ಹೆಸ್ಕಾಂ ಕಿರುಕುಳ : ಆರೋಪ

0
17
loading...

ಚಿಕ್ಕೌಡಿ 6 : ತಾಲೂಕಿನ ನಿಪ್ಪಾಣಿ ಪಟ್ಟಣದ ಹೊರವಲಯದಲ್ಲಿರುವ ಹಿಂದುಳಿದ ವರ್ಗದವರ ಪಾವರ್ ಲೂಮ್ ಕೋ-ಆಫ್ ಸೊಸೈಟಿಯಲ್ಲಿನ ವಿಶೇಷ ಘಟಕದ ಶೆಡ್ಗೆ ಹೆಸ್ಕಾಂದವರು ದುರುದ್ದೇಶಪೂರ್ವಕವಾಗಿ ವಿದ್ಯುತ್ನು ಕಡಿತಗೊಳಿಸಿ ಪದೆ ಪದೆ ಕಿರುಕುಳ ನೀಡುತ್ತಿದ್ದಾರೆ ಎಂದು ಜಿಲ್ಲಾ ದಲಿತ ಅನ್ಯಾಯ ನಿವಾರಣಾ ಸಮೀತಿ ಅಧ್ಯಕ್ಷ ಅಶೋಕಕುಮಾರ ಅಸೂದೆ ಆರೋಪಿಸಿದರು

ಅವರು ಬುಧವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ದಲಿತರ ಹೆಸರಿನಿಂದ ಮಂಜೂರಾದ ಈ ಯೋಜನೆಯನ್ನು ಕೆಲ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಅನಕ್ಷರಸ್ಥ ದಲಿತರನ್ನು ಹಾದಿ ತಪ್ಪಿಸಿ ಕಳೆದ 15 ವರ್ಷಗಳಿಂದ ನಿಪ್ಪಾಣಿ ಪಾವರ್ ಲೂಮ್ ಘಟಕವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು.

ನಿರಂತರ ಹೋರಾಟದಿಮದ ಈಗ ದಲಿತ ಫಲಾನುಭವಿಗಳೇ ಈ ಘಟಕವನ್ನು ನಡೆಸುತ್ತಿದ್ದಾರೆ. ಆದರೆ ಈಗಲೂ ಕಾಂಗ್ರೇಸೆತರ ರಾಜಕೀಯ ದುರೀಣರು ಇದಕ್ಕೆ ಕಿರುಕುಳ ನೀಡುತ್ತಿದ್ದು, ಹೆಸ್ಕಾಂ ಮೂಲಕ ತಮ್ಮ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನು ಸಮಸ್ತ ದಲಿತ ಬಾಂಧವರು ಖಂಡಿಸುತ್ತಿದ್ದು, ಪದೆ ಪದೆ ನೀಡುತ್ತಿರುವ ಕಿರುಕಳವನ್ನು ತಕ್ಷಣವೇ ನಿಲ್ಲಿಸಬೇಕು ಇಲ್ಲದಿದ್ದರೆ ಹೆಸ್ಕಾಂ ಕಛೇರಿ ಎದುರು ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳ ಮೂಲಕ ಧರಣಿ ಸತ್ಯಾಗ್ರಹ ನಡೆಸಲಾಗುವದೆಂದು ಅಸೂದೆ ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here