ದೇಶಭಕ್ತ ಸಿಂಧೂರ ಲಕ್ಷ್ಮಣ ಪುತ್ಥಳಿ ಅನಾವರಣ

0
63
loading...

ಹುಬ್ಬಳ್ಳಿ, ಜೂ.19 : ಯುವಜನತೆ ಹಾಗೂ ವಿದ್ಯಾರ್ಥಿಗಳಲ್ಲಿ ರಾಷ್ಟ್ತ್ರಭಕ್ತಿ ಹಾಗೂ ಮಹಾನ್ ನಾಯಕರ ತ್ಯಾಗ ಬಲಿದಾನ ಕುರಿತು ಸ್ಪೂರ್ತಿ ತುಂಬಲು ನೆರವಾಗುವದಕ್ಕಾಗಿ ಮಹಾನಗರದಲ್ಲಿ ರಾಜ್ಯ ಹಾಗೂ ರಾಷ್ಟ್ತ್ರ ನಾಯಕರ ಪ್ರತಿಮೆ ಹಾಗೂ ಜೀವನ ಚರಿತ್ರೆ ಬಿಂಬಿಸುವ ಸಭಾಂಗಣ ಸ್ಥಾಪಿಸುವಂತೆ ನಗರಾಭಿವೃದ್ದಿ ಸಚಿವರಾದ ಸುರೇಶಕುಮಾರ ಸಲಹೆ ಮಾಡಿದರು.

ನಗರದ ಗೋಕುಲ ರಸ್ತೆಯಲ್ಲಿರವ ರಾಮಲಿಂಗೇಶ್ವರ ನಗರ ಕ್ರಾಸ್ ಬಳಿ ಮಹಾನಗರ ಪಾಲಿಕೆ ನಿರ್ಮಿಸಿದ ದೇಶಭಕ್ತ ಕ್ರಾಂತೀವೀರ ಸಿಂಧೂರ ಲಕ್ಷ್ಮಣ ಪುತ್ಥಳಿಯ ಅನಾವರಣ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಲಂಡನ್ದಲ್ಲಿರುವ ಶಿಹಾಲ್ ಆಫ್ ಫೇಮಷಿ ಮಾದರಿಯ ಸಭಾಂಗಣವನ್ನು ಇಲ್ಲಿ ಸ್ಥಾಪಿಸಿ ಅಲ್ಲಿ ಅವರ  ಜೀವನ ಚರಿತ್ರೆ ದಾಖಲಿಸಿದಲ್ಲಿ ಇಂದಿನ ಪೀಳಿಗೆಗೆ ಈ ನಾಯಕರ ದೇಶಪ್ರೇಮ ಹಾಗೂ ಹೋರಾಟದ ಅರಿವು ದೊರೆಯುವದಲ್ಲದೇ ಇಂದಿಗೂ ಸಮಾಜದಲ್ಲಿ ಕಂಡು ಬರುವ ವಿಕಾರಗಳ ವಿರುದ್ದ ಹೋರಾಡಲು ಪ್ರೇರಣೆ ದೊರೆಯುವದೆಂದು ಅವರು ಆಶಿಸಿದರು. ಸಿಂಧೂರ ಲಕ್ಷ್ಮಣ ಅವರ ತತ್ಪಾದರ್ಶ ಗಳನ್ನು ಇಂದಿನ ಜನಾಂಗ ಅರಿತುಕೊಂಡು ಪಾಲಿಸುವಂತೆ ಸಚಿವರು ಕರೆ ಇತ್ತರು.

ಸಿಂಧೂರ ಲಕ್ಷ್ಮಣ ಪ್ರತಿಮೆ ಅನಾವರಣಗೊಳಿಸಿದ ರಾಜ್ಯದ ಗ್ರಾಮೀಣ ಅಭಿವೃದ್ದಿ ಹಾಗೂ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಮಾತನಾಡಿ, ಬಹುದಿನದ ಈ ಪುತ್ಥಳಿ ಅನಾವರಣ ಬೇಡಿಕೆ ಈಡೇರಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಸ್ವಾತಂತ್ರ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಸಿಂಧೂರ ಲಕ್ಷ್ಮಣ ಅವರ ಜೀವನ ಜನಮಾನಸದಲ್ಲಿ ಸ್ಪೂರ್ತಿಯ ನೆಲೆಯಾಗಿವೆ ಎಂದರು. ಯಾವುದೇ ರಾಷ್ಟ್ತ್ರನಾಯಕರನ್ನು ಜಾತಿಗೆ ಸೀಮಿತಗೊಳಿಸದೇ ಅವರ ವ್ಯಕ್ತಿತ್ವವನ್ನು ಗೌರವಿಸಲು ಅವರು  ಕರೆ ನೀಡಿದರು.

ಸಂಸದ ಪ್ರಲ್ಹಾದ ಜೋಶಿ ಮಾತನಾಡಿ, ಉತ್ತರ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ದಾಖಲಾಗಿಲ್ಲ. ಈ ಕುರಿತು ಶಾಲಾ ಮಕ್ಕಳಿಗೆ ಅವರ ಜೀವನ ಚರಿತ್ರೆ-ಹೋರಾಟ ತಿಳಿಸುವ ಕೆಲಸವಾಗಬೇಕೆಂದರು.

ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಸಿಂದೂರ ಲಕ್ಷ್ಮಣ ಅವರ ಜನ್ಮದಿನ ಹಾಗೂ ಪುಣ್ಯತಿಥಿಗಳನ್ನು ಮಹಾನಗರ ಪಾಲಿಕೆ ಆಚರಿಸುವಂತೆ ಅಗ್ರಹಿಸಿದರಲ್ಲದೇ. ಇಲ್ಲಿ ಉದ್ಯಾನವನ ಅಭಿವೃದ್ದಿಗೊಳಿಸಲು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ ಮಹಾಪೌರ ಡಾ||ಪಾಂಡುರಂಗ ಪಾಟೀಲ ಅವರು ಮಾತನಾಡಿ, ಈ ಪುತ್ಥಳಿಯನ್ನು ಅಂದವಾಗಿ ಇಡಲು ಪಾಲಿಕೆಯೊಂದಿಗೆ ಈ ಪರಿಸರದ ಜನರು ಸ್ಪಂದಿಸಲು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯರು ಶ್ರೀನಿವಾಸ ಮಾನೆ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಮಹೇಶ ಟೆಂಗಿನಕಾಯಿ, ಉಪ ಮಹಾಪೌರರಾದ ಭಾರತಿ ಪಾಟೀಲ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರು ಲಿಂಗರಾಜ ಪಾಟೀಲ, ಜನತಾದಳ ಧುರೀಣರಾದ ಸರೋಜಾ ಬ. ಪಾಟೀಲ, ಪಾಲಿಕೆ ಸದಸ್ಯರಾದ ಸಂತೋಷ ಹಿರೇಕೆರೂರ ಸೇರಿದಂತೆ ಅನೇಕ ಪಾಲಿಕೆಯ ವಿವಿಧ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದರು.

loading...

LEAVE A REPLY

Please enter your comment!
Please enter your name here