ಏಳರ ಪುಟ್ಟ ಬಾಲೆ ವಿಶ್ವದ ಕಿರಿಯ ಯೋಗ ಶಿಕ್ಷಕಿ

0
11
loading...

ಪ್ರತಿಯೊಂದು ಮಕ್ಕಳಲ್ಲಿ ಪ್ರತಿಬೆ ಅಡಗಿರುತ್ತದೆ ಇನ್ನು ಕೆಲವು ಮಕ್ಕಳಲಂತು ಅಗಾದವಾದ ಪ್ರತಿಭೆಯನ್ನು ಹೊಂದಿರುತ್ತವೆ. ಆದರೆ ಅದನ್ನು ಹೊರತರುವ ಪ್ರಯತ್ನ ನಡೆಯಬೇಕು ಅಂದಾಗ ಮಾತ್ರ ಅದನ್ನು ಗುರುತಿಸಲು ಸಾಧ್ಯವಾಗುತ್ತದೆ ಇಲ್ಲವಾದರೆ ಅದು ಆ ಮಕ್ಕಳ ಬಾಲ್ಯದ ಜೀವನದಲ್ಲಿಯೇ ಕಳೆೆದು ಹೋಗುತ್ತದೆ.ಇನ್ನು ಕೆಲವು ಮಕ್ಕಳು ಯಾರ ಸಹಾಯ ಇಲ್ಲದೆ ಇತರರು ಮಾಡುವಂತಹ ಕಾರ್ಯವನ್ನು ನೋಡಿಕೊಂಡೆ ಕಲಿಯುತ್ತವೆ.ಅಂತಹ ಸಾಲಿನಲ್ಲಿ ಉತ್ತರಪ್ರದೇಶದ ಅಲಹಾಬಾದ್ ನಗರದ ಶೃತಿ ಪಾಂಡೆ ಎಂಬ ಏಳರ ಈ ಬಾಲೆ ಯೋಗಾಬ್ಯಾಸದಲ್ಲಿ ಅಗಾದವಾದ ಪ್ರತಿಭೆಯನ್ನು ಹೊಂದಿರುವ ಜಗತ್ತಿನ ಅತಿ ಕಿರಿಯ ಯೋಗಶಿಕ್ಷಕಿ ಆಗಿದ್ದಾಳೆ.

