ಬಿಎಸ್ಆರ್ ಕಾಂಗ್ರೆಸ್ ಸಭೆ

0
16
loading...

ಜಮಖಂಡಿ 31 : ಸ್ವಾಭಿಮಾನಿ ಶ್ರೀರಾಮುಲು ಅಭಿಮಾನಿಗಳ ಸಂಘ ಜಮಖಂಡಿ ತಾಲೂಕಾ ಘಟಕವು ಜುಲೈ 26 ರಂದು ನಗರದ ಎಸ್.ಆರ್.ಎ. ಕ್ಲಬ್ನಲ್ಲಿ ಬಿ.ಎಸ್.ಆರ್. (ಕಾಂಗ್ರೆಸ್) ಪಕ್ಷದ ಸಭೆ ನಡೆಸಿತು.

ಸಭೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ರಾಜು ಹಂಗರಗಿ ಮಾತನಾಡಿ, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಘಟನೆಯತ್ತ ಹೆಚ್ಚಿನ ಗಮನಹರಿಸಬೇಕು. ರಾಜ್ಯ ಸರಕಾರದ ವೈಫಲ್ಯವನ್ನು ಜನರ ಮುಂದಿಟ್ಟು ಮುಂಬರುವ ಚುನಾವಣೆಯಲ್ಲಿ ಮತದಾರರ ಮನವೊಲಿಸಬೇಕು ಎಂದರು.

ತಾಲೂಕಾ ಅಧ್ಯಕ್ಷ ಗಂಗಪ್ಪ ಮರದಾನಿ ಮಾತನಾಡಿ, ಗದಗದಲ್ಲಿ ಉಪವಾಸ ಸತ್ಯಾಗ್ರಹ, ತುಂಗಭದ್ರಾ ಆಣೆಕಟ್ಟಿನ ಹೂಳೆತ್ತುವ ಸಲುವಾಗಿ ನಿರಶನ, ಬಸವಕಲ್ಯಾಣದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡುವ ಮೂಲಕ ಶಾಸಕ ಶ್ರೀರಾಮುಲು ಜನಜಾಗೃತಿ ಮಾಡುತ್ತಿರುವುದು ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಬಿಎಸ್ಆರ್ ಪಕ್ಷಕ್ಕೆ ಬಹುಸಂಖ್ಯೆಯಲ್ಲಿ ಜನ ಸೇರ್ಪಡೆಗೊಳ್ಳಲಿದ್ದಾರೆ ಎಂದರು.

ಸಭೆಯಲ್ಲಿ ಮಂಜುನಾಥ ವಾಲಿಕಾರ, ಮಂಜು ಗಡೆಪ್ಪನವರ, ಶಿವಾನಂದ ಶಿಂಗೆ, ರಾಜು ನ್ಯಾಮಗೌಡ, ಮಲ್ಲಪ್ಪ ತೇರದಾಳ, ಲಕ್ಕಪ್ಪ ನಾಯಕ, ಶ್ರೀಶೈಲ ಚಿನಗುಂಡಿ, ಮಾರುತಿ ಸನದಿ, ತುಳಜಪ್ಪ ಕುಂಚನೂರ ಉಪಸ್ಥಿತರಿದ್ದರು ಎಂದು ತಾಲೂಕಾ ಅಧ್ಯಕ್ಷ ಗಂಗಪ್ಪ ಮರದಾನಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here