ಅಖಿಲ ಭಾರತೀಯ ಕೊಂಕಣಿ ಪರಿಷತ್ನ 74ನೇ ಸಂಸ್ಥಾಪನಾ ದಿನ

0
15
loading...

ಕೊಂಕಣಿಗರ ಕೊಡುಗೆ ಅಮೋಘ: ಸಂಸದ ಅಂಗಡಿ

ಬೆಳಗಾವಿ 8- ದೇಶದ ಪ್ರಗತಿಗೆ ಕೊಂಕಣಿ ಸಮುದಾಯದ ಕೊಡುಗೆ ಅಮೋಘ. ತಮ್ಮದೇ ಆದ ಭಾಷೆ, ಸಾಹಿತ್ಯ, ಸಂಸ್ಕ್ಕತಿಯ ಶ್ರೀಮಂತಿಕೆ ಕೊಂಕಣಿಯದ್ದಾಗಿದೆ ಎಂದು ಸಂಸದ ಸುರೇಶ ಅಂಗಡಿ ಇಂದಿಲ್ಲಿ ನುಡಿದರು.

ಅವರು ರವಿವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಅಖಿಲ ಭಾರತೀಯ ಕೊಂಕಣಿ ಪರಿಷತ್ನ 74ನೇ ಸಂಸ್ಥಾಪನಾ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೊಂಕಣಿ ಸಮುದಾಯ ರಾಷಾ್ತ್ರಭಿವೃದ್ದಿಗೆ ವಿವಿಧ ಮುಖಗಳಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಈ ಸಮುದಾಯದ ಸಾಕಷ್ಟು ಪ್ರತಿಭೆಗಳು ರಾಷ್ಟ್ತ್ರ ಪರಂಪರೆಯನ್ನು ಇಮ್ಮಡಿಸಿವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಕೊಂಕಣಿ ಪ್ರತಿಭೆಗಳನ್ನು ಪ್ರಥಮವಾಗಿ ಗುರುತಿಸಿದ ಶ್ರೇಷ್ಠರೆನಿಸಿದ್ದಾರೆ. ಬೆಳಗಾವಿ ಬಂದ ಸಂದರ್ಭದಲ್ಲಿ ಗಡಿ ಭಾಗದ ಈ ನೆಲವನ್ನು ಕೋಕಂ ಎಂದು ಸಂಭೋದಿಸುವ ಮೂಲಕ ತಮ್ಮದೇ ಆದ ನಾವಿಣ್ಯತೆಯನ್ನು ಪ್ರಕಟಿಸಿದರು. ಕೊಂಕಣ, ಕನ್ನಡ, ಮರಾಠಿ ಈ ಮೂರು ಭಾಷೆಗಳನ್ನು ವಾಜಪೇಯಿಯವರು ಕೋಕಂ ಎನ್ನುವ ಭಾಷಾ ಸಾಮರಸ್ಯದ ಸಂಕೇತವಾಗಿ ಸಂಭೋದಿಸಿರುವುದರಲ್ಲಿ ವಿಶೇಷ ಅರ್ಥವಿದೆ ಎಂದರು.

ಭಾರತ ಸರಕಾರದಿಂದ ಕೊಂಕಣಿ ಸಮುದಾಯ ಹಾಗೂ ಭಾಷೆ ಸಂಸ್ಕ್ಕತಿಯ ಬೆಳವಣಿಗೆಗೆ ಬೇಕಾದ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಸಂಸದ ಸುರೇಶ ಅಂಗಡಿ ಗಡಿ ಭಾಗದ ಬೆಳಗಾವಿಯಲ್ಲಿ ಹಿರಿಯರಾದ ವಿ.ವಿ.ಶೆಣೈ ಅವರು ಕೊಂಕಣಿ ಪರಿಷತ್ನ 74ನೇ ಸಂಸ್ಥಾಪನೆ ದಿನ ಆಯೋಜಿಸಿರುವುದು ಪ್ರಶಂಸನಾರ್ಹ ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೊ.ಎಚ್.ಬಿ.ವಾಲೀಕಾರ ಸಾಧಕ ಶಾ.ಮಂ.ಕೃಷ್ಣರಾಯ, ಹಿರಿಯ ಪತ್ರಕರ್ತ ಎಂ.ಬಿ.ದೇಸಾಯಿ, ಆಯುಕ್ತೆ, ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ಮುರಳಿಧರ ಪ್ರಭು ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಅರವಿಂದ ಭಾಟಿಕರ ವಹಿಸಿದ್ದರು. ನಂತರದಲ್ಲಿ ಭಾಷಾ ಬಾಂಧವ್ಯ ಕುರಿತ ಹಾಗೂ ಕವಿಗೋಷ್ಠಿ ನಡೆದವು. ಪದಾಧಿಕಾರಿಗಳಾದ ವಿ.ವಿ.ಶೆಣೈ, ಗೋಕುಲದಾಸ ಪ್ರಭು, ಸುನೀತಾ ಕಾಣೇಕರ, ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here