ಶೃತಿ ಮನೆಯವರು ಯೋಗವನ್ನು ಕಲೆಯಲು ಹರಿಚೇತನ  ರವರ ಹತ್ತಿರ ಹೋಗುತ್ತಿರುವಾಗ ಶೃತಿ ಅವರೊಡನೆ ಹೋಗಲು ಆರಂಬಿಸಿದಳು ಆಗ  ಆ ಪುಟ್ಟ ಬಾಲೆಯ ವಯಸ್ಸು ಕೇವಲ  ನಾಲ್ಕು ವರ್ಷ.ಅಲ್ಲಿಗೆ ಕಲೆಯಲು ಬರುತ್ತಿರುವಂತಹ  ಜನರನ್ನು ನೋಡಿ ಶೃತಿ ಯೋಗವನ್ನು ಕಲಿಯಲು ಪ್ರಾರಂಭಿಸಿದಳು.ಚೂಟಿಯಾದಂತಹ ಆ ಮಗು ಬರುಬರತ್ತಾ ಯೋಗವನ್ನು ಹಿರಿಯರಂತೆ ಮಾಡಲು ಶುರುಮಾಡಿದಾಗ ಶಿಕ್ಷಕರಾದಂತಹ ಹರಿಚೇತನರವರು ಆ ಮಗುವಿನ ಮೇಲೆ ಹೆಚ್ಚಿನ ಆಸಕ್ತಿಯನ್ನು ತೋರಿಸಿ ಯೋಗದ ಅನೇಕ ಆಯಾಮಗಳನ್ನು ಕಲಿಸ ತೊಡಗಿದರು ಇದೆಲ್ಲದರ ಉಪಯೋಗವನ್ನು ಪಡೆಯುತ್ತಾ ಶೃತಿ ಬಹುಬೇಗ ಯೋಗದ ಎಲ್ಲಾ ವಿದಗಳನ್ನು ಕಲೆತು ಕೊಂಡಳು.ಅದರಲ್ಲಿ ಇನ್ನು ಹೆಚ್ಚಿನ ಪರಿಣಿತಿಯನ್ನು ಪಡೆಯತೊಡಗಿದಳು ಅದಕ್ಕೆ ಅವಳ ಮನೆಯವರ ಸಹಾಯ ಮತ್ತು ಸಹಕಾರ ನೀಡುತ್ತಾ ಬಂದಿರುತ್ತಾರೆ.ಒಮ್ಮೆ ಇವರ ಮನೆತನದ ವಿಷಯ ತಿಳಿದುಕೊಂಡಾಗ ಯಾರು ಯೋಗದಲ್ಲಿ ಹೆಸರು ಮಾಡಿದವರಲ್ಲ ಆದರೆ ಶೃತಿಯ ಅಣ್ಣ ಹರ್ಷಕುಮಾರ ಐದು ವರ್ಷ ವಯಸ್ಸಿನಲ್ಲಿರುವಾಗಲೆ ಯೋಗದ ಎಂಬತ್ತನಾಲ್ಕು ಆಯಾಮಗಳನ್ನು ಮಾಡಿತೋರಿಸಿ ಲಿಮ್ಕಾ ದಾಖಲೆ ಮಾಡಿರುತ್ತಾನೆ ಈ ಎರಡು ಪ್ರತಿಭೆಗಳನ್ನು ಪಾಂಡೆ ಮನೆತನ ನೀಡಿರುತ್ತದೆ.              ಅದೆ ರೀತಿ ಯೋಗದಲ್ಲಿ ಸಂಪೋರ್ಣ  ಸಹಕರಿಸಿ ಕಲಿಸಿದಂತಹ ಹರಿಚೇತನ್ ಕುಮಾರ  ಅವರು ಸುಮಾರು 35 ವರ್ಷಗಳ ಹಿಂದೆ  ಸುಬ್ರಹ್ಮಾನಂದ ಸರಸ್ವತಿ ಕೈವಲ್ಯ ಧಾಮ ಎಂಬ ಆಶ್ರಮವನ್ನು  ಸ್ಥಾಪಿಸಿ ಅಲ್ಲಿ ಯೋಗಾಭ್ಯಾಸವನ್ನು  ಹೇಳತೊಡಗಿದರು.ಹೀಗೆ ಕೇಲವು ವರ್ಷಗಳ  ಹಿಂದೆ ಪಾಂಡೆ ದಂಪತಿಗಳು ಯೋಗಕಲೆಯಲು  ಹೋಗುತ್ತಿದ್ದರು ಅವರ ಜೊತೆ ಹೋಗಿ ಕಲೆತ  ಮಗಳೆ ಶೃತಿ ಪಾಂಡೆ ಇಂದು ಶಿವಿಶ್ವದ ಅತಿ ಕಿರಿಯ ಯೋಗ ಶಿಕ್ಷಕಿಷಿ ಎಂದು ಜನೇವರಿ 24,2011 ರಲ್ಲಿ ಘಠಟ ಖಜಛಿಠ ಂಛಿಚಿಜಜಟಥಿ ಸಂಘಟನೆಯು ಬಿರುದು ನೀಡಿ ಗೌರವಿಸಲಾಗಿದೆ. ಇಂದು ಆ ಏಳರ ಪುಟ್ಟ ಬಾಲೆ ಅಲಹಬಾದ್ನಲ್ಲಿರುವ ತನ್ನ ಮನೆಯನ್ನೆ ಯೋಗ ತರಬೇತಿ ಶಾಲೆಯನ್ನಾಗಿ ಮಡಿಕೊಂಡಿದ್ದಾಳೆ.ಪ್ರತಿ ನಿತ್ಯ ಬೆಳಿಗ್ಗೆ 5.30ಕ್ಕೆ ಆರಂಭವಾಗುವ ಯೋಗಶಾಲೆಯಲ್ಲಿ ಅನೇಕ ಹಿರಿಯರು ಬರುತ್ತಾರೆ. ಅನೇಕರಿಗೆ ಕಷ್ಟವಾಗುವಂತಹ ಯೋಗದ ಆಸನಗಳನ್ನು ಅವರಿಗೆ ಅನುಕೊಲ ಆಗುವ ರೀತಿಯಲ್ಲಿ ಶೃತಿ ಕಲಿಸಿಕೊಡುತ್ತಾಳೆ.ಅಲ್ಲಿ ಬರುವ ಹಿರಿಯರು ಶೃತಿಯನ್ನು ಶ್ಲಾಘಿಸುತ್ತಾರೆ.ಇವಳ ಪ್ರತಿಭೆಯನ್ನು ಗುರುತಿಸಿದ ಅನೇಕ ಯೋಗ ಕೆಂದ್ರಗಳು ಸನ್ಮಾಸಿವೆ. ಇವಳ ಒಂದು ಸಾದನೆಯನ್ನು ನೋಡಿದಾಗ ಅನೇಕ ಮಕ್ಕಳಲ್ಲಿಯು ಸಹಜವಾಗಿ ತಾವು ಏನಾದರು ಸಾಧನೆ ಮಾಡಬೇಕೆಂಬ ಛಲ ಮುಡಿಸುತ್ತದೆ ಅಂತಹ ಸಾಧನೆಯನ್ನು ಮಾಡಿರುವ ಶೃತಿ ಪಾಂಡೆಗೆ ನಮ್ಮದೊಂದು ಸೆಲ್ಯೂಟ್.

 

loading...

LEAVE A REPLY

Please enter your comment!
Please enter your name here