ಇಂದಿನಿಂದ ಸಿಇಟಿ ಪರೀಕ್ಷೆ

0
14
loading...

ಬೆಳಗಾವಿ 14: ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರಿಕೃತ ದಾಖಲಾತಿ ಘಟಕ ಬೆಂಗಳೂರು ವತಿಯಿಂದ ಇದೇ ಜುಲೈ 15 ರಿಂದ 18 ರವರೆಗೆ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರುಗಳ ಹುದ್ದೆಗಳ ನೇಮಕಾತಿಗಾಗಿ ನಡೆಯಲಿರುವ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಗಳು ಸುವ್ಯವಸ್ಥಿತವಾಗಿ ಹಾಗೂ ಶಾಂತಿಯುತವಾಗಿ ನಡೆಸಲು ಹಾಗೂ  ಅಕ್ರಮ ಚಟುವಟಿಕೆ ತಡೆಯಲು ಅನುಕೂಲವಾಗುವಂತೆ ಬೆಳಗಾವಿ ನಗರದಲ್ಲಿರುವ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು 144 ನೇ ಕಲಮಿನನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಬೆಳಗಾವಿ ತಾಲೂಕಾ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಪ್ರಿತಮ್ ಬಿ. ನಸಪಾಪುರೆ ಅವರು ಆದೇಶ ಹೊರಡಿಸಿದ್ದಾರೆ.

ಈ ನಿಷೇಧಾಜ್ಞೆಯು ದಿ.15 ರಿಂದ 18 ರವರೆಗೆ ಜಾರಿಯಿದ್ದು, ಪರೀಕ್ಷಾ ಕೇಂದ್ರಗಳ 200 ಮೀಟರ ಸುತ್ತಮುತ್ತ ಪ್ರದೇಶದಲ್ಲಿ ಯಾರು ಗುಂಪು ಗುಂಪಾಗಿ ಅಥವಾ 5 ಜನಕ್ಕಿಂತಾ ಹೆಚ್ಚು ಜನರು ಸೇರಬಾರದು ಮತ್ತು ಯಾವುದೇ ಸಭೆಗಳನ್ನು ನಡೆಸಬಾರದು. ಈ ಸ್ಥಳದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಧ್ವನಿ ವರ್ಧಕಗಳನ್ನು ಹಚ್ಚಬಾರದು, ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರ ಸಮೀಪದಲ್ಲಿರುವ ಎಲ್ಲಾ ಝೆರಾಕ್ಸ್ ಅಂಗಡಿಗಳನ್ನು ತೆರೆಯಬಾರದು. ಯಾವುದೇ ತರಹದ ಆಯುಧಗಳನ್ನು ಹೊಂದಿರುವುದನ್ನು ನಿಷೇಧಿಸಲಾಗಿದೆ. ಈ ಆದೇಶವು ಮದುವೆ, ಮೆರವಣಿಗೆ ಹಾಗೂ ಶವಸಂಸ್ಕಾರಕ್ಕೆ ಅನ್ವಯಿಸುವುದಿಲ್ಲ ಎಂದು ಬೆಳಗಾವಿ ತಾಲೂಕಾ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

 

loading...

LEAVE A REPLY

Please enter your comment!
Please enter your name here