ಇದ್ದೂ ಇಲ್ಲದಂತಾದ ಕುಡಚಿ ಪಟ್ಟಣದ ನೆಮ್ಮದಿ ಕೇಂದ್ರ! ಬಿ ಜೆ ಪಿ ನಾಯಕರ ಕಿತ್ತಾಟ ಪಹನಿ ಪತ್ರಕ್ಕಾಗಿ ರೈತರ ಪರದಾಟ: ಅಜೀತ ಸಣ್ಣಕ್ಕಿ

0
67
loading...

ಕುಡಚಿ 9:  ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿರುವ ನೆಮ್ಮದಿ ಕೇಂದ್ರ ಇದ್ದು ಇಲ್ಲದಂತೆ, ಯಾಕೆಂದರೆ ರೈತರಿಗೆ ಪಹನಿ ಪತ್ರಗಳು ಸರಿಯಾದ ಸಮಯಕ್ಕೆ ಸಿಗದೇ ಪರದಾಡುವಂತಾಗಿದೆ. ಅದಲ್ಲದೇ ಶಾಲಾ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಬೇಕಾಗುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳು ಸರಿಯಾದ ಸಮಯಕ್ಕೆ ಸಿಗದೇ ವಿದ್ಯಾರ್ಥಿಗಳು ಪರದಾಡುವಂತಾ ಗಿದೆ ಎಂದು ಜೆಡಿಎಸ್ ಬ್ಲಾಕ್ ಕಮೀಟಿ ಅಧ್ಯಕ್ಷ ನಂದೇಶ್ವರ ಚಿಟ್ಟಿ ಆರೋಪಿಸಿದ್ದಾರೆ.

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ನೆಮ್ಮದಿ ಕೇಂದ್ರದ ಮುಂದೆ ರೈತರಿಗೆ ಸರಿಯಾಗಿ ಪಹನಿ ಪತ್ರ ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ದಾಖಲಾತಿಗಳನ್ನು ಸರಿಯಾಗಿ ವಿತರಿಸುವಂತೆ ಒತ್ತಾಯಿಸಿ  ಜೆ.ಡಿ.ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಉಪ ತಹಸಿಲ್ದಾರ ಬಿ.ಬಿ.ಕಂಬಾರ ಅವರಿಗೆ ಮನವಿ ಸಲ್ಲಿಸಿದರು.

ಕುಡಚಿ ಪಟ್ಟಣದಲ್ಲಿ ಸನ್ 2005-06 ರಲ್ಲಿ ಕೃಷ್ಣಾ ನದಿಗೆ ಮಹಾಪೂರ ಬಂದು ಸುತ್ತ ಮುತ್ತಲಿನ ರೈತರು ತೊಂದರೆಗೆ ಸಿಲುಕಿದಾಗ ಫಲಾನುಭವಿಗಳಿಗೆ  ಜಮಖಂಡಿ ರಸ್ತೆಗೆ ಹೊಂದಿಕೊಂಡಂತೆ ಸರಕಾರವು ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗಿತ್ತು ಆದರೆ ಈವರೆಗೂ ಯಾವುದೇ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಿರುವುದಿಲ್ಲ. ಕೂಡಲೇ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಬೇಕಲ್ಲದೇ  ಕುಡಚಿ ಪಟ್ಟಣದ ನೆಮ್ಮದಿ ಕೇಂದ್ರದತ್ತ ಅಧಿಕಾರಿಗಳು ಕಣ್ತೆರೆದು ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಬಗೆಹರಿಸಬೇಕೆಂದು ನಂದೇಶ್ವರ ಚಿಟ್ಟಿ ಒತ್ತಾಯಿಸಿದರು.

ಜೆ.ಡಿ.ಎಸ್ ಮುಖಂಡ ಶಾಂತಾರಾಮ ಸಣ್ಣಕ್ಕಿ ಮಾತನಾಡಿ ಕುಡಚಿ ಪಟ್ಟಣದಲ್ಲಿರುವ ನೆಮ್ಮದಿ ಕೇಂದ್ರದಿಂದ ರೈತರ ಹಾಗೂ ವಿದ್ಯಾರ್ಥಿಗಳ ನೆಮ್ಮದಿಯೇ ಹಾಳಾಗಿದ್ದು, ಈ ನೆಮ್ಮದಿ ಕೇಂದ್ರದಲ್ಲಿ ಒಂದು ದಿನ ಪ್ರಿಂಟರ ಹಾಳಾದರೆ ಒಂದು ದಿನ ಇಂಟರ್ನೇಟ್ ಸೌಲಭ್ಯ ಕಡಿತ ಗೊಂಡಿರುತ್ತದೆ. ಇದೆಲ್ಲಾ ಸರಿಯಾದರೆ ಇಲ್ಲಿ ಸಿಬ್ಬಂದಿಯೇ ಇರುವುದಿಲ್ಲಾ.  ಆದ್ದರಿಂದ ವಿದ್ಯಾರ್ಥಿಗಳಿಗೆ ಸರಕಾರ ನೀಡುವ ವಿದ್ಯಾರ್ಥಿ ವೇತನಕಿಂತ ಹೆಚ್ಚಿಗೆ ಹಣ ಖರ್ಚುಮಾಡಿದರು ಮೂಲ ದಾಖಲಾತಿಗಳನ್ನು ಪಡೆಯುವುದು ಕಷ್ಟವಾಗಿದೆ. ರೈತರಂತು ಪಹನಿ ಪತ್ರಕ್ಕಾಗಿ  ನೆಮ್ಮದಿ ಕೇಂದ್ರಕ್ಕೆ ಅಲೆದಾಡಿ ಅಲೆದಾಡಿ ಪರದಾಡುವಂತಾಗಿದೆ ಎಂದು ಶಾಂತಾರಾಮ ಸಣ್ಣಕ್ಕಿ ಆರೋಪಮಾಡಿದ್ದಾರೆ.

ಇನ್ಮುಂದಾರು ಸಂಬಂಧ ಪಟ್ಟ ಅಧಿಕಾರಿಗಳು ನೆಮ್ಮದಿ ಕೇಂದ್ರದತ್ತ ಕಣ್ತೆರೆದು ರೈತರ ಹಾಗೂ ವಿದ್ಯಾರ್ಥಿಗಳ ತೊಂದರೆಗಳನ್ನು ಬಗೆಹರಿಸಬೇಕೆಂದು ಜೆಡಿಎಸ್ ಕಾರ್ಯಕರ್ತರು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಬ್ಲ್ಯಾಕ್ ಕಮಿಟಿ ಅಧ್ಯಕ್ಷ  ನಂದೇಶ್ವರ ಚಿಟ್ಟಿ, ಜಿಲ್ಲಾ ಉಪಾಧ್ಯಕ್ಷ ಸಲೀಮ ಅಲಾಸೆ, ಜೆಡಿಎಸ್ ಮುಖಂಡರಾದ ಶಾಂತಾರಾಮ ಸಣ್ಣಕ್ಕಿ, ಮಹಮ್ಮದ ಫೀರ್ಜಾದೆ, ಪರುಶುರಾಮ ಶಿಂದೇ, ಭದ್ರುದ್ದಿನ ಘೋರೂ ಫೀರ್ಜಾದೆ, ಕಲ್ಲವ್ವ ನಡುವಿನಕೇರಿ, ನಿಜಾಮ ಚಮನಶೇಖ, ಮೈನುಜಿನ್ನಾಬಡೆ, ರಫೀಕ ಮುಲ್ಲಾ, ಆಶೀಫ್ ಮುಲ್ಲಾ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here