ಸಚಿವ ಆನಂದ್ ಸಿಂಗ್ಗೆ ಕಿಂಗ್ ಮಟ್ಟದ ಅದ್ದೂರಿ ಸ್ವಾಗತ

0
17
loading...

ಹೊಸಪೇಟೆ,ಜು.15: ತವರಿಗೆ ಆಗಮಿಸಿರುವ ಸಚಿವ ಆನಂದ್ ಸಿಂಗ್ ಅವರಿಗೆ ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

ಟಿ.ಬಿ.ಡ್ಯಾಂ. ವೃತ್ತದಿಂದ ಹೊರಟ ಮೆರವಣಿಗೆಯು ನಗರದ ಸಾಯಿಬಾಬಾ ವೃತ್ತದ ಮೂಲಕ ವಾಲ್ಮೀಕಿ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆಯ ಮೂಲಕ ಬಿಜೆಪಿ ಕಚೇರಿಯನ್ನು ಸೇರಿತು.

ಮೆರವಣಿಗೆಯಲ್ಲಿ ರಂಡೋಲು, ಡೊಳ್ಳು, ಹಲಗೆ, ಹಗಲು ವೇಷ, ನಂದಿಕೋಲು, ಮರಗಾಲು ಕುಣಿತ ಗಮನ ಸೆಳೆದವು. ಕೇರಳದ ವಾದ್ಯವೃಂದವು ಗಮನ ಸೆಳೆಯಿತು.

ನೂತನ ಸಚಿವರನ್ನು ಆರತಿ ಎತ್ತಿ ಸ್ವಾಗತಿಸಿದ ಮುತ್ತೈದೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಗರಸಭೆ ಹಾಗೂ ತಾಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಸದಸ್ಯರು, ವಿವಿಧ ಸಮಾಜದ ಮುಖಂಡರು ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಗೆ ರಂಗು ತುಂಬಿದರು. ಅಭಿಮಾನಿಗಳ ಪಟಾಕಿ ಸಿಡಿಸಿ ಸಂಭ್ರಮಿಸಿದರು.

 

loading...

LEAVE A REPLY

Please enter your comment!
Please enter your name here