ಚೋಪ್ರಾ ಟ್ರೌಫಿ ಕ್ರಿಕೆಟ್ ಪಂದ್ಯಾವಳಿ

0
15
loading...

ಮುನವಳ್ಳಿ 27: ಕಡು ಬಡವರು, ದೀನದಲಿತರು, ಆರ್ಥಿಕವಾಗಿ ಹಿಂದುಳಿದ  ಸವದತ್ತಿ ಕ್ಷೇತ್ರ ವ್ಯಾಪ್ತಿಯ 10 ಸಾವಿರ ಜನರನ್ನು ಗುರುತಿಸಿ ಅವರಿಗೆ ಜೀವ ವಿಮಾ ಮಾಡಿಸುವುದಾಗಿ ಬಸವದಳದ ಗೌರವ ಅಧ್ಯಕ್ಷ ಆನಂದ ಚೋಪ್ರಾ ತಿಳಿಸಿದರು. ಅವರು ಬೆಡಸೂರ ಗ್ರಾಮದಲ್ಲಿ ಜರುಗಿದ ಜೈ    ಹನುಮಾನ ಕ್ರಿಕೆಟ್ ಕ್ಲಬ್ ಹಾಗೂ ಆನಂದ ಚೋಪ್ರಾ ಟ್ರೌಫಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಭಾಗದಲ್ಲಿ           ಗೋವಿನಜೋಳ ಸಂಸ್ಕರಣ ಘಟಕ ಅವಶ್ಯವಾಗಿದ್ದು ಅದನ್ನು ಸ್ಥಾಪಿಸಿ ಇಲ್ಲಿಯ ಯುವಕರಿಗೆ ಉದ್ಯೌಗ ಕಲ್ಪಿಸಲು ಪ್ರಯತ್ನಿಸುವುದಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾದೇವಪ್ಪ ತುರಮರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಾವಿದ ರಾಜು ಬದಾಮಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಆನಂದ ಚೋಪ್ರಾ ಅವರು ಗ್ರಾಮದ ಯುವಕ ಮಂಡಳಗಳಿಗೆ ಝಾಂಜ್ ಪಥಕ್ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಬಟ್ಟೆ ವಿತರಿಸಿದರು.

 

loading...

LEAVE A REPLY

Please enter your comment!
Please enter your name here