಗ್ರಾಮದಲ್ಲಿ ಉಚಿತ ನೀರು ಸರಬುರಾಜು ಯೋಜನೆಗೆ ಚಾಲನೆ ನೀಡಿದರು.

ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅಧ್ಯಕ್ಷತೆ ವಹಿಸಿದ್ದರು. ಶಿವಶಕ್ತಿ ಕಾರ್ಖಾನೆ ಅಧ್ಯಕ್ಷ ಅಮೀತ ಪ್ರಭಾಕರ ಕೋರೆ ಪ್ರಸ್ತಾವಿಕವಾಗಿ ಮಾತನಾಡಿ ಪ್ರತಿಯೊಬ್ಬರೂ ನೀರನ್ನು ಹಿತಮಿತವಾಗಿ ಬಳಸಬೇಕೆಂದರು.

ಜಿ.ಪಂ.ಸದಸ್ಯ ಮಹೇಶ ಭಾತೆ, ಸುರೇಶ ಬೆಲ್ಲದ, ದುಂಡಪ್ಪಾ ಬೆಂಡವಾಡೆ, ವಾಸುದೇವ ಕುಲಕರ್ಣಿ, ಶಿವಗೌಡಾ ಪಾಟೀಲ, ಮಾರುತಿ ಘರಬುಡೆ, ರಾಯನಗೌಡಾ ಕೆಳಗಿನಮನಿ ಮುಂತಾದವರು ಉಪಸ್ಥಿತರಿದ್ದರು.

 

 

loading...

LEAVE A REPLY

Please enter your comment!
Please enter your name here