ವಾಣಿಜ್ಯ ಹೈನುಗಾರಿಕೆ ಘಟಕ ಸ್ಥಾಪನೆಗೆ ಸಹಾಯಧನ

1
56
loading...

ಕಾರವಾರ-8 : ಉತ್ತರ ಕನ್ನಡ ಜಿಲ್ಲೆಯ ಪಶುಪಾಲನಾ ಇಲಾಖೆಯಲ್ಲಿ 2012-13 ನೇ ಸಾಲಿನಲ್ಲಿ ರಾಷ್ಟ್ತ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ವಾಣಿಜ್ಯ ಹೈನುಗಾರಿಕೆ ಅಭಿವೃದ್ದಿ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದ್ದು, ಜಿಲ್ಲೆಗೆ ಒಟ್ಟು 11 ಘಟಕಗಳ ಗುರಿ ನಿಗದಿಯಾಗಿರುತ್ತದೆ.

ದಿನಕ್ಕೆ ಸರಾಸರಿ 70 ಲೀಟರ್ ಹಾಲು ಉತ್ಪಾದಿಸುವ ಗುರಿಯೊಂದಿಗೆ ಒಂದು ಹೈನುಗಾರಿಕೆ ಘಟಕ ( ಕನಿಷ್ಟ 10 ಹೈನುರಾಸುಗಳು) ಸ್ಥಾಪಿಸಲು ರೈತರಿಗೆ ರೂ. 1.00 ಲಕ್ಷ ಸಹಾಯಧನ ನೀಡಲಾಗುವುದು. ಘಟಕದ ವೆಚ್ಚ ರೂ. 6.00 ಲಕ್ಷವಿದ್ದು, ಇದರಲ್ಲಿ ರೂ. 1.00 ಲಕ್ಷ ಸಹಾಯಧನ ಹಾಗೂ ರೂ. 5.00 ಲಕ್ಷ ಬ್ಯಾಂಕಿನ ಸಾಲ/ಫಲಾನುಭವಿಗಳ ವಂತಿಗೆ ಸೇರಿರುತ್ತದೆ.

ಕನಿಷ್ಠ 2 ಎಕರೆ ನೀರಾವರಿ ಕೃಷಿ ಜಮೀನು ಅಥವಾ 5 ಎಕರೆ ಒಣ ಬೇಸಾಯ ಭೂಮಿ ಹೊಂದಿರುವ ಹಾಗೂ ಬ್ಯಾಂಕಿನಲ್ಲಿ ಸಾಲ ಪಡೆಯಲು ಅರ್ಹರಿರುವರು ರೈತರು/ ತಮ್ಮ ವಂತಿಗೆಯ ಮೂಲಕ ನೂತನ ಘಟಕ ಹೊಂದಲು ಇಚ್ಛೆಯುಳ್ಳ ರೈತರು ( ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಮಹಿಳೆಯರು, ಅಂಗವಿಕಲರು ಸೇರಿ) ಆಯಾ ತಾಲೂಕಿನ ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕರಿಂದ ಹೆಚ್ಚಿನ ಮಾಹಿತಿ ಪಡೆದು ದಿನಾಂಕ : 31-7-2012 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದೆಂದು ಪಶುಪಾಲನೆ ಹಾಗೂ ಪಶುವೈದ್ಯ ಇಲಾಖೆ ಉಪನಿರ್ದೆಶಕರು ತಿಳಿಸಿದ್ದಾರೆ.

 

loading...

1 COMMENT

  1. ನಾನು ಹೈನುಗಾರಿಕೆ ಮಾಡಬೇಕು ನಾನ್ನಗೆ ಬ್ಯಾಂಕ್ ಲೋನ್ ಕೊಡಿಸಿ ಸಹಾಯ ಮಾಡಿ

LEAVE A REPLY

Please enter your comment!
Please enter your name here